Ticker

6/recent/ticker-posts

Ad Code

Responsive Advertisement

ಆನ್ ಲೈನ್ ಮೂಲಕ ಕಲಾವಿದರ ದತ್ತಾಂಶ ಸಂಗ್ರಹ

ಬೆಂಗಳೂರು, ಮೇ 13, (ಕರ್ನಾಟಕ ವಾರ್ತೆ) : ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಕಲಾವಿದರ ದತ್ತಾಂಶ ಸಂಗ್ರಹವನ್ನು ಆನ್ ಲೈನ್ ಮೂಲಕ ನೊಂದಾಯಿಸುವ ಯೋಜನೆಯನ್ನು ಈಗಾಗಲೇ ಲೋಕಾರ್ಪಣೆಗೊಳಿಸಲಾಗಿದೆ.

ಯಕ್ಷಗಾನ ಕಲಾವಿದರ, ದತ್ತಾಂಶ ಸಂಗ್ರಹ ಯೋಜನೆಯ ಕುರಿತು ಜಿಲ್ಲಾ ವ್ಯಾಪ್ತಿಯ ಸಾಹಿತಿಗಳು ಅಥವಾ ಕಲಾವಿದರುಗಳು ಸೇವಾಸಿಂದು PORTAL  sevasindhu.karnataka.gov.in   ರ ಮೂಲಕ 2012ರ ಮೇ 30 ರವರೆಗೆ ಮುಂದುವರಿಸಿದ್ದು, ಕಲಾವಿದರು ತಮ್ಮ ಮಾಹಿತಿಯನ್ನು ನೊಂದಾಯಿಸಿಕೊಳ್ಳಬಹುದಾಗಿದೆ.

1. ಯಕ್ಷಗಾನದ ಸಾಹಿತಿಗಳ ಕಲಾವಿದರ ದತ್ತಾಂಶ ಸಂಗ್ರಹಕ್ಕಾಗಿ ಪಾಲಿಸಬೇಕಾಗಿರುವ ಮಾರ್ಗಸೂಚಿಗಳು ಕಲಾವಿದರ ನೊಂದಾಣಿಗಾಗಿ ಸೇವಾಸಿಂದು ಮೂಲಕ ನಿಗಧಿತ ಅರ್ಜಿಯನ್ನು ಆನ್‍ಲೈನ್‍ನಲ್ಲೇ ಭರ್ತಿ ಮಾಡುವುದು.

2. ಯಕ್ಷಗಾನ ಕಲಾವಿದರು / ಸಾಹಿತಿಗಳು ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 8 ವರ್ಷಗಳು.

3. ಯಕ್ಷಗಾನ ಕಲಾಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಲಾ ಸೇವೆ ಸಲ್ಲಿಸಿರಬೇಕು. ಸಾಹಿತಿಗಳು ಕನಿಷ್ಠ  ಒಂದು ಮಸ್ತಕ ಪ್ರಕಟಿಸಿರಬೇಕು.

4. ಅರ್ಜಿದಾರರು ತಾವು ಇರುವ ಸ್ಥಳದಲ್ಲೇ ಮೊಬೈಲ್, ಟ್ಯಾಬ್ ಅಥವಾ ಲ್ಯಾಪ್ ಟಾಪ್ ಮುಖಾಂತರ ನೊಂದಣಿ ಮಾಡಿಕೊಳ್ಳತಕ್ಕದ್ದು, ಗ್ರಾಮೀಣ ಪ್ರದೇಶದವರು ನಾಗರಿಕ ಸೇವಾ ಕೇಂದ್ರದ ಮೂಲಕ ನೊಂದಣಿ ಮಾಡಿಸಿಕೊಳ್ಳತಕ್ಕದ್ದು.

5. ಅರ್ಜಿ ತುಂಬುವ ಪ್ರಕ್ರಿಯೆಯು ಅತ್ಯಂತ ಸರಳವಾಗಿದ್ದು, ಕೆಲವು ಅಂಶಗಳನ್ನು ಹೊರತುಪಡಿಸಿ ಉಳಿದ ಅಂಶಗಳು ಬಹು ಆಯ್ಕೆ ಮೂಲಕ ತುಂಬಬಹುದಾಗಿದೆ. ಅರ್ಜಿಯಲ್ಲಿ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು.

6. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರುವವರೂ ಸೇರಿದಂತೆ ಎಲ್ಲಾ ಯಕ್ಷಗಾನ ಕಲಾವಿದರು ನೊಂದಣಿ ಮಾಡಿಕೊಳ್ಳಬಹುದಾಗಿದೆ.

7. ಅರ್ಜಿ ತುಂಬುವಾಗ ಕೇಳಲಾದ ದಾಖಲೆಗಳನ್ನು ಕಡಿದು ಮೆಗಾಬೈಟ್' (MB) ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಇದು ಅಪೆÇ್ಲೀಡ್ ಮಾಡಲು ಅನುಕೂಲವಾಗುತ್ತದೆ. (200 KBಮೀರದಂತೆ)

8, ಪ್ರಮಾಣಪತ್ರಗಳು/ದಾಖಲೆಗಳು / ಫೆಟೋಗಳನ್ನು ಅಪೆÇ್ಲೀಡ್ ಮಾಡುವಾಗಲೂ ಇದೇ ಕ್ರಮವನ್ನು ಅನುಸರಿಸಬೇಕಾಗುತ್ತದೆ.

9. ಯಕ್ಷಗಾನ ಕಲಾವಿದರು ಇತ್ತೀಚೆಗೆ ಪ್ರದರ್ಶಿಸಿದ ಕಾರ್ಯಕ್ರಮದ ಇದಕ್ಕಾಗಿಯೇ ಚಿತ್ರೀಕರಿಸಿದ ವಿಡಿಯೋ ಲಿಂಕ್ನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. (ಯೂಟೂಬ್, ಗೂಗಲ್ ಡ್ರೈವ್ ಇತ್ಯಾದಿ)

10. ಸ್ವೀಕೃತಗೊಂಡ ಪರಿಶೀಲಿಸಿ ಸಮಿತಿಯ ಮುಂದೆ ದಾಖಲೆಗಳು / ಮಾಹಿತಿಗಳು/ಪುರಾವೆಗಳ ಹೆಚ್ಚಿನ ಅವಶ್ಯಕತೆ ಕಂಡುಬಂದಲ್ಲಿ ಕಲಾವಿದರನ್ನು ಸಂದರ್ಶಿಸಬೇಕಾಗುತ್ತದೆ. ಹಾಗಾಗಿ ಕಲಾವಿದರು. ಆಧಾರ್‍ನಲ್ಲಿ ದಾಖಲಾಗಿರುವ ಮೊಬೈಲ್ ಸಂಖ್ಯೆಯನ್ನೇ ನೀಡತಕ್ಕದ್ದು.

11. ಅರ್ಜಿ ಭರ್ತಿ ಮಾಡುವಾಗ ಆಧಾರ್ ನಂಬರ್ ಪರಿಶೀಲನೆಗೆ ಓ.ಟಿ.ಪಿ.ಯು ತಾವು ನೀಡಿರುವ  ಮೊಬೈಲ್ ದೂರವಾಣಿಗೆ ಬರುತ್ತದೆ. ಇದನ್ನು ಅಧಿಕೃತ ಮೊಬೈಲ್ ನಂಬರ್ ಎಂದೇ  ಪರಿಗಣಿಸಲಾಗುತ್ತದೆ.



Post a Comment

0 Comments

Ad Code

Responsive Advertisement