Ticker

6/recent/ticker-posts

Ad Code

Responsive Advertisement

ಶ್ರೀ ಈಶ್ವರ ದೇವಸ್ಥಾನದ ದಾಸೋಹ ಕಾರ್ಯಕ್ರಮಕ್ಕೆ ಶಾಸಕ ನಾಗೇಂದ್ರನವರಿಂದ ಅಡುಗೆ ಸಾಮಾಗ್ರಿಗಳ ವಿತರಣೆ

ಬಳ್ಳಾರಿ ಮೇ 04. ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಯಪುರ ಗ್ರಾಮದಲ್ಲಿ ಶ್ರೀ ಈಶ್ವರ ದೇವಸ್ಥಾನದ ಸಮುದಾಯಕ್ಕೆ ದಾಸೋಹ ನಡೆಸುವ ಕಾರ್ಯಕ್ರಮಕ್ಕೆ ಸುಮಾರು ಒಂದು ಸಾವಿರ ಭಕ್ತರಿಗೆ ಅನುಕೂಲವಾಗಲೆಂದು ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಬಿ.ನಾಗೇಂದ್ರ ರವರು ದಾಸೋಹಕ್ಕೆ ಸಂಬಂಧಪಟ್ಟ ಅಡುಗೆ ಮತ್ತು ಊಟದ ಸಾಮಗ್ರಿಗಳನ್ನು ರಾಯಪುರ ಗ್ರಾಮದ ಕಾಂಗ್ರೆಸ್ ಮುಖಂಡರಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಶಾಸಕರ ಆಪ್ತರಾದ ಅಣ್ಣ ನಾಗರಾಜ್ ರವರು, ಗೋವರ್ಧನ್ ರೆಡ್ಡಿ ರವರು, ಬಿ.ದುರುಗಣ್ಣ ರವರು, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಸಿಂಧುವಾಳ ಗಾದಿಲಿಂಗನಗೌಡ ರವರು, ಮಾಜಿ ಉಪ ಮೇಯರ್ ಬೆಣಕಲ್ ಬಸವರಾಜ ಗೌಡ ರವರು, ಮಹಾನಗರ ಪಾಲಿಕೆ ಸದಸ್ಯರಾದ ಕೆ.ಹೊನ್ನಪ್ಪ ರವರು, ಕಾಂಗ್ರೆಸ್ ಮುಖಂಡರಾದ ಯೂನಿಸ್ ಬಾಯ್, ಶ್ರೀನಾಥ್, ಹಗರಿ ಗೋವಿಂದ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.



 

Post a Comment

0 Comments

Ad Code

Responsive Advertisement