Ticker

6/recent/ticker-posts

Ad Code

Responsive Advertisement

ಬಳ್ಳಾರಿಯ ಆಸ್ತಿಗಳ ಡಿಜಿಟಲೀಕರಣ ಆನ್ ಲೈನ್‍ನಲ್ಲಿ ಮಾಹಿತಿ-ಪ್ರೀತಿ ಗೆಹ್ಲೋಟ್

ಬಳ್ಳಾರಿ ಮೇ 12 :ಬಳ್ಳಾರಿ ನಗರದ ಎಲ್ಲಾ ಆಸ್ತಿಗಳ ಡಿಜಿಟಲೀಕರಣ ಮತ್ತು ಅದನ್ನು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲು ಆನ್ ಲೈನ್ ನಲ್ಲಿ ಅಳವಡಿಸಲಿದೆ. ಈ ಕಾರ್ಯ ಬರುವ ಆರು ತಿಂಗಳಲ್ಲಿ ಮಾಡುವುದಾಗಿ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಹೇಳಿದ್ದಾರೆ. ಪಾಲಿಕೆಯಲ್ಲಿ ಮೇಯರ್ ರಾಜೇಶ್ವರಿ ಅವರೊಂದಿಗೆ ಸುದ್ದಿಗೋಷ್ಟಿ ನಡೆಸಿ ನಗರದಲ್ಲಿ ಖಾಲಿ ನಿವೇಶನ ಸೇರಿ  1.25 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಆದರೆ ಆ ಮಟ್ಟದಲ್ಲಿ ಮಾಲೀಕರು ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಅಲ್ಲದೆ ಪಾವತಿ ಮಾಡುವವರು ಸಹ ಆಸ್ತಿಯ ಸಂಪೂರ್ಣ ಭಾಗವನ್ನು ಉಲ್ಲೇಖಿಸುತ್ತಿಲ್ಲ. ಅದಕ್ಕಾಗಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಆದಾಯ ಕಂಡುಕೊಳ್ಳಬೇಕಾದರೆ ಆಸ್ತಿಗಳ ಡಿಜಟಲೀಕರಣ ಅವಶ್ಯವಾಗಿದೆ. ಈ ಕಾರ್ಯ ನಡೆಸಲು  ಖಾಸಗೀ ಎಜೆನ್ಸಿಗೆ ನೀಡಿದೆ ಎಂದರು. 

ಕಳೆದ 2021-22 ನೇ ಸಾಲಿನಲ್ಲಿ 28 ಕೋಟಿ ರೂಗಳ ಆಸ್ತಿ ತೆರಿಗೆ ವಸೂಲಿ ಗುರಿಗೆ ಶೇ 95 ರಷ್ಟು ವಸೂಲಿ ಮಾಡಿದೆಂದರು. ಈ ವರ್ಷ ಆಸ್ತಿ ತೆರಿಗೆ ವಸೂಲಿಯ ಗುರಿಯನ್ನು 32 ಕೋಟಿ ರೂಗಳಿಗೆ ಹೊಂದಲಾಗಿದೆ. ನೀರಿನ ತೆರಿಗೆ 18 ಕೋಟಿ ರೂ ವಸೂಲಿ ಗುರಿಗೆ 16 ಕೋಟಿ ರೂ ಸಂಗ್ರಹಿಸಿದೆ. ಯುಜಿಡಿ ತೆರಿಗೆ ಸಂಗ್ರಹ ಒಂದಿಷ್ಟು ಕಡಿಮೆ ಇದೆ. ಇದರಲ್ಲಿ ಶೇ 68 ರಷ್ಟು ಸಂಗ್ರಹವಾಗಿದೆಂದರು. ಕಸ ವಿಲೇವಾರಿಯ ತೆರಿಗೆ ಸಂಗ್ರಹದಲ್ಲಿ 2.98 ಕೋಟಿ ರೂಗಳ ಗುರಿಗೆ 2.76 ಕೋಟಿ ರೂ ಸಂಗ್ರಹವಾಗಿದೆಂದರು. 

ಪಾಲಿಕೆಯ ಕಾಮಗಾರಿಯನ್ನು ನಿಗಧಿತ ಅವಧಿಯಲ್ಲಿ ಮುಗಿಸದ, ಗುಣಮಟ್ಟ ಕಳಪೆ ಮಾಡಿದ ಐದು ಜನ ಗುತ್ತಿಗೆದಾತರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲು ಶಿಫಾರಸು ಮಾಡಿದೆಂದು ಹೇಳಿದರು. 

ನಗರದಲ್ಲಿನ ಆಯಾ ವಾರ್ಡ್‍ಗಳಲ್ಲಿನ ಸಮಸ್ಯೆ, ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಪಾಲಿಕೆಗೆ ಮಾಹಿತಿ ನೀಡಲು ಆಯಾ ವಾರ್ಡಿನ ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿ ಹತ್ತು ಜನರ ವಾರ್ಡ್ ಸಮಿತಿ ರಚನೆ ಮಾಡಲು ನಿರ್ಧರಿಸಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಈ ರೀತಿಯ ಸಮಿತಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆಸಕ್ತ ಆಯಾ ವಾರ್ಡಿನಲ್ಲಿನ ಜನರು ಸದಸ್ಯರಾಗಬಹುದು ಎಂದರು. 



 

Post a Comment

0 Comments

Ad Code

Responsive Advertisement