Ticker

6/recent/ticker-posts

Ad Code

Responsive Advertisement

ಮಹಾದೇವತಾತ ಕಲಾ ಸಂಘದ 17 ನೇ ವಾರ್ಷಿಕೋತ್ಸವದಂದು ರಕ್ತರಾತ್ರಿ ನಾಟಕ ನೋಡಿ ಸಂಭ್ರಮಿಸಿದ ಕಳಾಭಿಮಾನಿಗಳು

ಬಳ್ಳಾರಿ ಮೇ 04:  ಗ್ರಾಮೀಣ ಪ್ರದೇಶದ ರಂಗ ಮನಸುಗಳು   ಯಾವುದೇ ನಾಟಕಗಳನ್ನು ವೀಕ್ಷಿಸಿ ಕಲಾವಿದರನ್ನು  ಉತ್ತೇಜಿಸುತ್ತಾರೆ. ಅಂತೆಯೇ ಮಂಗಳವಾರ ತಾಲೂಕಿನ  ಹಂದ್ಯಾಳು ಗ್ರಾಮದಲ್ಲಿ ಪ್ರದರ್ಶಿತವಾದ ರಕ್ತ ರಾತ್ರಿ ನಾಟಕವನ್ನು ಮಳೆ ಬಂದರೂ ವಿಚಲಿತರಾಗದೇ ನೋಡಿ ಸಂಭ್ರಮಿಸಿದರು.

