Ticker

6/recent/ticker-posts

Ad Code

Responsive Advertisement

ಅಂತೆ ಕಂತೆ ಸುಳ್ಳು ವರದಿ ಮಾಡಿ, ಮಾನಸಿಕವಾಗಿ,ರಾಜಕೀಯವಾಗಿ ಕುಗ್ಗುವಂತೆ ಮಾಡಿರುವವರನ್ನು ಕೂಡಲೇ ಅರೆಸ್ಟ್ ಮಾಡಲು ಒತ್ತಾಯ-ರಾಜುನಾಯಕ್

ಬಳ್ಳಾರಿ ಮೇ 11. "ಅಂಜನಾದ್ರಿ ದುರುಪಯೋಗ ಕ್ರಿಮಿನಲ್ ದೂರಿಗೆ ಆಗ್ರಹ" ಎಂಬ ಶಿರ್ಷಿಕೆಯಡಿ ಸುಳ್ಳು ಆಪಾದನೆಯ ಆರೋಪವನ್ನು ಪ್ರಜಾ ಪರ್ವ ಮಾಲೀಕರು ಮತ್ತು ವರದಿಗಾರರಾದ ಶ್ರೀನಿವಾಸ ಇವರು ದೇಣಿಗೆ ಎತ್ತಿದ್ದಾರೆಂದು ಮತ್ತು ಆ ದೇಣಿಗೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ಯಾರೋ ನಾಲ್ಕು ರಾಜಕೀಯ ಪ್ರೇರಿತ ವ್ಯಕ್ತಿಗಳು ಕೊಟ್ಟಂತಹ ಸುಳ್ಳು ಮನವಿಯನ್ನು ಆಧರಿಸಿ ಯಾವುದೇ ಪೂರ್ವಾಪರ ನಿಜವಾದ ಮಾಹಿತಿ ಮತ್ತು ಅಖಿತ ದಾಖಲೆಗಳನ್ನು ಪಡೆಯದೇ ದಿನಾಂಕ: 10-05-2022 ರಂದು ಪ್ರಜಾಪರ್ವ ಕನ್ನಡ ದಿನ ಪತ್ರಿಕೆಯಲ್ಲಿ ಪ್ರಕಟಿಸಿ ಕೆ.ಪಿ.ಸಿ.ಸಿ ರಾಜ್ಯ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜ ಸ್ವಾಮಿ ಮಳಮಠ ಮತ್ತು ಕೆ.ಪಿ.ಸಿ.ಸಿ ಎಸ್ಟಿ ಸೆಲ್, ಪ್ರಾಧಾನ ಕಾರ್ಯದರ್ಶಿಗಳಾದ ರಾಜು ನಾಯಕ ಇವರ ವಿರುದ್ಧ ಗಂಭೀರವಾದ ಆರೋಪವನ್ನು ಜನ ಸಮುದಾಯ ಮುಂದೆ ದಿನ ಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವರದಿ ಮಾಡಿದ್ದು, ಆದರೆ ಈ ಪತ್ರಿಕೆಯ ಸಂಪಾದಕ ಮತ್ತು ವರದಿಗಾರನಾದ ಶ್ರೀನಿವಾಸ ಇತನು ರಾಜಕೀಯ ಕ್ಷೇತ್ರದ ಪ್ರತಿಷ್ಠಿತ ಸ್ಥಾನ ಮಾನ ವುಳ್ಳವರ ಮೇಲೆ ಈ ರೀತಿಯ ಆಧಾರ ರಹಿತ ಸುಳ್ಳು ವರದಿ ಮಾಡುತ್ತಾ ಜನರನ್ನು ದಾರಿ ತಪ್ಪಿಸುವ ಕೆಲಸದಿಂದ ಮತ್ತು ಬ್ಲಾಕ್ ಮೇಲ್ ತಂತ್ರಗಳಿಂದ ತನ್ನ ಕರ್ತವ್ಯಕ್ಕೆ ಲೋಪ ಎಸಗಿದ್ದಾನೆ. ಅಲ್ಲದೇ ದಲಿತ ವಿರೋಧಿ ಧೋರಣಿ, ಅಂತೆ ಕಂತ ಸುಳ್ಳು ವರದಿ ಮಾಡುತ್ತಾ ದಲಿತರ ಮೇಲೆ ಸುಳ್ಳು ಆರೋಪ ಮಾಡುತ್ತಾ ಬಂದಿರುತ್ತಾನೆ. ಆದರೆ ನಿಜವಾದ ಮಾಹಿತಿಯನ್ನು ಕಲೆ ಹಾಕಿ ಹಾಗೂ ಲಿಖಿತವಾದ ದಾಖಲೆಗಳನ್ನು ಪಡೆಯದೇ ವರದಿ ಮಾಡಿರುತ್ತಾನೆ. ಸದರಿ ವರದಿಯು ಸುಳ್ಳು ಮಾಹಿತಿ ಹಾಗೂ ಆಧಾರ ರಹಿತವಾಗಿದ್ದು, ಸದರಿ ವರದಿಯಿಂದ ಅವರ ಮುಂದಿನ ಭವಿಷ್ಯದ ರಾಜಕೀಯವಾಗಿ ದಕ್ಕೆಯನ್ನು ಉಂಟು ಮಾಡುವ ರೀತಿಯದ್ದಾಗಿದ್ದು, ಅಲ್ಲದೇ ಅವರು ಮಾನಸಿಕವಾಗಿ ಕುಗ್ಗಿಸುವಂತೆ ಮಾಡಿದೆ. ಅಲ್ಲದೇ ಮಾನವನ್ನು ಹರಾಜು ಮಾಡಿರುತ್ತಾನೆ ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಭಲ ಆಕಾಂಕ್ಷಿ ರಾಜುನಾಯಕ್ ಅವರು ತಿಳಿಸಿದ್ದಾರೆ.

