ಬಳ್ಳಾರಿ ಮೇ 12. ಕಂಪ್ಲಿ ಶಾಸಕ ಗಣೇಶ್ ಏಕಪಕ್ಷೀಯ ನಿರ್ಣಯಕ್ಕೆ ಜನರು ಮತ್ತು ಜನ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ (ಕುರುಗೋಡು)ಆಶ್ರಯ ವಸತಿ ಯೋಜನೆಯಲ್ಲಿ ಫಲಾನುಭವಿಗಳ ಅಯ್ಕೆ ಪ್ರಕ್ರಿಯೆ ದಲ್ಲಿ ತಾರತಮ್ಯವನ್ನು ಮಾಡಿ, ಪಟ್ಟಣದಲ್ಲಿ ಗಲಾಟೆಗಳು ಸೃಷ್ಟಿ ಮಾಡುತ್ತಾ ಇದ್ದಾರೆ ಎಂದು, ಬಿಜೆಪಿ, ಕಾಂಗ್ರೆಸ್‍ನ ಪುರಸಭೆ ಸದಸ್ಯರು ಆರೋಪ ಮಾಡಿದ್ದಾರೆ. 75 ಮಂದಿಗೆ ಅಯ್ಕೆ ಮಾಡಿರುವ ಪಟ್ಟಿಯನ್ನು ನಿಲ್ಲಿಸಬೇಕು, ಮತ್ತೊಮ್ಮೆ ಮೀಟಿಂಗ್ ಕರೆದು ಅರ್ಹ ಫಲಾನಭವಿಗಳುಗೆ ಹಂಚಿಕೆ ಮಾಡಬೇಕು, ಪುರಸಭೆ ಸದಸ್ಯರ ಎಲ್ಲರ ಸಹಮತ ಪಡೆಯಬೇಕು ಎಂದು ಬುದವಾರ ಕಾಂಗ್ರೆಸ್‍ನ, ಬಿಜೆಪಿ ಸದಸ್ಯರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯರು ಬಿಜೆಪಿ ಪಕ್ಷದ ಮುಖಂಡರು,ನಾವು ಯಾರು ನಮ್ಮ ಪಕ್ಷದ ಅವರಿಗೆ ಕೊಡಿ ಎಂದು ಡಿಮಾಂಡ್ ಮಾಡುತ್ತಿಲ್ಲ. 23 ವಾರ್ಡ್ ಸದಸ್ಯರಲ್ಲಿ 7 ಬಿಜೆಪಿ ಸದಸ್ಯರಿದ್ದಿವಿ. ನಮ್ಮ ವಾರ್ಡ್ ಗಳಲ್ಲಿ ಕೂಡ ಬಡಜನರು ಇದ್ದಾರೆ. ಶಾಸಕರಿಗೆ ಎಲ್ಲರು ಮತ ಹಾಕಿದ್ದಾರೆ, ಪಾರದರ್ಶಕ ವಾಗಿ ಅರ್ಹರಿಗೆ ಕೊಡಲಿ ಎಂದರು. ಈಹಿಂದೆ ಶಾಸಕರು ಆಗಿದ್ದ ಸುರೇಶ್ ಬಾಬು, ಇಂತಹ ಏಕಪಕ್ಷೀಯ ನಿರ್ಣಯ ಮಾಡಿಲ್ಲ, ಎಲ್ಲರ ಸಹಮತ ಪಡೆದು, ಪಕ್ಷ ಬೇದ ಇಲ್ಲದೆ ಅರ್ಹರಿಗೆ ಹಂಚಿಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಶಾಸಕ ಗಣೇಶ್ ಕಾಂಗ್ರೆಸ್‍ನ ಸದಸ್ಯರು ಹೇಳಿರುವ ಅವರಿಗೆ ಮನ್ನಣೆ ಹಾಕಿದ್ದಾರೆ,ಇದು ಶಾಸಕರ ಘನತೆ ಗೆ ದಕ್ಕೆ ಆಗುತ್ತದೆ ಅಂದರು. ನಾವು ರಾಜ್ಯದಲ್ಲಿ ಅಡಳಿತ ಪಕ್ಷದಲ್ಲಿ ಇದ್ದೀವಿ,ಗಣೇಶ್‍ನಂತೆ ಮಾಡಬೇಕು ಅಂದರೆ ಸಾಕಷ್ಟು ಇದ್ದಾವೆ, ನಾವು ಅಭಿವೃದ್ಧಿ ಜನರ ಪರವಾಗಿ ಕೆಲಸ ಮಾಡೋ ಮನೋಭಾವ ನಮ್ಮ ನಾಯಕರು ಸುರೇಶ್ ಬಾಬು ಅವರಿಗೆ ನಮಗೆ ಇದೆ ಎಂದರು. ವಿನಾಕಾರಣ ಗೊಂದಲೆ ಸೃಷ್ಟಿ ಮಾಡಿ ಗ್ರಾಮಗಳಲ್ಲಿ ವೈಷಮ್ಯ ಗಳು ಸೃಷ್ಟಿ ಮಾಡಬಾರದು,ಎಂದು ಆಗ್ರಹಿಸಿದರು.
ತಕ್ಷಣವೇ ಆಡಳಿತ ಅಧಿಕಾರಿಗಳು ಅಗಿರವ ಸಹಾಯಕ ಆಯುಕ್ತರು ಪರಿಶೀಲನೆ ಮಾಡಬೇಕು, ಇಲ್ಲದಿದ್ದರೆ ಪುರಸಭೆ ಮುಂದೆ ಧರಣಿ ಮಾಡಬೇಕು ಆಗುತ್ತದೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಾಧಿಕಾರಿಗಳು ಪರಶುರಾಮ ಮಾತನಾಡಿ 158 ಅರ್ಜಿಗಳು ಬಂದಿದ್ದು, ಅದರಲ್ಲಿ 75ಮಂದಿ ಪಟ್ಟಿಯನ್ನು ಶಾಸಕರು ಫೈನಲ್ ಮಾಡಿದ್ದಾರೆ, ಎರಡು ಕ್ಯಾನ್ಸಲ್ ಆಗಿದ್ದಾವೆ ಅಂದರು. ಪೂರ್ತಿ ಪಟ್ಟಿಯನ್ನು ಆಯುಕ್ತರುಗೆ ಸಲ್ಲಿಸಲಾಗುತ್ತದೆ, ಅವರ ಆದೇಶ ಅಂತೆಯೇ ಪಾಲನೆ ಮಾಡಬೇಕು ಆಗುತ್ತದೆ ಎಂದರು. ಆಯ್ಕೆ ಮಾಡಿದ ನಾಯಕರುಗಳು ಪ್ರತಿ ಫಲಾನಭವಿಗಳ ಹತ್ತಿರ 25-30 ಸಾವಿರಗಳು ಹಣವನ್ನು ಪಡೆದಿದ್ದಾರೆ ಅನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ, ವಾಸ್ತವಿಕ ಬಯಲಿಗೆ ಬರಬೇಕು ಆಗಿದೆ.

0 Comments