Ticker

6/recent/ticker-posts

Ad Code

Responsive Advertisement

ಜರ್ಮನಿಯ ಮ್ಯೂನಿಕನಲ್ಲಿ ‘ಭಾರತದ ಸೌರಶಕ್ತಿ ಮಾರುಕಟ್ಟೆ' ಕುರಿತು ಕೇಂದ್ರ ಸಚಿವರಿಂದ ಭಾಷಣ

ಬೆಂಗಳೂರು, ಮೇ 13, (ಕರ್ನಾಟಕ ವಾರ್ತೆ) : ಜರ್ಮನಿಯ ಮ್ಯೂನಿಕನಲ್ಲಿ ನೂತನ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯದ ಕೇಂದ್ರ ರಾಜ್ಯ ಸಚಿವರಾದ  ಭಗವಂತ ಖೂಬಾರವರು ಇಂಟರಸೋಲಾರ್ ಯುರೋಪ 2022ರ 2ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ, ‘ಭಾರತದ ಸೌರಶಕ್ತಿ ಮಾರುಕಟ್ಟೆ' ಕುರಿತು ಮಾತನಾಡಿದರು.

ದೇಶದ ಪ್ರಧಾನಿಗಳಾದ ಸನ್ಮಾನ್ಯ ನರೇಂದ್ರ ಮೋದಿಜಿಯವರ ಮಹತ್ವಾಕಾಂಕ್ಷೆಯ  COP -26ರ ಪಂಚಾಮೃತ ಗುರಿಗಳ ಪ್ರಕಾರ ಭಾರತವು 2070 ರ ವೇಳೆಗೆ ನಿವ್ವಳ ಶೂನ್ಯವನ್ನು ಸಾಧಿಸಲು ಮತ್ತು 2030 ರ ವೇಳೆಗೆ 500  GW     ಪಳೆಯುಳಿಕೆ ರಹಿತವನ್ನು ಸ್ಥಾಪಿಸಲು ಸಿದ್ಧವಾಗಿದೆ.' ಎಂದು ತಿಳಿಸಿದರು. ಕಳೆದ 7 ವರ್ಷಗಳಲ್ಲಿ ಭಾರತದ ನವೀಕರಿಸಬಹುದಾದ ಇಂಧನ ವಲಯವು ಹೇಗೆ ಗಮನಾರ್ಹ ಬೆಳವಣಿಗೆಯನ್ನು ಹೊಂದಿದೆ ಎಂದು ವಿವಿಧ ರಾಷ್ಟ್ರಗಳ ಮುಖ್ಯಸ್ಥರ ಗಮನಕ್ಕೆ ತಂದರು.

ಹೆಚ್ಚಿನ ದಕ್ಷತೆಯ ಸೋಲಾರ್ ಪಿವಿ ಮಾಡ್ಯೂಲ್‍ಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಭಾರತ ಬದ್ಧವಾಗಿದೆ, ಇದಕ್ಕಾಗಿ ಒಟ್ಟು ಬಜೆಟ್ ರೂ. 24,000 ಕೋಟಿ ವೆಚ್ಚ ಮಾಡಲಿದೆ. ಹಸಿರು ಹೈಡ್ರೋಜನ್ ಆರ್ಥಿಕತೆಯನ್ನು ಉತ್ತೇಜಿಸಲು ಭಾರತವು ರೂ. 25,425 ಕೋಟಿ ರೂ. ವೆಚ್ಚ ಮಾಡಲಿದೆ ಎಂದು ತಿಳಿಸಿದರು. ಭಾರತವು ಹೂಡಿಕೆಗೆ ಉತ್ತಮ ಅವಕಾಶವನ್ನು ನೀಡುತ್ತದೆ. ಪ್ರಸ್ತುತ ಭಾರತದಲ್ಲಿ ಸುಮಾರು $196.98 ಬಿಲಿಯನ್ ಮೌಲ್ಯದ ಯೋಜನೆಗಳು ನಡೆಯುತ್ತಿವೆ. ಭಾರತವು ಜಗತ್ತಿಗೆ ನೀಡುತ್ತಿರುವ ಅವಕಾಶವನ್ನು ಬಳಸಿಕೊಳ್ಳಲು ಎಲ್ಲಾ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹಾಗೂ ಆಯಾ ರಾಷ್ಷ್ರದ ಪ್ರಮುಖ ನವೀಕರಿಸಬಹುದಾದ ಇಂಧನ ಕಂಪನಿಗಳನ್ನು ಮತ್ತೊಮ್ಮೆ ಆಹ್ವಾನಿಸಿದರು.

ನಂತರ ಗ್ಲೋಬಲ್ ಸೋಲಾರ್ ಕೌನ್ಸಿಲ್, ಯುರೋಪಿಯನ್ ಸೋಲಾರ್ ಅಸೋಸಿಯೇಷನ್, ಜರ್ಮನ್ ಸೋಲಾರ್ ಅಸೋಸಿಯೇಷನ್ ಮತ್ತು ಯುರೋಪಿಯನ್ ಸೋಲಾರ್ ಮ್ಯಾನುಫ್ಯಾಕ್ಚರರ್ ಅಸೋಸಿಯೇಷನ್‍ನೊಂದಿಗೆ ಸಭೆ ನಡೆಸಿ ಅಲ್ಲಿ ತಂತ್ರಜ್ಞಾನ ವರ್ಗಾವಣೆಯ ಸಾಧ್ಯತೆಗಳ ಕುರಿತು ಚರ್ಚಿಸಿದರು.

ಸಚಿವರು ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಿಯೆಗಾಗಿ ದ್ವಿಪಕ್ಷೀಯ ಇಂಧನ ಸಹಕಾರ ಸಚಿವಾಲಯದ ಮುಖ್ಯಸ್ಥರೊಂದಿಗೆ ಇಂಡೋ-ಜರ್ಮನ್ ಗ್ರೀನ್ ಹೈಡ್ರೋಜನ್ ಟಾಸ್ಕ್ ಫೆÇೀರ್ಸ್ ಮತ್ತು ಭಾರತದಲ್ಲಿ ಹೂಡಿಕೆ ಕುರಿತು ಚರ್ಚೆಗಳನ್ನು ನಡೆಸಿದರು.

ಪ್ರವಾಸದ ಅಂತಿಮ ದಿನವಾದ ನಾಳೆ, ಸಚಿವರು ಅಗ್ರಿ-ಪಿವಿ ಸೈಟ್‍ಗಳು ಮತ್ತು ಸೌರ ಚಾಲಿತ ಚಾಜಿರ್ಂಗ್ ಸ್ಟೇಷನ್‍ಗಳಿಗೆ ಭೇಟಿ ನೀಡಲಿದ್ದಾರೆ. ವರ್ಚುವಲ್ ಬ್ಯಾಟರಿ ಪವರ್‍ಪ್ಲಾಂಟ್‍ನ ಪ್ರೇಸೆಂಟಷನಲ್ಲಿ  ಭಾಗವಹಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Post a Comment

0 Comments

Ad Code

Responsive Advertisement