Ticker

6/recent/ticker-posts

Ad Code

Responsive Advertisement

ಅನಧಿಕೃತ ಫಲಕಗಳ ತೆರವಿಗೆ 10 ದಿನಗಳ ಗಡುವು ನೀಡಿದ ಪ್ರಾದೇಶಿಕ ಸಾರಿಗೆ ಇಲಾಖೆ

ವಾಹನಗಳ ಮೇಲಿನ ಅನಧೀಕೃತ ಫಲಕಗಳು ತೆರವುಗೊಳಿಸದಿದ್ದಲ್ಲಿ ಕಾರ್ಯಾಚರಣೆ ನಡೆಸಿ ಮಾಲೀಕರ ವಿರುದ್ಧ ಪ್ರಕರಣ ದಾಖಲು: ಆರ್‍ಟಿಒ ಎನ್.ಶೇಖರ್ ಎಚ್ಚರಿಕೆ

ಬಳ್ಳಾರಿ,ಜೂ. 04: ಬಳ್ಳಾರಿ ವಾಹನಗಳ ನೋಂದಣಿ ಮತ್ತು ಸಂಖ್ಯಾ ಫಲಕಗಳ ಮೇಲೆ ನಿಯಮ ಬಾಹಿರವಾಗಿ ಹಾಕಿರುವ ಸಂಘ ಸಂಸ್ಥೆಯ ಚಿಹ್ನೆ ಸರಕಾರದ ಲಾಂಛನ ತೆರವುಗೊಳಿಸಲು ಬಳ್ಳಾರಿ ಸಾರಿಗೆ ಇಲಾಖೆಯು 10 ದಿನಗಳ ಗಡವು ನೀಡಿದ್ದು, ಕಾನೂನು ಬಾಹಿರವಾಗಿ ಹಾಕಲಾಗಿರುವ ಲಾಂಛನ ಹಾಗೂ ಚಿಹ್ನೆಗಳನ್ನು ತೆರವುಗೊಳಿಸಿಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಎನ್.ಶೇಖರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸರಕಾರಿ ಸ್ವಾಮ್ಯದ ಸಂಸ್ಥೆಗಳ ಮತ್ತು ಸ್ವಂತ ವಾಹನಗಳ ಮೇಲೆ ಅನಧಿಕೃತವಾಗಿ ಸರಕಾರದ ಲಾಂಛನ, ರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗದ ಹೆಸರುಗಳನ್ನು ಹೋಲುವಂತೆ ಹೊಂದುವ ಹೆಸರುಗಳನ್ನು ಮತ್ತು ಫಲಕಗಳನ್ನು ತೆರವುಗೊಳಿಸಬೇಕೆಂದು 2022ರ ಜನವರಿಯಲ್ಲಿ ಹೈಕೋರ್ಟ್ ಅದೇಶ ನೀಡಿದೆ.

ಈ ರೀತಿಯ ಫಲಕಗಳನ್ನು ತೆರವುಗೊಳಿಸದಿದ್ದರೆ ನ್ಯಾಯಂಗ ನಿಂದನೆ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅವರು ಸಹ ಎಚ್ಚರಿಕೆಯನ್ನು ನೀಡಿದ್ದು, ವಾಹನಗಳ ಮಾಲೀಕರು ಸ್ವಯಂಪ್ರೇರಿತವಾಗಿ ಫಲಕಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಕಾರ್ಯಾಚರಣೆ ನಡೆಸಿ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇಂತಹ ವಾಹನಗಳು ಕಂಡುಬಂದಲ್ಲಿ ಸಾರ್ವಜನಿಕರು ಚಿತ್ರಸಹಿತ ಛಾಯಚಿತ್ರವನ್ನು ವಾಟ್ಸ್‍ಆಪ್ ನಂ-ಮೊ.9449864034, ಮತ್ತು  ಮೊ.9449863459ಗೆ  ದೂರು ನೀಡಬಹುದು ಎಂದು ಸಾರಿಗೆ ಅಯುಕ್ತರಾದ ಟಿ.ಹೆಚ್.ಎಂ.ಕುಮಾರು ಅವರು ತಿಳಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.





 


Post a Comment

0 Comments

Ad Code

Responsive Advertisement