Ticker

6/recent/ticker-posts

Ad Code

Responsive Advertisement

10,000 ರೈತ ಉತ್ಪಾದಕರ ಸಂಸ್ಥೆಗಳ ಯೋಜನೆ

ಬೆಂಗಳೂರು, ಮೇ 26,  (ಕರ್ನಾಟಕ ವಾರ್ತೆ) : ಕೇಂದ್ರ ಸರ್ಕಾರದ 10,000 FPOಯೋಜನೆಯಡಿಯಲ್ಲಿ ಗುಡ್ಡ ಆಧಾರಿತ ವ್ಯಾಪಾರ ಸಂಸ್ಥೆಗಳು (CBBO ) ಮತ್ತು ರೈತ ಉತ್ಪಾದಕ ಸಂಸ್ಥೆಗಳ (FPO) ಪ್ರಾದೇಶಿಕ ಸಮ್ಮೇಳನವನ್ನು ಮೇ 27 ರಂದು  ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಮ್ಮೇಳನ ಸಭಾಂಗಣ, ಜಿಕೆವಿಕೆ ಕ್ಯಾಂಪಸ್, ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಬಳ್ಳಾರಿ ರಸ್ತೆ, ಬೆಂಗಳೂರು ಇಲ್ಲಿ ನಡೆಸಲಾಗುವುದು.

ಐದು ರಾಜ್ಯ (ಅಂಧ್ರ ಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ) ಗಳಿಂದ ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಂದ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಪುದುಚೇರಿ) ಒಟ್ಟು 600 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಮತ್ತು CBBO ಗಳ ಹಾಗೂ FPOಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಎಲ್ಲಾ ಪಾಲುದಾರರು ಮತ್ತು ರೈತರನ್ನು ಪ್ರೋತ್ಸಾಹಿಸಿ ಒಗ್ಗೂಡಿಸುವ ಮೂಲಕ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ 10,000 FPOಕಾರ್ಯಕ್ರಮದ ಕ್ಷಮತೆಯನ್ನು ಹೆಚ್ಚಿಸುವುದು ಪ್ರಾದೇಶಿಕ ಸಮ್ಮೇಳನದ ಉದ್ದೇಶವಾಗಿದೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಪ್ರಾದೇಶಿಕ ಸಮ್ಮೇಳನಗಳ ಮೂಲಕ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಇತರೆ ಪಾಲುದಾರರನ್ನು ತಲುಪುತ್ತಿದೆ.

ಕೃಷಿ ಮತ್ತು ರೈತರ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಗುಚ್ಛ ಅಧಾರಿತ ವ್ಯಾಪಾರ ಸಂಸ್ಥೆಗಳ (CBBO )  ಮತ್ತು ರೈತ ಉತ್ಪಾದಕರ ಸಂಸ್ಥೆಗಳ (FPO) ರಾಷ್ಟ್ರೀಯ ಸಮ್ಮೇಳನವನ್ನು ದಿನಾಂಕ 21.04 2022 ರಂದು ನವದೆಹಲಿಯಲ್ಲಿ ನಡೆಸಲಾಯಿತು, ಇದರಲ್ಲಿ 300 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅನುಷ್ಠಾನ ಸಂಸ್ಥೆಗಳು, CBBO ಗಳು, FPOಗಳು ಮತ್ತು ಇತರ ಪಾಲುದಾರರು ಭಾಗವಹಿಸಿ 10,000 ಈPಔ ಯೋಜನೆಯ ಪ್ರಮುಖ ಸಾಧನೆಗಳು ಮತ್ತು ಸವಾಲುಗಳು ಕುರಿತು ಚರ್ಚಿಸಿದರು.


CBBO ಮತ್ತು FPOಗಳ ಮೊದಲ ಪ್ರಾದೇಶಿಕ ಸಮ್ಮೇಳನವನ್ನು ದಿನಾಂಕ:06.05.2022 ರಂದು ಜೈಪುರದಲ್ಲಿ 4 ಪಶ್ಚಿಮ ರಾಜ್ಯಗಳಿಗೆ (ಗೋವಾ, ಗುಜರಾತ್, ಮಹಾರಾಷ್ಟ್ರ ಮತ್ತು ರಾಜಸ್ಥಾನ) ಆಯೋಜಿಸಲಾಗಿತ್ತು. ಎರಡನೇ ಪ್ರಾದೇಶಿಕ ಸಮ್ಮೇಳನವನ್ನು ದಿನಾಂಕ 17- 05 - 2022 ರಂದು ಹರಿಯಾಣದ ಪಂಚಕುಲದಲ್ಲಿ 3 ಉತ್ತರ ರಾಜ್ಯಗಳಿಗೆ (ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ) ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಗೆ (ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ) ಆಯೋಜಿಸಲಾಗಿತ್ತು.

