ಬಳ್ಳಾರಿ ಜೂ.24 : ಶ್ರೀಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠಕ್ಕೆ ಐದುನೂರು ವರ್ಷಗಳ ಭವ್ಯ ಇತಿಹಾಸವಿದ್ದು, ಶ್ರೀಮಠದ ಗುರುಪರಂಪರೆಯಲ್ಲಿ ಆಗಿಹೋದ ಎಲ್ಲ ಶ್ರೀಗಳವರಿಗಿಂತ, ತ್ರಿವಿಧದಾಸೋಹಿ, ಕಾಯಕಯೋಗಿ ಪೂಜ್ಯಶ್ರೀ ಜಗದ್ಗುರು ಡಾ.ಸಂಗನಬಸವ ಮಹಾಶಿವಯೋಗಿಗಳವರ ಐವತ್ತು ವರ್ಷಗಳ ಅಧಿಕಾರಾವಧಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹುದು. ಪೂಜ್ಯರು ಮೂಲಮಠ ಮತ್ತು ಶಾಖಾ ಮಠಗಳನ್ನು ಅಮೂಲಾಗ್ರ ಅಭಿವೃದ್ಧಿಯನ್ನು ಮಾಡಿದ ಪಾವನಚರಿತರು. ಹೊಸಪೇಟೆ-ಬಳ್ಳಾರಿ ಶ್ರೀಮಠದ ಅಧಿಕಾರಿದೊಂದಿಗೆ, ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಜವಾಬ್ದಾರಿಯನ್ನು ಹಾಗೂ ಶ್ರೀಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆಯ ಹೊಣೆಗಾರಿಕೆಯನ್ನು ಪಡೆದುಕೊಂಡು ಎಲ್ಲವನ್ನು ಸಮರ್ಥವಾಗಿ ಮುನ್ನಡೆಸಿ, ಎಲ್ಲ ಮಠಗಳಿಗೆ ನ್ಯಾಯವನ್ನು ಒದಗಿಸಿದ ಕಾಯಕಯೋಗಿಗಳು.
ಪೂಜ್ಯಗುರುಗಳು ಲಿಂಗೈಕ್ಯರಾಗುವ ಕೆಲವರ್ಷಗಳ ಮುನ್ನ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹಾಗೂ ಹಾಲಕೆರೆ ಶ್ರೀಮಠಕ್ಕೆ ನಮ್ಮನ್ನೂ ಮತ್ತು ಶಾಖಾಮಠಗಳಿಗೆ ಶಿವಯೋಗಮಂದಿರ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಸಮರ್ಥ ಉತ್ತರಾಧಿಕಾರಿಗಳನ್ನು ನಿಯುಕ್ತಿಗೊಳಿಸಿದ್ದು, ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಇದೀಗ ತಾನೆ ಜರುಗಿದ ದರೂರು ಶ್ರೀ ಸಂಗನವೇಶ್ವರ ವಿರಕ್ತಮಠಕ್ಕೆ ಪೂಜ್ಯ ಗುರುಗಳ ಸಂಕಲ್ಪದಂತೆ ಭಕ್ತರ ಆಶಯದಂತೆ ಪೂಜ್ಯಶ್ರೀ ಕೊಟ್ಟೂರು ದೇಶಿಕರ ನಿರಂಜನ ಚರಪಟ್ಟಾಧಿಕಾರಿವನ್ನು ಜರುಗಿಸಿ ಆ ಮಠದ ಅಧಿಕಾರವನ್ನು ಅವರಿಗೆ ವಹಿಸಿಕೊಡಲಾಗಿದೆ. ಇನ್ನೂ ಉಳಿದ ಶಾಖಾ ಮಠಗಳಲ್ಲೂ ಧಾರ್ಮಿಕ, ಸಾಂಸ್ಕøತಿಕ, ಸಾಹಿತ್ಯಕ ಕಾರ್ಯಕಲಾಪಗಳು ಯಥೇಚ್ಚವಾಗಿ ಜರುಗಬಾಕಾಗಿದ್ದರಿಂದ ಗುರುಗಳು ನೇಮಕ ಮಾಡಿದ ಎಲ್ಲ ಉತ್ತರಾಧಿಕಗಳಿಗೆ ಆಯಾ ಮಠದ ಜವಾಬ್ದಾರಿಯನ್ನು ನೀಡಬೇಕಾಗಿದೆ ಎಂದರು. ಆದ್ದರಿಂದ ದಿನಾಂಕ 26.06.2022ರ ರವಿವಾರ ಮುಂಚಾನೆ 10:30ಗಂಟೆಗೆ ಬಳ್ಳಾರಿ ಶ್ರೀಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದಲ್ಲಿ ಶ್ರೀಮಠಗಳ ಎಲ್ಲಾ ಶಾಖಾಮಠಗಳ ಸದ್ಭಕ್ತರ ಸಭೆಯನ್ನು ಕರೆಯಲಾಗಿದ್ದು, ಶ್ರೀಮಠದ ಅಭಿಮಾನಿಗಳಾದ ತಾವುಗಳು ಶಾಖಾ ಮಠಗಳ ಪೂಜ್ಯ ಉತ್ತರಾಧಿಕಾರಿಗಳಿಗೆ ಜವಾಬ್ದಾರಿ ನೀಡುವ ಈ ಪವಿತ್ರ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಪೂಜ್ಯಗುರುಗಳು ಕೃಪೆಗೆ ಪಾತ್ರರಾಗುವಿರಿ ನಂಬಿದ್ದೇವೆ.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವವರು : ಶ್ರೀ ಮ.ನಿ.ಪ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು, ಬಳ್ಳಾರಿ -ಹೊಸಪೇಟೆ-ಹಾಲಕೆರೆ, ಸಾಲಿ ಸಿದ್ದಯ್ಯಸ್ವಾಮಿ, ಕಾರ್ಯದರ್ಶಿಗಳು, ಕೊಟ್ಟೂರುಸ್ವಾಮಿ ಕಲ್ಯಾಣಕೇಂದ್ರ, ಬಳ್ಳಾರಿ - ಹೊಸಪೇಟೆ, ಗುರುಸಿದ್ದಯ್ಯಸ್ವಾಮಿ, ಅಧ್ಯಕ್ಷರು ವಿ.ವಿ.ಸಂಘ ಬಳ್ಳಾರಿ. ಗೋನಾಹಾಳು ವೀರುಪಾಕ್ಷಿ ಗೌಡರು ವೀರಶೈವ ಮುಖಂಡರು, ದರೂರು ಪುರುಷೋತ್ತಮ ಗೌಡರು ಜಿಲ್ಲಾಧ್ಯಕ್ಷರು ತುಂಗಭದ್ರ ರೈತ ಸಂಘ, ಎಸ್.ಮಲ್ಲನಗೌಡ ಮಾಜಿ ಮ.ಪ ಸದಸ್ಯರು ಬಳ್ಳಾರಿ, ಜಡೇಗೌಡ ಸೋಮಸಮುದ್ರ, ಪುರುಷೋತ್ತಮ ಗೌಡ ಸೋಮಸಮುದ್ರ, ಮುಷ್ಟಗಟ್ಟೆ ಭೀಮನಗೌಡ, ಮದರೆ ಕುಮಾರಸ್ವಾಮಿ, ವೀರನಗೌಡ ಶ್ರೀಧರಗಡ್ಡೆ, ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ ವಕೀಲರು ಬಳ್ಳಾರಿ ಮುಂತಾದವರು ಭಾಗವಹಿಸಿದ್ದರು.

0 Comments