ಬಳ್ಳಾರಿ ಮೇ 10. ವಾಸವಿ ಜಯಂತಿ ಅಂಗವಾಗಿ ಬಳ್ಳಾರಿಯ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು.
ನಗರದ ಬೆಂಗಳೂರು ರಸ್ತೆ ಬಳಿಯಲ್ಲಿರುವ ಶ್ರೀ ಕನ್ನಿಕಾಪರಮೇಶ್ವರಿ ದೇವಿಗೆ, ವಿವಿಧ ಪುಷ್ಪಗಳ ಮೂಲಕ ಅಲಂಕರಿಸಿ. ವಿಶೇಷ ಪೂಜೆ ನೆರವೇರಿಸಲಾಗಿದ್ದು. ಸಂಜೆ, ಜಾಹ್ನವಿ ಮತ್ತು ತಂಡದ ಸದಸ್ಯರು. ನಡೆಸಿಕೊಟ್ಟ, ಭಕ್ತಿ ಗೀತೆ ಹಾಗೂ ಜಾನಪದ ಹಾಡುಗಳ ಕಾರ್ಯಕ್ರಮ. ನೆರೆದಿದ್ದ ನೂರಾರು ಜನರನ್ನ ಮಂತ್ರ ಮುಗ್ದರನ್ನಾಗಿಸಿತ್ತು. ಬಳ್ಳಾರಿಯ ಆರ್ಯವೈಶ್ಯ ಮಹಿಳಾ ಸಂಘದ ಸದಸ್ಯರಾದ, ಜಾಹ್ನವಿ,ನಾಗಜ್ಯೋತಿ,ಕವಿತ, ವೈದೇಹಿ. ಸಾವಿತ್ರಿ,ತುಳಸಿದೇವಿ,ಮಹೇಶ್ವರಿ,ಕೃಷ್ಣವೇಣಿ,ಪದ್ಮಲತ,ಗೀತಾ ಸೇರಿದಂತೆ ಅವರ ತಂಡ ಹಾಡಿದ. ಗುರುವಿನ ಗುಲಾಮನಾಗುವ ವರೆಗೂ ಸಿಗುವುದೇಗೆ ಮುಕ್ತಿ ಹಾಡು ನೆರೆದಿದ್ದ ಸಾರ್ವಜನಿಕರನ್ನ ಅಕ್ಷರ ಸಹ ಮಂತ್ರ ಮುಗ್ದರನ್ನಾಸಿತ್ತು. ಇನ್ನು ಕಾರ್ಯಕ್ರಮದಲ್ಲಿ, ನಗರದ ಆರ್ಯವೈಶ್ಯ ಸಮುದಾಯದ ಹಲವಾರು ಮಹಿಳೆಯರು ಮತ್ತು ಹಿರಿಯರು ಭಾಗಿಯಾಗಿದ್ದರು.

0 Comments