ಈ ಸಮ್ಮೇಳನವು ದಕ್ಷಿಣದ 5 ರಾಜ್ಯಗಳು (ಅಂಧ್ರ ಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ) ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಪುದುಚೇರಿ) ಮೂರನೇ ಪ್ರಾದೇಶಿಕ ಸಮ್ಮೇಳನವಾಗಿರುತ್ತದೆ.

ದೇಶಾದ್ಯಂತ ಪಾಲುದಾರರನ್ನು ತಲುಪಲು 10,000 FPO ಯೋಜನೆಯಡಿಯಲ್ಲಿ ಇಂತಹ ಇನ್ನೂ ಹಲವು ಪ್ರಾದೇಶಿಕ ಸಮ್ಮೇಳನಗಳನ್ನು ವಿವಿಧ ಪ್ರದೇಶಗಳಲ್ಲಿ ಆಯೋಜಿಸಲು ಯೋಜಿಸಲಾಗಿದೆ.

ರೈತ ಉತ್ಪಾದಕರ ಸಂಸ್ಥೆಗಳ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಒಟ್ಟುಗೂಡಿಸಿ ಆರ್ಥಿಕ ಸಾಮರ್ಥ್ಯ, ವ್ಯವಹಾರ ಸಾಮರ್ಥ್ಯ ಮತ್ತು ಮಾರುಕಟ್ಟೆ ಸಂಪರ್ಕವನ್ನು ಹೆಚ್ಚಿಸಿ, ರೈತರ ಆದಾಯಯನ್ನು ಅಭಿವೃದ್ಧಿಗೊಳಿಸಲಾಗುತ್ತದೆ.  ಈPಔ ಮಹತ್ವವನ್ನು ಅರಿತು, ಭಾರತ ಸರ್ಕಾರವು ಕೇಂದ್ರ ವಲಯ “10,000 ರೈತ ಉತ್ಪಾದಕ ಸಂಸ್ಥೆಗಳ ರಚನೆ ಮತ್ತು ಉತ್ತೇಜನ” ಎಂಬ ಹೊಸ ಯೋಜನೆಯನ್ನು ರೂಪಿಸಲಾಗಿದ್ದು,  ಸನ್ಮಾನ್ಯ ಪ್ರಧಾನ ಮಂತ್ರಿಗಳು  ರೂ.6868 ಕೋಟಿಗಳ ಅನುದಾನದಲ್ಲಿ ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಲು ದಿನಾಂಕ :29-02-2020 ರಂದು ಚಿತ್ರಕೂಟದಲ್ಲಿ (ಉತ್ತರ) ಚಾಲನೆ ನೀಡಿರುತ್ತಾರೆ.

ಈ ಯೋಜನೆಯಡಿ ಉತ್ಪನ್ನಗಳ ಮೌಲ್ಯ ಸರಪಳಿಯಲ್ಲಿ ತೊಡಗಿರುವ ರೈತರ ಸಂಘಟನೆಯಿಂದ ಪ್ರಾರಂಭಿಸಿ ಮೂಲ ಮಾಹಿತಿ ಸಮೀಕ್ಷೆ: ಉತ್ಪನ್ನ ಗುಚ್ಚಗಳ ಗುರುತಿಸುವಿಕೆ, ಗುಂಪುಗಳ ರಚನೆ, ನೋಂದಣಿ ಮತ್ತು ವ್ಯವಹಾರ ಯೋಜನೆ ತಯಾರಿಕೆ, ಸಾಮರ್ಥ್ಯ ಬಲವರ್ಧನೆಯಿಂದ ವ್ಯವಹಾರ ಯೋಜನೆ ತಯಾರಿಕೆ ಸೇರಿದಂತೆ ರೈತ ಉತ್ಪಾದಕರ ಸಂಘಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವವರೆಗಿನ ಎಲ್ಲಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ನಿರ್ಣಾಯಕ ಪಾತ್ರವನ್ನು CBBO ಗಳಿಗೆ ಒದಗಿಸಲಾಗಿದೆ.  ಹಾಗೆಯೇ CBBO ಗಳು ಅನುಷ್ಠಾನ ಸಂಸ್ಥೆ ಹಾಗೂ ಎಫ್‌ಪಿಒಗಳೊoದಿಗೆ ನಿಕಟ ಸಂಪರ್ಕದಿಂದ ಕಾರ್ಯನಿರ್ವಹಿಸಬೇಕಾಗಿರುತ್ತದೆ.

