Ticker

6/recent/ticker-posts

Ad Code

Responsive Advertisement

ಸಾರ್ವಜನಿಕ ಆಡಳಿತದಲ್ಲಿ ಸುಧಾರಣೆ , ಸರ್ಕಾರಿ ನೌಕರರ ಪಾತ್ರ " ಕುರಿತು ಉಪನ್ಯಾಸ ನೀಡಿದ ನ್ಯಾ. ಬಿ.ಎಸ್ . ಪಾಟೀಲ್

ಕರ್ನಾಟಕರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಇಂದು ದಿನಾಂಕ: 10-05-2022ರಂದು ಮಂಗಳವಾರ  ಬೆಳಿಗ್ಗೆ 11.00 ಗಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣ, ಕಬ್ಬನ್‍ಉದ್ಯಾನವನ, ಬೆಂಗಳೂರು-01 ಇಲ್ಲಿ“ಸಾರ್ವಜನಿಕ ಆಡಳಿತದಲ್ಲಿ ಸುಧಾರಣೆ, ಸರ್ಕಾರಿ ನೌಕರರ ಪಾತ್ರ”ಕುರಿತು‘ವಿಚಾರ ಸಂಕಿರ’ಣವನ್ನುಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಲೋಕಾಯುಕ್ತರಾದ ನ್ಯಾಯಮೂರ್ತಿಬಿ.ಎಸ್. ಪಾಟೀಲ್‍ರವರು ಸಂಘದಎಲ್ಲಾ ಹಂತದಚುನಾಯಿತ ಪದಾಧಿಕಾರಿಗಳಿಗೆ ಉಪನ್ಯಾಸ ನೀಡಿದರು. 




ಪ್ರಾಸ್ತವಿಕವಾಗಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರು ಮಾತನಾಡುತ್ತಾ ಸಂಘಟನೆ ಹೋರಾಟ ಮತ್ತು ಹಕ್ಕು ಬೇಡಿಕೆಗಳಷ್ಟೇ ಸಂಘದ ವಸ್ತು ವಿಷಯಗಳನ್ನಾಗಿ ಒಳಗೊಳ್ಳುವುದಿಲ್ಲ ಸರಕಾರಿ ನೌಕರರು ಕ್ರಿಯಾಶೀಲರಾಗಿ ಸಾರ್ವಜನಿಕ ಸೇವೆಯಲ್ಲಿಉತ್ತಮ ಆಡಳಿತವನ್ನು ಮತ್ತು ಸೇವೆಯನ್ನು ನೀಡುವುದು ಕೂಡ ಒಂದು ಜವಾಬ್ದಾರಿಯುತ ಕರ್ತವ್ಯವೆಂದು ತಿಳಿಸಿದರು. ಇಂತಹ ಪುನಶ್ಚೇತನಗೊಳಿಸುವ ಕಾರ್ಯಗಾರಗಳನ್ನು ತಾಲೂಕು ಮತ್ತುಜಿಲ್ಲಾ ಹಂತ ಹಾಗೂ ರಾಜ್ಯ ಮಟ್ಟದಲ್ಲಿ ಏರ್ಪಡಿಸಿ ನುರಿತತಜ್ಞರಿಂದ ಮತ್ತು ನ್ಯಾಯಮೂರ್ತಿಗಳಿಂದ ವಿಚಾರಸಂಕಿರಣಗಳನ್ನು ಏರ್ಪಡಿಸುವುದರ ಮೂಲಕ ಕಾನೂನಾತ್ಮಕಅರಿವನ್ನು  ಸರ್ಕಾರಿ ನೌಕರರಲ್ಲಿ ಮೂಡಿಸಿ ಸರ್ಕಾರಿ ನೌಕರರ ಸೇವೆ ಮತ್ತುಕರ್ತವ್ಯದಲ್ಲಿ ಮತ್ತು ಪ್ರಾಮಾಣಿಕ ಸೇವೆಯನ್ನುಜನರಿಗೆ ನೀಡುವಂತೆ ಮಾಡುವುದು ಈ ಕಾರ್ಯಕ್ರಮದಉದ್ದೇಶಎಂದು ತಿಳಿಸಿದರು. 

ಕರ್ನಾಟಕ ಲೋಕಾಯುಕ್ತರಾದಗೌರವಾನ್ವಿತ ನ್ಯಾಯಮೂರ್ತಿಬಿ.ಎಸ್. ಪಾಟೀಲ್‍ರವರು ಉಪನ್ಯಾಸ ನೀಡುತ್ತಾ,  ನ್ಯಾಯದಾನದಲ್ಲಿ ನ್ಯಾಯ ವ್ಯವಸ್ಥೆಯಲ್ಲಿ ಜವಾಬ್ದಾರಿಯುತ ಸ್ಥಾನ ಹೇಗಿದೆಯೋ ಹಾಗೇ ಸರ್ಕಾರಿ ಸೇವೆಯಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರನೂಕೂಡ ಶ್ರೀಸಾಮಾನ್ಯನಿಗೆ ಸೌಲಭ್ಯಗಳನ್ನು ನೀಡುವಲ್ಲಿಸದೃಡವಾದ ಮನಸ್ಸು ವ್ಯಕ್ತಿತ್ವವನ್ನುಹೊಂದಿರಬೇಕೆಂದರು.