ಯಾವುದೇ ಪೂರ್ವಾಪರ ದಾಖಲೆಗಳನ್ನು ಪಡೆಯದೇ ನಾಲ್ಕು ಜನ ರಾಜಕೀಯ ಪ್ರೇರಿತ ವ್ಯಕ್ತಿಗಳ ಮನವಿಯನ್ನು ಆಧರಿಸಿ, ದಲಿತ ವಿರೋಧಿ ಧೋರಣಿ, ಅಂತೆ ಕಂತೆ ಸುಳ್ಳು ವರದಿ ಮಾಡಿ, ಮಾನಸಿಕವಾಗಿ ಹಾಗೂ ರಾಜಕೀಯವಾಗಿ ಕುಗ್ಗುವಂತೆ ಮಾಡಿರುವ ಪ್ರಜಾ ಪರ್ವ ದಿನ ಪತ್ರಿಕೆಯ ಸಂಪಾದಕ ಮತ್ತು ವರದಿಗಾರನಾದ ಶ್ರೀನಿವಾಸ ಇವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 67,469,499,502, 505, 507, ರ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರಾದ  ರಾಜು ನಾಯಕ ಹಾಗೂ .ಬಸವರಾಜಸ್ವಾಮಿ ಮಳಿಮಠ  ಅವರ ಮೇಲೆ ಸುಳ್ಳು ವರದಿ ಮಾಡಿದ ಪತ್ರಕರ್ತ ಶ್ರೀನಿವಾಸ್ ವಿರುದ್ಧ ಇಂದು ರಾಜುನಾಯಕ ಅಭಿಮಾನಿಗಳು .ಮಳೆ ಮಠ ಸ್ವಾಮಿ  ಅಭಿಮಾನಿಗಳು  ಜsಠಿ.ಎಸ್ ಉಜ್ಜನಕೊಪ್ಪ  ಅವರಿಗೆ ಪತ್ರಕರ್ತನ ವಿರುದ್ಧ ದೂರು ಕೊಟ್ಟು ಕೂಡಲೇ ಆತನನ್ನು ಅರೆಸ್ಟ್ ಮಾಡಬೇಕೆಂದು ಒತ್ತಾಯಿಸಿದ್ದಾರೆ.


 


Post a Comment

0 Comments

Ad Code

Responsive Advertisement