ಉತ್ಪನ್ನ ಗುಚ್ಛ ಆಧಾರದ ಮೇಲೆ ಉತ್ಪಾದನೆ, ಉತ್ಪಾದಕತೆ, ಮಾರುಕಟ್ಟೆ ಸಂಪರ್ಕ ಹೆಚ್ಚಿಸಿ, ವೈವಿಧ್ಯೀಕರಣ, ಮೌಲ್ಯವರ್ಧನೆ, ಸಂಸ್ಕರಣೆ ಮತ್ತು ರಫ್ತುಗಳನ್ನು ಉತ್ತೇಜಿಸಿ ಹಾಗೂ ಕೃಷಿ ಆಧಾರಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಪರಿಣಾಮಕಾರಿಯಾಗಿ ರೈತರನ್ನು ಆರ್ಥಿಕವಾಗಿ ಈ ಯೋಜನೆಯಡಿ ಸಬಲಗೊಳಿಸಬಹುದಾಗಿದೆ. FPO ಗಳ ರಚನೆಯಲ್ಲಿ ವಿಶೇಷ ಉತ್ಪನ್ನದ ಅಭಿವೃದ್ಧಿಗಾಗಿ ಗುಚ್ಛ ಅಧಾರಿತ ವಿಧಾನ ಅನುಸರಿಸುವುದರೊಂದಿಗೆ ಅಳವಡಿಸಿ “ಒಂದು ಜಿಲ್ಲೆ ಒಂದು ಉತ್ಪನ್ನ”ದ ಮಾದರಿಗೆ ಹೆಚ್ಚಿನ ಒತ್ತು ನೀಡಲಾಗುವುದು.

ರೈತ ಉತ್ಪಾದಕರ ಸಂಸ್ಥೆಗಳ ಸಮರ್ಥ ಮತ್ತು ಆರ್ಥಿಕವಾಗಿ ಸಶಕ್ತರನ್ನಾಗಿಸಲು 3 ವರ್ಷಗಳವರೆಗೆ ನಿರ್ವಹಣಾ ವೆಚ್ಚವಾಗಿ ಪ್ರತಿ FPO ಗೆ ರೂ.18.00 ಲಕ್ಷಗಳ ಆರ್ಥಿಕ ಬೆಂಬಲವನ್ನು ಒದಗಿಸಲಾಗಿದೆ FPO ಗಳ ಆರ್ಥಿಕ ಬುನಾದಿಯನ್ನು ಬಲಪಡಿಸಲು, ಪ್ರತಿ ಸದಸ್ಯರಿಗೆ 2000/- ರೂ.ಗಳಂತೆ ಪ್ರತಿ FPO ಗೆ ಗರಿಷ್ಠ ರೂ. 15 ಲಕ್ಷ ಮೀರದಂತೆ ಈಕ್ವಿಟಿ ಅನುದಾನವನ್ನು ಹೊಂದಾಣಿಕೆ ರೂಪದಲ್ಲಿ ನೀಡಲು ಅವಕಾಶವಿದೆ. ಹಾಗೆಯೇ ಯೋಜನೆಯಡಿ FPO ಗಳಿಗೆ ರೂ. 2.00 ಕೋಟಿಗಳವರೆಗೆ ಕ್ರೆಡಿಟ್ ಗ್ಯಾರಂಟಿ ಸೌಲಭ್ಯ ಲಭ್ಯವಿದೆ