 ಗ್ರಾಮದ ಮಹಾದೇವ ತಾತ ಕಲಾ ಸಂಘ ತನ್ನ  17ನೇ ವಾರ್ಷಿಕೋತ್ಸವ ಮತ್ತು ಶ್ರೀ  ಜಡೆಸಿದ್ದೇಶ್ವರ ಜಾತ್ರೆಯ ಅಂಗವಾಗಿ   "ರಕ್ತರಾತ್ರಿ"  ನಾಟಕವನ್ನು ಪ್ರದರ್ಶಿಸಿತು. ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಕಲಾವಿದರ ಅಭಿಯನಕ್ಕೆ ಮನ ಸೋತು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು. ನಾಟಕ ಪ್ರದರ್ಶನವನ್ನು  ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ  ಚೋರನೂರು ಟಿ.ಕೊಟ್ರಪ್ಪ ತಬಲ ಬಾರಿಸುವ ಮೂಲಕ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹದಿನೇಳು ವರ್ಷಗಳ ಹಿಂದೆ ತಾವು ಉದ್ಘಾಟಿಸಿದ್ದ  ಶ್ರೀ ಮಹದೇವತಾತ  ಕಲಾ ಸಂಘವು ತನ್ನ ಕ್ರಿಯಾಶೀಲತೆ ಯಿಂದ ರಾಜ್ಯಾದ್ಯಂತ ಹೆಸರು ಪಡೆದಿರುವುದು ಖುಷಿ ತಂದಿದೆ ಎಂದರು. ರಂಗ ಕರ್ಮಿ  ಪುರುಷೋತ್ತಮ ಹಂದ್ಯಾಳು  ಅವರ ನೇತೃತ್ವದ ಕಲಾ ಸಂಘವು ತನ್ನದೇ ಆದ ರೀತಿಯ ಚಟುವಟಿಕೆ ಮೂಲಕ  ವಿಶಿಷ್ಟ ಛಾಪು ಮೂಡಿಸಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಜೆವಾಣಿಯ ಹಿರಿಯ ವರದಿಗಾರ ಎನ್.ವೀರಭದ್ರಗೌಡ ಅವರು ಮಾತನಾಡಿ. ನಗರ ಪ್ರದೇಶದಲ್ಲಿ ನಾಟಕಗಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತಿದೆ ಆದರೆ ನಾಡಿನ ಪ್ರತಿ  ಹಳ್ಳಿಗಳಲ್ಲಿ  ರಂಗ ಕಲೆ ಹಾಗು ಕಲಾವಿದರನ್ನು ಪ್ರೋತ್ಸಾಹಿಸುತ್ತಾರೆ ಎನ್ನುವುದಕ್ಕೆ ಇಂದು ಸೇರಿರುವ ಸಾವಿರಕ್ಕೂ ಹೆಚ್ಚು ಪ್ರೇಕ್ಷಕರೇ ಸಾಕ್ಷಿ ಎಂದರು.  ನಾಟಕ ಜೀವಂತ ಕಲೆ. ಪ್ರತಿ ಪಾತ್ರಗಳನ್ನು  ಜನತೆ ತಮ್ಮದೇ ಪಾತ್ರ ಎಂದು ಭಾವಿಸುತ್ತಾರೆ. ಹೀಗಾಗಿ ನಾಟಕಗಳಿಗೆ ಪ್ರೇಕ್ಷಕರ ಸಮಸ್ಯೆ ತಲೆದೋರದು ಎಂದು ಅಭಿಪ್ರಾಯ ಪಟ್ಟರು.  ಹೊಸಪೇಟೆಯಲ್ಲಿ ವಾಸವಾಗಿರುವ ಗ್ರಾಮದ ಸಾಧಕ ಖ್ಯಾತ ಗಿಟಾರ್ ವಾದಕ ವಿ.ಡಿ ವೆಂಕನಗೌಡ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವೆಂಕನಗೌಡರ ಮೊಮ್ಮಗ  ಯುವ ಗಿಟಾರ್ ವಾದಕ ಅಭಿನಂದನ್  ಪ್ಯೂಜನ್ ಗೀತೆಗಳನ್ನು ಹಾಡಿ ನೆರೆದ ಸಂಗೀತ ಪ್ರಿಯರ ಗಮನ ಸೆಳೆದರು. ಶ್ರೀ ಜಡೆಸಿದ್ದೇಶ್ವರ ಸೇವಾ ಸಮಿತಿಯ ಗೌರವ ಅಧ್ಯಕ್ಷ ಇಂಜಿನಿಯರ್ ಕೃಷ್ಣ ರೆಡ್ಡಿ, ಅಧ್ಯಕ್ಷ ಹೆಚ್.ಶ್ರೀಪಾದ ರೆಡ್ಡಿ, ಶಿವಾನಂದ ಶಾಸ್ತ್ರಿ ಹೀರೆಮಠ ಹುಬ್ಬಳ್ಳಿ ಮತ್ತಿತರರು ಉಪಸ್ಥಿತರಿದ್ದರು.  ಪಾತ್ರಧಾರಿಗಳು: ಶ್ರೀ  ಮಹಾದೇವತಾತ ಕಲಾ ಸಂಘದ ಅಧ್ಯಕ್ಷರೂ ಅಗಿರುವ  ಪುರುಷೋತ್ತಮ ಹಂದ್ಯಾಳು ಅವರ  ನಿರ್ದೇಶನದಲ್ಲಿ ಮೂಡಿಬಂದ ರಕ್ತರಾತ್ರಿ ನಾಟಕದಲ್ಲಿ ಶ್ರೀಕೃಷ್ಣನಾಗಿ  ಚಿದಾನಂದ ಗವಾಯಿ, ಧರ್ಮರಾಯನಾಗಿ ನಾಗರಾಜ್ ಮರಿಯಮ್ಮನಹಳ್ಳಿ,ಭೀಮನಾಗಿ ತಿಮ್ಮನಗೌಡ ಗೇಣಿಕೆಹಾಳು, ಶಕುನಿ ಪಾತ್ರದಲ್ಲಿ  ಪುರುಷೋತ್ತಮ ಹಂದ್ಯಾಳು ಗಮನ ಸೆಳೆದರು.  ಅಮರೇಶ್ ಹಚ್ಚೊಳ್ಳಿ ದುರ್ಯೋಧನನಾಗಿ, ಅಶ್ವಾಥಾಮನಾಗಿ  ಶೂಲಪಾಣಿಸ್ವಾಮಿ ಗೂಳ್ಯಂ, ಕರ್ಣ,  ಗಂಧರ್ವನಾಗಿ ಮಲ್ಲನಗೌಡ ಹಚ್ಚೋಳಿ, ಅರ್ಜುನನಾಗಿ ಬಸವರಾಜ್ ಸ್ವಾಮಿ, ನವಲಿಪಕ್ಕ ನಾಗಿ ಪಾರ್ವತೀಶ್ ಗೇಣಿಕೆಹಾಳು, ಶಂಕದತ್ತನಾಗಿ  ಕನಕಪ್ಪ ಇಂದರಗಿ, ಶಿವನಾಗಿ  ಲಿಂಗಪ್ಪ , ದ್ರೌಪದಿ ಪಾತ್ರದಲ್ಲಿ ವೀಣಾ ಆಧೋನಿ, ಬಾನುಮತಿ ದುಶೀಲಾ, ಮದಹಂಸಿ, ಅನಂಗ ಪುಷ್ಪರಾಗಿ ಉಮರಾಣಿ ಇಲಕಲ್ಲ, , ಉತ್ತರೆ ಪಾತ್ರದಲ್ಲಿ ಶಿವಕುಮಾರಿ  ಉತ್ತಮವಾಗಿ ಅಭಿನಯಿಸಿದರು. ಸಂಗೀತ:  ಕ್ಯಾಸಿಯೋ ವನ್ನು ತಿಪ್ಪೇಸ್ವಾಮಿ ಸೂಲದಹಳ್ಳಿ ನುಡಿಸಿದರೆ,  ವಿರುಪಾಕ್ಷ ರಾವ್ ಮೋರಿಗೇರಿ ತಬಲ ಸಾಥ್ ನೀಡಿದರು.ಪ್ರಸಾದನ ಮತ್ತು ವಸ್ತ್ರಾಂಲಾಕಾರ ಮುರಳಿಧರ ಚಳ್ಳಿಕೆರೆ ನೆರವೇರಿಸಿದರು. ಸಂಘದ ವತಿಯಿಂದ  ಕಲಾವಿದರು, ಸಂಗೀತಗಾರರಿಗೆ ಪ್ರಶಸ್ತಿ ಪತ್ರ ಹಾಗು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.



 

Post a Comment

0 Comments

Ad Code

Responsive Advertisement