ಹೊಂದಿರಬೇಕೆಂದರು. ಬದಲಾವಣೆ ನೌಕರರಿಂದಲೇ ಸಾಧ್ಯ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಟ್ಟರು ಪ್ರತಿಯೊಬ್ಬರಿಗೂಕೂಡಆತ್ಮಶಕ್ತಿಆತ್ಮಸಾಕ್ಷಿಗೆಅನುಗುಣವಾಗಿ ಕೆಲಸ ಮಾಡಬೇಕು ಮತ್ತು ಶ್ರೇಷ್ಠತೆಯನ್ನು ಮೆರೆಯಬೇಕುತಾವು ಹೊಂದಿರುವ ಹುದ್ದೆಯ ಸ್ಥಾನಕ್ಕೆ ಹೆಚ್ಚು ಗೌರವವನ್ನುತಂದು ಕೊಳ್ಳಬೇಕು. ಕಾನೂನನ್ನುತಪ್ಪದೆ ಪಾಲಿಸಿ ತಮ್ಮಕರ್ತವ್ಯದಲ್ಲಿ ಯಶಸ್ವಿಯನ್ನು ಕಂಡುಕೊಳ್ಳಬೇಕೆಂಬುದು  ತಿಳಿಸಿಕೊಟ್ಟರು. ಕಾಯಕವೇಕೈಲಾಸವಾದ ಕಾರಣ ಮಾನವೀಯತೆಇರಬೇಕು ಭ್ರμÁ್ಟಚಾರರಹಿತ ಸೇವೆಯೇ ಪವಿತ್ರ ಸೇವೆ ಎಂದುಎಲ್ಲ ನೌಕರರಿಗೆ ತಿಳುವಳಿಕೆ ನೀಡಿದರು. ಜನಸಾಮಾನ್ಯನಿಗೆ ನೀಡಬಹುದಾದಂತಹ ಸೌಲಭ್ಯಗಳನ್ನು ಮೂಲಕ ದೇವರ ಪ್ರತಿನಿಧಿಗಳು ನಾವು ಎಂದು ಭಾವಿಸಿಕೊಂಡು ಆಗಮಾತ್ರ ಪ್ರತಿಯೊಬ್ಬ ಸರ್ಕಾರಿ ನೌಕರನು ಸರ್ಕಾರದಲ್ಲಿಅತ್ಯಂತ ಪ್ರಾಮಾಣಿಕವಾಗಿದುಡಿಯಲು ಸಾಧ್ಯವಾಗುತ್ತದೆಎಂದರು.  ನಿವೃತ್ತಿಯ ವಯಸ್ಸಿನ ಅಂಚಿನಲ್ಲಿ ಹೆಮ್ಮೆಯಿಂದ ಸಿಂಹವಲೋಕನ ಮಾಡಿಕೊಳ್ಳುವಾಗ ನಿಮ್ಮ ಸೇವೆ ಬಗ್ಗೆ ನಿಮಗೆ ಹೆಮ್ಮೆ ಮೂಡುವಂತೆಇರಲಿ ಎಂದರು. ಪ್ರತಿಯೊಬ್ಬ ಸರ್ಕಾರಿ ನೌಕರರುಉತ್ತಮದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹೊಂದಲು ಕಿವಿಮಾತು ಹೇಳಿದರು.  ಕರ್ತವ್ಯದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗದಿದ್ದರ ಸಂಕಷ್ಟಕ್ಕೆ ಸಿಲುಕುವುದು ಸಹಜಅಂತಹ ಸಂದರ್ಭದಲ್ಲಿಯಾರುರಕ್ಷಿಸಲು ಸಾಧ್ಯವಿಲ್ಲ ಆದಕಾರಣ ನಿಯಮಗಳ ಪಾಲನೆ ಹಿರಿಯ ಅಧಿಕಾರಿಗಳ ಆದೇಶ ಮೊದಲ ಆದ್ಯತೆಯಾಗಬೇಕುಎಂದರು.  

ಕರ್ತವ್ಯ ಪ್ರಾಮಾಣಿಕತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಉತ್ತೇಜನ ನೀಡಿದರು ಸರ್ಕಾರಿ ನೌಕರರಾಗಿರುವ ನಿಮ್ಮೆಲ್ಲರದು  ಶ್ರೇಷ್ಠ ಬದುಕಾಗಿದೆಇದಕ್ಕೆ ನ್ಯಾಯವನ್ನು ಒದಗಿಸುವುದರ ಮೂಲಕ ಸರ್ಕಾರ ಹಾಗೂ ಅಂಗ ಸಂಸ್ಥೆಗಳಲ್ಲಿ ಅತ್ಯಂತ ಪ್ರಮುಖ ಮತ್ತು ಪರಿಣಾಮಕಾರಿ ಅಂಗದಲ್ಲಿರುವ ಅಂತಹ ನೀವು ಜನರಿಗೆ ಹತ್ತಿರವಾದವರು ಮತ್ತುಜನರೊಡನೆ ನೇರವಾಗಿಇರುವಂಥವರು ನಿಮ್ಮಿಂದಲೇಜನರಕಲ್ಯಾಣ ಸಾಧ್ಯವಾಗುತ್ತದೆ ಎಂಬ ಭರವಸೆಯನ್ನು ತಿಳಿಸುತ್ತಾ ಸರ್ಕಾರಿ ನೌಕರರನ್ನು ಪುನಶ್ಚೇತನಗೊಳಿಸಿದರು. 

ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ ಷಡಾಕ್ಷರಿರವರು ಹೃತ್ಪೂರ್ವಕ ಧನ್ಯವಾದಗಳನ್ನು ನ್ಯಾಯಮೂರ್ತಿಗಳಿಗೆ ಸಲ್ಲಿಸಿದರು. ಶ್ರೀಯುತರು ನೀಡಿರುವಅಮೂಲ್ಯ ಸಲಹೆಗಳನ್ನು ಮಾರ್ಗದರ್ಶನವನ್ನು ಚಾಚೂ ತಪ್ಪದೇಎಲ್ಲರೂ ಪಾಲಿಸೋಣಎಂದು ತಿಳಿಸಿದರು. 


Post a Comment

0 Comments

Ad Code

Responsive Advertisement