ರಾಜ್ಯ    /           ಕೇಂದ್ರಾಡಳಿತ ಪ್ರದೇಶಗಳ ಪ್ರಗತಿ(ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಪುದುಚೆರಿ), 858 ಉತ್ಪನ್ನಗಳ ಗುಚ್ಛಗಳನ್ನು ಹಂಚಿಕೆ ಮಾಡಲಾಗಿ 591 ರೈತ ಉತ್ಪಾದಕರ ಸಂಸ್ಥೆಗಳ ನೊಂದಣಿಯಾಗಿರುತ್ತದೆ. ಈ ಯೋಜನೆಯಡಿ 2.10 ಲಕ್ಷಕ್ಕೂ ಅಧಿಕ ರೈತರನ್ನು ಸಂಘಟಿಸಲಾಗಿರುತ್ತದೆ.  ಸುಮಾರು 1.12 ಲಕ್ಷ ರೈತರು FPO ಗಳ ಷೇರುದಾರರಾಗಿ ನೊಂದಾಯಿಸಿರುತ್ತಾರೆ.

ರೈತ ಸದಸ್ಯರಿಂದ ರೂ. 16.43 ಕೋಟಿಗಳಷ್ಟು ಈಕ್ವಿಟಿ ಸಂಗ್ರಹ,  ಬುಡಕಟ್ಟು ಜಿಲ್ಲೆಗಳಲ್ಲಿ 12 FPO ಗಳನ್ನು ನೊಂದಾಯಿಸಲಾಗಿದೆ. ಮಹಾತ್ವಾಕಾಂಕ್ಷಿ ಜಿಲ್ಲೆಗಳಲ್ಲಿ 90 FPO ಗಳನ್ನು ನೊಂದಾಯಿಸಲಾಗಿದೆ.  57 ಮಹಿಳಾ ಕೇಂದ್ರಿತ FPO ಗಳನ್ನು ನೊಂದಾಯಿಸಲಾಗಿದೆ.

ಕ್ಷೇತ್ರ ಮಟ್ಟದ ಅನುಷ್ಠಾನದಲ್ಲಿ CBBO ಗಳ ಪ್ರಾಮುಖ್ಯತೆ ಮತ್ತು FPO ಗಳ ಅನುಭವವನ್ನು ಪರಿಗಣಿಸಿ CBBO  ಗಳ 70, ಪ್ರತಿನಿಧಿಗಳು ಮತ್ತು ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಪುದುಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಫ್‌ಪಿಒಗಳಿಂದ 450 ಪ್ರತಿನಿಧಿಗಳನ್ನು ಇಂದಿನ ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ. ಎಲ್ಲಾ ಅನುಷ್ಠಾನ ಸಂಸ್ಥೆಗಳು, ಎಫ್‍ಪಿಒಗಳೊಂದಿಗೆ ವ್ಯವಹರಿಸುವ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳನ್ನು ಸಹ ಆಹ್ವಾನಿಸಲಾಗಿದೆ.

ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರ್ಕೆಟಿಂಗ್), ಡಾ. ಎನ್‍. ವಿಜಯ ಲಕ್ಷ್ಮಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಯೋಜನಾ ಪ್ರಗತಿ, ಯೋಜನೆಯಡಿಯಲ್ಲಿ FPO ಗಳಿಗೆ ಒದಗಿಸಲಾದ ಪ್ರಯೋಜನಗಳು,CBBO ಗಳಿಂದ ನಿರೀಕ್ಷೆಗಳು, ಮತ್ತು ಯೋಜನೆಯನ್ನು ರೂಪಿಸಿದ ರೀತಿಯಲ್ಲಿಯೇ ಅನುಷ್ಠಾನಗೊಳಿಸುವ ಕ್ರಮಗಳ ಕುರಿತಾದ ಮಾಹಿತಿಯನ್ನು ಹಂಚಿಕೊಂಡರು.

ಕರ್ನಾಟಕ ಸರ್ಕಾರದ ಕೃಷಿ ಸಚಿವರು, ಬಿ.ಸಿ.ಪಾಟೀಲ್ ಅವರು ಸುಸ್ಥಿರ ಆದಾಯ ಅಧಾರಿತ ಕೃಷಿಗಾಗಿ ರೈತರು ಎಫ್‌ಪಿಒಗಳನ್ನು ಪ್ರೋತ್ಸಾಹಿಸುವುದಾಗಿ ತಿಳಿಸಿ,


...


Post a Comment

0 Comments

Ad Code

Responsive Advertisement