Ticker

6/recent/ticker-posts

Ad Code

Responsive Advertisement

ಟಿಕಾಯತ್ ಮೇಲೆ ಹಲ್ಲೆ, ಆರ್‍ಎಸ್‍ಎಸ್ ನಿಜ ಬಣ್ಣ ಬಯಲು ಮಾಡಿದ ಸಿದ್ದರಾಮಯ್ಯ- ವೆಂಕಟೇಶ್ ಹೆಗಡೆ

ಬಳ್ಳಾರಿ ಮೇ 31.ರಾಕೇಶ್ ಟಿಕಾಯತ್ ಮೇಲೆ ಹಲ್ಲೆ, ಆರ್‍ಎಸ್‍ಎಸ್ ನಿಜ ಬಣ್ಣ ಬಯಲು ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೆಲೆ ಬಿಜೆಪಿ ನಾಯಕರು ಮುಗಿಬಿದ್ದಿರುವುದನ್ನು ನೋಡಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಸುಳಿವು ಸಿಕ್ಕಂತೆ ಇದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ನಡೆದ ಹಲ್ಲೆ, ಮಸಿ ಬಳಿದ ಪ್ರಕರಣ ಸಾಕ್ಷಿಯಾಗಿದೆ. ಘಟನೆ ನಂತರ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಲ್ಲೆ, ಮಸಿಬಳಿದ ದುಷ್ಕøತ್ಯವನ್ನು ಸಮರ್ಥಿಸಿಕೊಳ್ಳುವುದನ್ನು ಕಂಡರೆ ನಮ್ಮದು ಗೂಂಡಾ ರಾಜ್ಯವಾಗುವತ್ತ ಸಾಗಿದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಕುರಿತು ಗೃಹ ಮಂತ್ರಿಯಾಗಲಿ, ಮುಖ್ಯಮಂತ್ರಿಗಳಾಗಲಿ ತುಟಿ ಬಿಚ್ಚುತ್ತಿಲ್ಲ. ಇದರಂತಹ ನಿರ್ಲಜ್ಯ, ನಿರ್ಲಕ್ಷ್ಯ ಸರ್ಕಾರ ಇನ್ನೊಂದಿಲ್ಲ ಎಂದು ಜನ ಮಾತನಾಡಿಕೊಳ್ಳುವಂತ ಸ್ಥಿತಿ ಇದೀಗ ರಾಜ್ಯದಲ್ಲಿ ತಲೆದೋರಿದೆ.ಇನ್ನು ಆರ್‍ಎಸ್‍ಎಸ್‍ನ ನಿಜಬಣ್ಣ ಬಯಲು ಮಾಡಿದ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ನಾಯಕರು ಒಟ್ಟಾಗಿ ಮುಗಿಬಿದ್ದಿದ್ದಾರೆ. ಆರ್‍ಎಸ್‍ಎಸ್ ಮುಖವಾಡ ಕಳಚುವ ಕಾರ್ಯಕ್ಕೆ ಕೇಸರಿ ಪಡೆ ಕಂಗಾಲಾದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಮುಖ್ಯಮಂತ್ರಿ, ಕೇಂದ್ರ ಸಚಿವ, ಶಿಕ್ಷಣ ಸಚಿವ, ಸಂಸದ... ಹೀಗೆ ಎಲ್ಲರೂ ನಮ್ಮ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯುತ್ತಿದ್ದಾರೆ. 

ಇದರ ಹಿಂದೆ ಮುಂದಿನ ಚುನಾವಣೆಯಲ್ಲಿ ಅವರು ಅನುಭವಿಸಬಹುದಾದ ಸೋಲಿನ ವಾಸನೆ ಕಂಡಂತೆ ಇದೆ. ಇದೇ ಕಾರಣಕ್ಕೆ ಎಲ್ಲರೂ ಮುಗಿಬೀಳುತ್ತಿದ್ದಾರೆ. ಜೊತೆಗೆ ಆರ್‍ಎಸ್‍ಎಸ್ ನಿಜಬಣ್ಣ ಬಯಲು ಮಾಡಿದ ಸಿದ್ದರಾಮಯ್ಯ ಮುಂದೆ ಇನ್ನೂ ಏನೇನು ಮಾಡುತ್ತಾರೋ ಎಂಬ ಭಯ ಸಹ ಆವರಿಸಿದೆ.ಚುನಾವಣೆ ಸಮೀಪಿಸುತ್ತಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಮುಂದಿಟ್ಟುಕೊಂಡು ಬೆದರಿಕೆ ಒಡ್ಡುತ್ತಿದ್ದಾರೆ. ಬಂಧನದ ಭೀತಿ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಕಾರಣ ಕೆಲ ದಿನಗಳ ಹಿಂದೆ ಸಚಿವ ಅಶ್ವತ್ಥ ನಾರಾಯಣ ಅವರ ಹಗರಣ ಬಯಲಿಗೆ ಎಳೆದಿದ್ದು ಜೊತೆಗೆ ಇನ್ನೂ ಹೆಚ್ಚಿನ ಹಗರಣ ಬಯಲು ಮಾಡುವ ಕುರಿತು ಡಿಕೆಶಿ ಹೇಳಿಕೆ ನೀಡಿದ್ದೇ ಆಗಿದೆ.ಭ್ರಷ್ಟ ಸಚಿವರು, ಜವಾಬ್ದಾರಿ ಇಲ್ಲದೆ ಮುಖ್ಯಮಂತ್ರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಇನ್ನು 11 ತಿಂಗಳಲ್ಲಿ ಚುನಾವಣೆ ಬರುತ್ತಿದ್ದು, ಕನಿಷ್ಠ ಪಕ್ಷ ಈ ಅವಧಿಯಲ್ಲಿ ಆದರೂ ರಾಜ್ಯದ ಜನರು ನೆಮ್ಮದಿಯಿಂದ ಬದುಕುವಂತಹ ವಾತಾವರಣ ಕಲ್ಪಿಸಬೇಕಿದೆ ಎಂದು ವೆಂಕಟೇಶ್ ಹೆಗಡೆ, ವಕೀಲರು, ಕೆಪಿಸಿಸಿ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ.



 

Post a Comment

0 Comments

Ad Code

Responsive Advertisement