Ticker

6/recent/ticker-posts

Ad Code

Responsive Advertisement

ಹೆಡ್‍ಕಾನ್ಸ್‍ಟೇಬಲ್ ದೆಹಲಿ ನೇಮಕಾತಿ ಪರೀಕ್ಷೆಗಾಗಿ ಅರ್ಜಿ ಆಹ್ವಾನ

ಬೆಂಗಳೂರು, ಮೇ 26,  (ಕರ್ನಾಟಕ ವಾರ್ತೆ) : ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಹೆಡ್ ಕಾನ್ಸ್‍ಟೇಬಲ್ (ಮಿನಿಸ್ಟೀರಿಯಲ್) ದೆಹಲಿ ಪೊಲೀಸ್ ನೇಮಕಾತಿಗಾಗಿ 2022ರ ಪರೀಕ್ಷೆಯನ್ನು ಮುಕ್ತ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತವಾಗಿ ದೇಶಾದ್ಯಂತ ನಡೆಸಲಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಸೆಪ್ಟೆಂಬರ್ 2022 ರಲ್ಲಿ ನಡೆಯಲಿದೆ. ಪರೀಕ್ಷೆಯ ನಿಖರ ದಿನಾಂಕ ವೆಬ್‍ಸೈಟ್‍ನಲ್ಲಿ ತಿಳಿಸಲಾಗುವುದು. ಪರೀಕ್ಷೆಯು ಕಂಪ್ಯೂಟರ್ ಆಧಾರಿತ ವಿಧಾನದಲ್ಲಿ ವಸ್ತುನಿಷ್ಠ ಪ್ರಕಾರದ ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಯನ್ನು ಒಳಗೊಂಡಿರುತ್ತದೆ.

ಅಭ್ಯರ್ಥಿಗಳು 18 ರಿಂದ 25 ವರ್ಷಗಳ ವಯೋಮಿತಿಯಲ್ಲಿರಬೇಕು. 10+2 ಉತ್ತೀರ್ಣ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಹುದ್ದೆಗಳು ಸಂಖ್ಯೆ ಪುರುಷ – 559, ಮಹಿಳೆ -276 ಒಟ್ಟು  835 ಹುದ್ದೆಗಳು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್‍ಸೈಟ್  https://ssc.nic.in,ಅರ್ಜಿಗಳನ್ನು ಸ್ವೀಕರಿಸಲು ಜೂನ್ 16 ಕೊನೆಯ ದಿನಾಂಕವಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-25502520, 9483862020 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Post a Comment

0 Comments

Ad Code

Responsive Advertisement