ಬಳ್ಳಾರಿ ಮೇ 11. : ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ್ರು, ಮಾಜಿ ಸಿ.ಎಂ.ಕುಮಾರಣ್ಣ ಅವರ ಕನಸಿನ ಯೋಜನೆಯಾದ ಸಮಗ್ರ ನೀರಾವರಿ ಸೌಲಭ್ಯ, ಜನರಿಗೆ ಶಾಶ್ವತ ಶುದ್ದ ಕುಡಿವ ನೀರು ಸರಬರಾಜಿಗಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಜನತಾ ಜಲಧಾರೆ ರಥಯಾತ್ರೆ ಅತ್ಯಂತ ಯಶಸ್ವಿಯಾಗಿದ್ದು, ಏ.13 ರಂದು ಬೆಂಗಳೂರಿನ ನೆಲಮಂಗಲದಲ್ಲಿ ಸಮಾರೋಪ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಜನತಾ ಜಲದಾರೆ ರಥಯಾತ್ರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಂಚರಿಸಿದ್ದು, ಎಲ್ಲ ಕಡೆಗಳಲ್ಲೂ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಅದೇ ರೀತಿ ಗಣಿನಾಡು ಬಳ್ಳಾರಿ ನಗರ, ಗ್ರಾಮೀಣ ಕ್ಷೇತ್ರ, ಸಿರಗುಪ್ಪ, ಕಂಪ್ಲಿ, ಸಂಡೂರು ತಾಲೂಕಿನಲ್ಲಿ ಸಂಚರಿಸಿದ್ದು, ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಸಂಡೂರಿನಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಜನಸಾಗರವೇ ಹರಿದು ಬಂದಿದ್ದು, ವಿಶೇಷ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಏ.13ರಂದು ನಡೆಯಲಿರುವ ಜನತಾ ಜಲಧಾರೆ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದ್ದು, 6-7 ಲಕ್ಷ ಜನರು ಭಾಗವಹಿಸಲಿದ್ದಾರೆ. ಅದೇ ರೀತಿ ಜಿಲ್ಲೆಯಿಂದ ಹತ್ತು ಬಸ್, 15 ಕ್ರೂಸರ್ ಗಳ ಮೂಲಕ ಸಾವಿರಕ್ಕೂ ಹೆಚ್ಚು ಜನರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕುಮಾರಣ್ಣ ಮುಖ್ಯಮಂತ್ರಿ ಖಚಿತ: ಜನತಾ ಜಲಧಾರೆ ರಥಯಾತ್ರೆ ಯಶಸ್ವಿಯಾಗಿ ನಡೆದಿದ್ದು, ಮಾಜಿ ಸಿ.ಎಂ.ಕುಮಾರಣ್ಣ ಅವರು ಮತ್ತೆ ಮುಖ್ಯಮಂತ್ರಿ ಯಾಗಬೇಕು ಎಂದ ಜನರು ನಿರ್ಧರಿಸಿದ್ದಾರೆ, ಬಿಜೆಪಿ ಹಾಗೂ ಕಾಂಗ್ರೆಸ್ ಆರೋಪ ಪ್ರತ್ಯಾರೋಪದಲ್ಲೇ ಕಾಲಹರಣ ಮಾಡುತ್ತಿವೆ ಹೊರತು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿಲ್ಲ, ಶೇ.40 ಪಸೆರ್ಂಟ್ ಸರ್ಕಾರ ಎಂದು ಕಾಂಗ್ರೆಸ್ ನವರು ಆರೋಪ, ಹಗರಣಗಳ, ಬ್ರಷ್ಟಾಚಾರ ಪಕ್ಷ ಎಂದು ಬಿಜೆಪಿ ಅವರು ಒಬ್ಬರ ಮೇಲೆ ಒಬ್ಬರು ಎಳೆದುಕೊಂಡು ಕಾಲಹರಣ ಮಾಡುತ್ತಿವೆ ಹೊರತು, ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿಲ್ಲ, ಜನರು ಎಲ್ಲವನ್ನೂ ಗಮನಿಸುತ್ತಿದ್ದು, ಬರುವ ದಿನಗಳಲ್ಲಿ ಎರಡೂ ಪಕ್ಷಗಳನ್ನು ತಿರಸ್ಕರಿಸಿ ಜೆಡಿಎಸ್ ಬೆಂಬಲಿಸುವ ವಿಶ್ವಾಸವಿದೆ, ರೈತರ ಪರ, ಜನರ ಪರ ಮಾದರಿ ಯೋಜನೆಗಳನ್ನು ಜಾರಿಗೊಳಿಸಿರುವ ಕುಮಾರಣ್ಣನವರ ಕಡೆ ರಾಜ್ಯದ ಜನರು ವಾಲಿದ್ದಾರೆ, ಎರಡೂ ಪಕ್ಷಗಳ ದುರಾಡಳಿತವನ್ನು ಜನರು ಗಮನಿಸಿದ್ದು, ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ, ಜಿಲ್ಲೆಯ ಬಿಜೆಪಿ ನಾಯಕರಿಗೆ, ಸಚಿವ ಶ್ರೀರಾಮುಲು, ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರಿಗೆ ಇತ್ತೀಚೆಗೆ ಮುಸ್ಲಿಂ ಬಾಂದವರ ಮೇಲೆ ಪ್ರೀತಿ ಶುರುವಾಗಿದೆ, ಚುನಾವಣೆ ಬಂದಾಗ ಮತಕ್ಕಾಗಿ ಈ ರೀತಿ ನಡದುಕೊಳ್ಳುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ, ಬಿಜೆಪಿ ಅವರ ಈ ಆಟ ಚುನಾವಣೆಯಲ್ಲಿ ನಡೆಯಲ್ಲ, ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಇತ್ತೀಚೆಗೆ ಮುಸ್ಲಿಂ ಬಾಂಧವರ ಬಗ್ಗೆ ಇತ್ತೀಚೆಗೆ ಮಾತನಾಡಿದ ಮಾತುಗಳನ್ನು ಮುಸ್ಲಿಂ ಬಾಂದವರು ಮರೆತಿಲ್ಲ, ಇವರ ಈ ರಾಜಕೀಯ ನಾಟಕ ಚುನಾವಣೆಯಲ್ಲಿ ವರ್ಕೌಟ್ ಆಗೋಲ್ಲ, ಬರುವ ದಿನಗಳಲ್ಲಿ ಜಿಲ್ಲೆಯ ಪ್ರಬುದ್ಧ ಮತದಾರರು ಕಾಂಗ್ರೆಸ್ ಹಾಗೂ ಬಿಜೆಪಿ ಅವರಿಗೆ ತಕ್ಕ ಪಾಠ ಕಲಿಸಲು ತೀರ್ಮಾನಿಸಿದ್ದಾರೆ ಎಂದರು.

0 Comments