ಬಳ್ಳಾರಿ ಮೇ 04. ಯಾರಾದರೂ ನಿಮಗೆ ಫೋನ್ ಮಾಡಿದರೆ, ನೀವು ಫೋನ್ ಎತ್ತದಿದ್ದರೆ, ಅಥವಾ ಕಟ್ ಮಾಡಿದರೆ, ನೀವು ಅವರಿಗೆ ಅವಮಾನ ಮಾಡಿದಂತೆ ,ಇದು ಮೊಬೈಲ್ ಮ್ಯಾನರ್ಸನಲ್ಲಿನ ಮೊದಲನೇ ಪಾಠ, ನೀವು ಟ್ರಾಫಿಕ್ ನಲ್ಲಿ ಸಿಕ್ಕಿಹಾಕೊಂಡಿದ್ದರೆ, ಸತ್ತವರ ಮನೆಯಲ್ಲಿದ್ದರೆ, ಮೀಟಿಂಗ್ ನಲ್ಲಿದ್ದರೆ, ಡಾಕ್ಟರ್ ಎದುರಿಗಿದ್ದರೆ, ನಿಮಗೆ ಫೋನ್ ಸ್ವೀಕರಿಸಲು ಸಾಧ್ಯವೇ ಆಗದಿದ್ದರೆ, ಅದರಿಂದ ಹೊರಬಂದ ತಕ್ಷಣವೇ ವಾಪಸ್ ಅವರಿಗೆ ಫೋನ್ ಮಾಡಿ ಮಾತನಾಡಿ, ಸಂಜೆಯ ತನಕ ವಾಪಸ್ ಫೋನ್ ಮಾಡಲು ಸಾಧ್ಯವೇ ಆಗದಿದ್ದರೆ, ಕೊನೆಯಪಕ್ಷ ರಾತ್ರಿ ಮಲಗುವುದಕ್ಕಿಂತ ಮೊದಲು ಒಮ್ಮೆ ಮಿಸ್ ಕಾಲ್‍ಗಳನ್ನು ಚೆಕ್ ಮಾಡಿ, ವಾಪಸ್ ಅವರಿಗೆ Sorry ಹೇಳುತ್ತಾ ಫೋನ್ ಮಾಡಿರಿ.
ಇದು ಒಳ್ಳೆಯ ಮ್ಯಾನರ್ಸ್. ಫೋನ್ ಎತ್ತದಿದ್ದರೆ, ಅಥವಾ ಕಟ್ ಮಾಡಿದರೆ, ಆ ಕ್ಷಣಕ್ಕೆ ನಾವು ಅವರಿಂದ ತಪ್ಪಿಸಿಕೊಳ್ಳಬಹುದೆಂದು ಮೂರ್ಖ ವಿಚಾರ ಮಾಡುತ್ತೇವೆ. ಅವರು ಬೇರೆ ನಂಬರಿನಿಂದ ಫೋನ್ ಮಾಡಿದರೆ, ಎತ್ತಲೇಬೇಕಾಗುತ್ತದೆ. ಆಗ ಅವರಿಗೆ ಹೇಗೆ ಸಮಜಾಯಿಸಿ ನೀಡುತ್ತೀರಿ ? ಮತ್ತು ಸುಳ್ಳನ್ನು ಎಷ್ಟು ಸಲ ಅಂತ ಹೇಳಲು ಸಾಧ್ಯ ? ನೀವು ಫೋನ್ ಎತ್ತದಿರುವುದರಿಂದ, ಅವರಿಂದ ತಕ್ಷಣಕ್ಕೆ ತಪ್ಪಿಸಿಕೊಂಡರೂ, ಶಾಶ್ವತವಾಗಿ ತಪ್ಪಿಸಿಕೊಳ್ಳಲಾಗುವುದಿಲ್ಲ, ಬದಲಾಗಿ ನಿಮಗೆ ಅತ್ಯಮೂಲ್ಯವಾಗಿ ಬೇಕಾಗಿರುವ ವ್ಯಕ್ತಿಯೊಬ್ಬನನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೀರಿ ಇದನ್ನು ಗಮನದಲ್ಲಿರಿಸಿಕೊಳ್ಳಿ.
ಒಬ್ಬ ವ್ಯಕ್ತಿಯನ್ನು ಕಳೆದುಕೊಂಡರೆ, ಅದರಿಂದ ನಿಮಗೆ ಗೊತ್ತಿಲ್ಲದಂತೆಯೇ ನೀವು ಬಹಳಷ್ಟು ಲಾಭದಾಯಕ ಸಂಗತಿಗಳನ್ನು ಕಳೆದುಕೊಂಡಿರುತ್ತೀರಿ ಎಂಬುದನ್ನು ಮರೆಯಬಾರದು. ನಾನಂತೂ ಮೊಬೈಲ್ ಮ್ಯಾನರ್ಸ್ ಖಡ್ಡಾಯವಾಗಿ ಪಾಲಿಸುತ್ತೇನೆ. ಮತ್ತು ಇತರಿರಿಂದಲೂ ನಾನು ಅದನ್ನೇ ಆಪೇಕ್ಷೆ ಮಾಡುತ್ತೆನೆ.

0 Comments