Ticker

6/recent/ticker-posts

Ad Code

Responsive Advertisement

ರಸಗೊಬ್ಬರ ದಂಧೆಯ ಅಕ್ರಮದ ಹಿಂದಿರುವ ಆರೋಪವಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ರವರನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲಿ-ಮಲ್ಲಪ್ಪ

ಬಳ್ಳಾರಿ ಮೇ 11. ಆಮ್ ಆದ್ಮಿ ಪಕ್ಷ, ಬಳ್ಳಾರಿ ಜಿಲ್ಲಾ ಘಟಕದವತಿಯಿಂದ ರೈತರ ಹೆಸರಿನಲ್ಲಿ ರಸಗೊಬ್ಬರವನ್ನು ಖರೀದಿ ಮಾಡಿ ನೆರೆರಾಜ್ಯಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಅಕ್ರಮ ದಂಧೆಯ ಆರೋಪವಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ರವರನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಸಂಪುಟದಿಂದ ವಜಾಗೊಳಿಸಿ ಕ್ರಮಕೈಗೊಳ್ಳುವಂತೆ  ಪತ್ರಿಕಾ ಗೋಷ್ಠಿಯಲ್ಲಿ ಮಲ್ಲಪ್ಪ ತಿಳಿಸಿದ್ದಾರೆ.

ಸರ್ಕಾರವು ರಿಯಾಯಿತಿ ಧರದಲ್ಲಿ ನೀಡುವ ಬೇವು ಲೇಪಿತ ಯೂರಿಯಾವನ್ನು ರೈತರ ಹೆಸರಿನಲ್ಲಿ ಸುಳ್ಳು ದಾಖಲೆ ನೀಡಿ 45 ಕೆ.ಜಿ ತೂಕದ ರಸಗೊಬ್ಬರ ಚೀಲವನ್ನು ಕೇವಲ 266 ರೂಪಾಯಿಗಳಿಗೆ ಖರೀದಿಸಿ ಅವುಗಳ ಚೀಲವನ್ನು ಬದಲಾಯಿಸಿ 1600 ರೂಪಾಯಿಗಿ ಒಂದರಂತೆ ಹೊರರಾಜ್ಯಗಳಿಗೆ ಅಕ್ರಮವಾಗಿ ಮಾರಾಟ ಮಾಡಿ ಭಾರೀ ಲಾಭಮಾಡಿ ಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ರಾಜ್ಯದ ರೈತರಿಗೆ ರಸಗೊಬ್ಬರದ ಅಭಾವ ಸೃಷ್ಟಿಯಾಗಿದೆ. ರಾಜ್ಯದಲ್ಲಿ ರಸಗೊಬ್ಬರ ದಂಧೆಯ ಅವ್ಯಾಹತವಾಗಿ ನಡೆಯುತ್ತಿದ್ದರು ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಕೇವಲ ಸಣ್ಣಪುಟ್ಟ ಅಧಿಕಾರಿಗಳ ವಿರುದ್ಧ ನಾಮ್ಕಾವಸ್ತೆಗೆಂದು ದೂರು ದಾಖಲಿಸಿಕೊಂಡು ಹಗರಣವನ್ನು ಮುಚ್ಚಿ ಹಾಕಲು ಸರ್ಕಾರ ಮುಂದಾಗಿದೆ. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ ಕೃಷಿ ಸಚಿವ ಬಿ.ಸಿ ಪಾಟೀಲ್ ವಿರುದ್ಧ ತನಿಖೆ ನಡೆಸಿದರೆ ಬಹುಕೋಟಿ ರೂಪಾಯಿಗಳ ರಸಗೊಬ್ಬರ ಅಕ್ರಮದಂಧೆ ಬೆಳಕಿಗೆ ಬರಲಿದೆ. ಕರ್ನಾಟಕ ರೈತರಿಗೆ ರಿಯಾಯಿತಿ ಧರದಲ್ಲಿ ಸಿಗಬೇಕಾದ ರಸಗೊಬ್ಬರವು ನೆರೆರಾಜ್ಯಗಳಿಗೆ ಮಾತ್ರವಲ್ಲದೆ ನೆರೆಯ ದೇಶಗಳಾದ ನೇಪಾಳ ಮತ್ತು ಬಾಂಗ್ಲಾ ದೇಶಕ್ಕೂ ಅಕ್ರಮವಾಗಿ ಮಾರಾಟವಾಗುತ್ತಿರುವ ಬಗ್ಗೆ ಮಾದ್ಯಮಗಳು ಈಗಾಗಲೇ ವರದಿ ಮಾಡಿವೆ. ಸಚಿವರ ಕೈವಾಡವಿಲ್ಲದೇ ಇಷ್ಟು ದೊಡ್ಡಮಟ್ಟದ ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ರಸಗೊಬ್ಬರ ಕಳ್ಳಸಾಗಣೆ ಮಾಡುವುದರಿಂದ ರಾಜ್ಯ ಬಿ.ಜೆ.ಪಿ ಸರ್ಕಾರವು ಎಷ್ಟು ಕಮಿಷನ್ ಪಡೆಯುತ್ತಿದೆ ಎಂಬುದು ರಾಜ್ಯದ ಜನರು ತಿಳಿಯಬೇಕಾದರೆ ರಸಗೊಬ್ಬರ ಅಕ್ರಮದಂಧೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿದಲ್ಲಿ ಮಾತ್ರ ಸಾಧ್ಯವಾಗುತ್ತದೆ. 

ಕಾರಣ ಮಾನ್ಯ ರಾಜ್ಯಪಾಲರು ಆದಷ್ಟು ಶೀಘ್ರವಾಗಿ ರಸಗೊಬ್ಬರ ಅಕ್ರಮ ದಂಧೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಆಮ್ ಆದ್ಮಿ ಪಕ್ಷವು ತಮ್ಮಲ್ಲಿ ಒತ್ತಾಯಿಸುತ್ತದೆ.ನಗರ ಕಾರ್ಯದರ್ಶಿ ಸಯ್ಯದ್ ಪಟೆಲ್, ಜಿಲ್ಲಾ ಕಾರ್ಯದರ್ಶಿ ಝಕ್ರಿಯಾ, ಗ್ರಾಮಿಣ ಯುವ ಅಧ್ಯಕ್ಷ ಖಲಂದರ್, ನಗರ ಯುವ ಅಧ್ಯಕ್ಷ ಮಹಮ್ಮದ್ ಆಸೀಮ್, ಗ್ರಾಮಾಂತರ ಅಧ್ಯಕ್ಷ ಕಿರಣ್ ಕುಮಾರ್, ಲಕ್ಷ್ಮಿನಾರಾಯಣ, ಸುಹೇಲ್ ಸೇರಿದಂತೆ ಇತರರಿದ್ದರು. 



 

Post a Comment

0 Comments

Ad Code

Responsive Advertisement