ನಳಿನ್‍ಕುಮಾರ್ ಕಟೀಲ್ ಅವರೇ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡಿ
ಬಳ್ಳಾರಿ: ಮೇ 31. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರು ಮೇ 30 ರಂದು ತೋರಣಗಲ್ಲುನಲ್ಲಿ ಎಸ್ಟಿ ಮೋರ್ಚ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಲು ಬರುತ್ತದೆಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಅವರು ಕನಿಷ್ಠ ಸೌಜನ್ಯ ಇಟ್ಟುಕೊಂಡು ಮಾತಾಡುವುದನ್ನು ಕಲಿಯಬೇಕು, ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು, ಮಾನ್ಯ ಸಿದ್ದರಾಮಯ್ಯ ಅವರು ರಾಜ್ಯದ ಯಾವುದೇ ಕ್ಷೇತ್ರಕ್ಕೆ ಸ್ಪರ್ಧಿಸಿದರೂ ಕೂಡ ಬಹುಮತದಿಂದ ಗೆಲ್ಲುತ್ತಾರೆ, ಕಾಂಗ್ರೆಸ್‍ನ ಶಕ್ತಿ, ಕಾರ್ಯಕರ್ತರ ಪಡೆ ಹಾಗೂ ಜನರ ಒಲವು ನಮ್ಮ ಪರ ಇದೆ, ಒಂದು ವೇಳೆ ಸಿದ್ದರಾಮಯ್ಯನವರು ಒಪ್ಪಿದರೆ ನಾವೇ ಬಳ್ಳಾರಿ ನಗರದಿಂದ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸುತ್ತೇವೆ. ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ತಿಳಿಸಿದ್ದಾರೆ.

0 Comments