Ticker

6/recent/ticker-posts

Ad Code

Responsive Advertisement

ಎಸ್.ಎಂ ರಫೀಗೆ ಜೀವನ್ ರಕ್ಷ ಪದಕ ಪ್ರಧಾನ, ಕರ್ನಾಟಕದಿಂದ ಇವರೊಬ್ಬರೇ ಆಯ್ಕೆ

ಬಳ್ಳಾರಿ ಮೇ 31. 2019ರಲ್ಲಿ ಪ್ರಯಾಣಿಕರೊಬ್ಬರು ಚಲಿಸುವ ರೈಲು ಹತ್ತುವ ಸಮಯದಲ್ಲಿ ಸಮಯ ಪ್ರಜ್ಞೆಯಿಂದ ರಕ್ಷಣೆ ಮಾಡಿದಕ್ಕೆ ಬಳ್ಳಾರಿ ನಗರದ ಕೇಂದ್ರ ರೈಲ್ವೆ ರಕ್ಷಣದಳದ ಕಾನ್ ಸ್ಟೇಬಲ್ ಒಬ್ಬರಿಗೆ ಜೀವನ್ ರಕ್ಷ ರಾಷ್ಟ್ರಪತಿ ಪದಕ ನೀಡಿ ಗೌರವಿಸಿದ ಕೇಂದ್ರ ರೈಲ್ವೆ ಸಚಿವರು. ಈ ವಿಚಾರ ಗಣಿನಾಡು ಬಳ್ಳಾರಿ ಮತ್ತು ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ವಿಶೇಷ. ಎಸ್.ಎಂ ರಫೀ ಅವರ ತಂದೆ ಶರೀಫ್ ಡಿ.ಪಿ, ತಾಯಿ ಫರ್ಮಿನ್, ವಾಸ ಶಿವಮೊಗ್ಗ ಜಿಲ್ಲೆ ಆಗರದಹಳ್ಳಿ ಗ್ರಾಮದ ನಿವಾಸಿ, ತಂದೆತಾಯಿ ಬೇಸಾಯ ಕೆಲಸ ಮಾಡ್ತಾರೆ. 

ಕರ್ತವ್ಯ : 2006 ರಲ್ಲಿ ಆರ್.ಪಿ.ಎಫ್ (ರೈಲ್ವೆ ರಕ್ಷಣದಳ) ಹುಬ್ಬಳ್ಳಿ ವಿಭಾಗದ ಹುಬ್ಬಳ್ಳಿ ಮತ್ತು ಬಳ್ಳಾರಿ ರೈಲ್ವೆ ಕೇಂದ್ರದಲ್ಲಿ ಕಾನ್ ಸ್ಟೇಬಲ್ ಆಗಿ 16 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಬಳ್ಳಾರಿ ರೈಲ್ವೆ ಕೇಂದ್ರದ ಕೆಲಸ ಮಾಡುತ್ತಿದ್ದಾರೆ.  

ಏಕೆ ? ಈ ಜೀವನ್ ರಕ್ಷ ಪದಕ: 21.12.2019 ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಕೊಲ್ಲಾಪುರ ಹೈದರಾಬಾದ್ ರೈಲುಗಾಡಿ ಹತ್ತುವಾಗ ಬಳ್ಳಾರಿ ಕೇಂದ್ರೀಯ ವಿದ್ಯಾಲಯದ ಶಾಲೆಯ ಶಿಕ್ಷಕಿ ರಶ್ಮಿ ರೈಲು ಹತ್ತುವ ಸಮಯದಲ್ಲಿ ಬಿಳುತ್ತಿದವರನ್ನು ಸಮಯ ಪ್ರಜ್ಞೆ ಯಿಂದ ರಕ್ಷಣೆ ಮಾಡಿದ್ದಕ್ಕೆ ಈ ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿ ಕರ್ನಾಟಕದಿಂದ ಒಬ್ಬರಿಗೆ ಮಾತ್ರ ಜೀವನ್ ರಕ್ಷ ಪದಕ ನೀಡಿದ್ದಾರೆ. ಮೆಡಲ್ ಹಾಗೂ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ನೀಡಿದ ಪ್ರಮಾಣ ಪತ್ರ ಮತ್ತು ಮೆಡಲ್ ಹಾಗೂ 1 ಲಕ್ಷ ಚಕ್ ವಿತರಣೆ ಮಾಡಿದ್ದಾರೆ. ಈ ಪ್ರಶಸ್ತಿಯನ್ನು ಈಗಿನ ಕೇಂದ್ರ ಸಚಿವ ಅಶ್ವಿನಿ ವೈಷಣವ್ ಅವರು ನೀಡಿದ್ದಾರೆ. ಮೇ 27, 2022 ರಂದು ವಿಜ್ಞ್ಯಾನ ಭವನ ದೆಹಲಿಯಲ್ಲಿ ವಿತರಣೆ ಮಾಡಿದ್ದಾರೆ.



 

Post a Comment

0 Comments

Ad Code

Responsive Advertisement