Ticker

6/recent/ticker-posts

Ad Code

Responsive Advertisement

"ಮಹಿಳೆಯರಿಗೆ ದೈರ್ಯತುಂಬಲು ಮಹಿಳಾ ಮಣಿಗಳಿಂದ ರಾಜ್ಯಾದ್ಯಂತ ಬೈಕ್ ಪ್ರವಾಸ" ಬಳ್ಳಾರಿಯಲ್ಲಿ ಅದ್ದೂರಿ ಸ್ವಾಗತ ಕೋರಿದ ಪ್ರಿಯಾ ಕ್ರಿಷ್ಣ ಪಿಳ್ಳೈ

ಬಳ್ಳಾರಿ ಮೇ 04. ಇತ್ತಿಚೀನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ. ಅತ್ಯಾಚಾರಗಳು ನಡೆಯುತ್ತಿದ್ದು. ಮಹಿಳೆಯರು ಎದೆಗುಂದುವಂತಾ ಹಂತಕ್ಕೆ ಬಂದಿರುವ ಸ್ಥಿತಿಗೆ ತಲುಪಿದೆ. ಕಾರಣ ನಾಲ್ಕು ಜನ ಮಹಿಳಾ ಮಣಿಗಳು ರಾಜ್ಯಾದ್ಯಂತ ಸೂಮಾರು 4000 ಕಿಲೋಮೀಟರ್ ಬೈಕ್ ಪ್ರವಾಸದ ಮೂಲಕ ಪ್ರತಿ ಜಿಲ್ಲೆಗೂ ಭೇಟಿ ನೀಡಿ. ಮಹಿಳೆಯರಿಗೆ ದೈರ್ಯತುಂಬುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ, ಬೆಂಗಳೂರಿನಿಂದ ಹೊರಟ ಸಖಿ ತಂಡದ ನಾಲ್ವರು ಮಹಿಳೆಯರು ಕಳೆದ ಎಪ್ರಿಲ್ 17 ರಂದು ಬೆಂಗಳೂರಿನಿಂದ ಅಧ್ಯಕ್ಷ್ಯೆ ರಾಜ್ಯಲಕ್ಷ್ಮಿ ಸೇರಿದಂತೆ. ಸ್ವಾತಿ, ಕೀರ್ತಿನಿ,ಅನಿತಾ ಈವರೆಗೂ ರಾಜ್ಯದ 15 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮೇ 04 ರಂದು ಬಳ್ಳಾರಿಗೆ ಆಗಮಿಸದ್ದರು.

ನಗರದ ಬಚಪನ್ ಶಾಲೆಯ
ಪ್ರಿಯ ಕ್ರಿಷ್ಣ ಪಿಳ್ಳೈ ಮತ್ತು ಸಂಗಿಣಿ, ಮತ್ತು ಮಹಿಳೆ ಸಂಘಟನೆಗಳ ನೇತೃತ್ವದಲ್ಲಿ ಬೈಕ್ ಪ್ರವಾಸದ ಮಹಿಳಾ ಮಣಿಗಳಿಗೆ ಅದ್ದೂರಿ ಸ್ವಾಗತ ಕೋರಿ ಬಳ್ಳಾರಿಯ ಆದಿದೇವತೆ ಕನಕದುರ್ಗೆಮ್ಮ ತಾಯಿಗೆ ವಿಶೇಷ ಪೂಜೆ ನೆರವೇರಿಸಿದರು.ಸಖಿ ತಂಡದ ಮಹಿಳಾ ಮಣಿಗಳ ಪ್ರವಾಸ ಸುರಕ್ಷಿತವಾಗಿ ನಡೆಯುವಂತೆ ಆಶಿಸಿದರು. ದೇವಸ್ಥಾನದ ಆವರಣದಲ್ಲಿ, ಮಹಿಳಾ ಪೆÇಲೀಸ್ ಅಧಿಕಾರಿಯಾದ ಗಾಯತ್ರಿ ರೊದ್ದಂ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಿದ ನಂತರ ನಗರದ ಪ್ರಮುಖ ವೃತ್ತಗಳಲ್ಲಿ ಬೈಕ್ ರ್ಯಾಲಿ ನಡೆಸಿದ ಮಹಿಳಾ ಮಣಿಗಳು ಮಹಿಳೆಯರು, ತಾವು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ, ಕಛೇರಿಗಳಲ್ಲಿ ಆತ್ಮಸ್ತೈರ್ಯದಿಂದ ಕರ್ತವ್ಯ ನಿರ್ವಹಿಸಿ, ತಪ್ಪುಗಳು ಕಂಡುಬಂದಲ್ಲಿ ದೈರ್ಯವಾಗಿ ವಿರೋಧಿಸಿ, ಸರಿಪಡಿಸುವಂತ ಕಾರ್ಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಎನ್ನುವ ಆತ್ಮಸ್ತೈರ್ಯವನ್ನ ತುಂಬಿದರು. ಇನ್ನು ಈ ತಂಡದಲ್ಲಿ ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಕೀರ್ತಿನಿ ಭಾಗಿಯಾಗಿದ್ದು, ಸ್ಥಳಿಯರಿಗೆ ಹೆಮ್ಮೆಯ ವಿಚಾರಗಿತ್ತು. ಮಹಿಳೆಯರಿಗೆ ದೈರ್ಯ ತುಂಬುವ ಕಾರ್ಯದಲ್ಲಿ ನಾನು ಭಾಗಿಯಾಗಿರುವುದು ನನಗೆ ತೃಪ್ತಿ ತಂದಿದೆ ಎಂದು ಬಚಪನ್ ಶಾಲೆಯ ಮುಖ್ಯಸ್ಥರಾದ, ಪ್ರಿಯಾ ಕ್ರಿಷ್ಣ ಪಿಳ್ಳೈ ನೇತೃತ್ವದಲ್ಲಿ ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂತಸ ವ್ಯೆಕ್ತ ಪಡೆಸಿದರು.

ಇದೇ ಸಂದರ್ಭದಲ್ಲಿ, ನಾಲ್ವರು ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಗರದ ಬಿಜೆಪಿ ಮಹಿಳಾ ಮುಖಂಡರಾದ ಜ್ಯೋತಿ ಪ್ರಕಾಶ್, ಪುಷ್ಪಲತಾ, ವಿಜಯಲಕ್ಷ್ಮಿ, ಸುಗುಣ ಸೇರಿದಂತೆ ಹಲವಾರು ಮಹಿಳೆಯರು ಭಾಗಿಯಾಗಿದ್ದರು.



 

Post a Comment

0 Comments

Ad Code

Responsive Advertisement