Ticker

6/recent/ticker-posts

Ad Code

Responsive Advertisement

ದೋಹಾ, ಕತಾರ್

ಕರ್ನಾಟಕ ಸಂಘ ಕತಾರ್ ನ ಶಿಕ್ಷಣ ವಿಭಾಗದ ವಾರಾಂತ್ಯ "ಕನ್ನಡ ಕಲಿ" ೨೦೨೨ ನೇ ಸಾಲಿನ ಹೊಸ ತರಗತಿಗಳು ಪ್ರಾರಂಭ ಕರ್ನಾಟಕ ಸಂಘ ಕತಾರ್ ನ ನೆಚ್ಚಿನ " ಕನ್ನಡ ಕಲಿ" ವಾರಾಂತ್ಯ ಶಾಲೆಯ ೨೦೨೨ನೆ ಸಾಲಿನ ಹೊಸ ತರಗತಿಗಳನ್ನು ೨೨ - ಮೇ – ೨೦೨೨ ಪ್ರಾರಂಭಿಸಿತು. ಹನ್ನೆರಡು ವರ್ಷಗಳ ಹಿಂದೆ ಪ್ರಾರಂಭವಾದ "ಕನ್ನಡ ಕಲಿ" ವಾರಾಂತ್ಯದ ಕನ್ನಡ ಶಾಲೆ ಎರಡು ವರ್ಷಗಳ ಆನ್ಲೈನ್ ಕಲಿಕೆಯ ನಂತರ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಆಫ್ಲೈನ್ ತರಗತಿ ಪ್ರಾರಂಭಿಸಿದೆ.ಸಮಿತಿಯ ಸದಸ್ಯರು, ಪೋಷಕರು, ಶಿಕ್ಷಕರು ಮತ್ತು ಮಕ್ಕಳ ನಡುವಿನ ಸಂವಾದ ಕಾರ್ಯಕ್ರಮದ ಪ್ರಮುಖ ಅಂಶವಾಗಿತ್ತು. ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಮಹೇಶ್ ಗೌಡ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರು ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು, ಡಿಪಿಎಸ್ ಮೊನ್ರಾಚ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರು ಶ್ರೀ ಸುಜಿತ್, ವೈಬ್ರಂಟ್ ಸುರಕ್ಷತಾ ತರಬೇತಿ ಸೇವೆಗಳ ವ್ಯವಸ್ಥಾಪಕ ನಿರ್ದೇಶಕರು ಶ್ರೀ ಸಂತೋಷ್ ಪಿಳ್ಳೈ ಮತ್ತು ಶಿಕ್ಷಕರು ಮತ್ತು ಆಡಳಿತ ಸಮಿತಿ ಸದಸ್ಯರು ಭಾಗವಾಹಿಸಿದ್ದರು.


ಸಂಘದ ಸದಸ್ಯ ಪೋಷಕರು ಶ್ರೀ ಮಹೇಶ್ ಗೌಡ ಅವರೊಂದಿಗೆ ಸಂವಾದ ನಡೆಸಿ ಕನ್ನಡ ಭಾಷೆಯನ್ನು ಕತಾರ್‌ನ ಶಾಲೆಗಳಲ್ಲಿ ಪರಿಚಯಿಸಲು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಈ ಕಾರ್ಯದಿಂದ ಸಮುದಾಯಕ್ಕೆ ಸಹಾಯ ಹಾಗೂ ಮಕ್ಕಳಿಗೆ ಪ್ರಯೋಜನವಾಗುತ್ತದೆ ಎಂದು ಮನವಿ ಮಾಡಿಕೊಂಡರು. ಶ್ರೀ ಮಹೇಶ್ ಗೌಡ ಅವರು ಈ ಸಂದರ್ಭದಲ್ಲಿ ಮಾತನಾಡಿ ಕನ್ನಡ ತರಗತಿಗಳನ್ನು ನೆಡೆಸಲು ತಮ್ಮ ಸಂಸ್ಥೆಯಲ್ಲಿ ಅವಕಾಶ ನೀಡಿದ್ದಕ್ಕಾಗಿ ಶ್ರೀ ಪಿಳ್ಳೈ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಟಿ ಎಸ್ ನಾಗಾಭರಣ ಅವರ ಮಾತುಗಳು

"ಈ ವಿಷಯ ತಿಳಿದು ಪ್ರಾಧಿಕಾರ ಹರ್ಷಿಸುತ್ತದೆ. ಹೊರನಾಡಿನಲ್ಲಿ ಕನ್ನಡ ಕಲಿಸುವ ಕಾರ್ಯ ನಿರಂತರವಾಗಿ ನಡೆದು ಕತಾರ್ ನಲ್ಲೂ ಕನ್ನಡದ ಘಮ ಹರಡಲಿ.

ಹೊರ ದೇಶದಲ್ಲೂ ನಮ್ಮ, ಸಂಸ್ಕೃತಿ, ಭಾಷೆ, ಸಾಹಿತ್ಯ ಲೋಕವನ್ನು ಪರಿಚಯಿಸುತ್ತಿರುವ ತಮ್ಮ ಕಾರ್ಯಕ್ಕೆ ಪ್ರಾಧಿಕಾರ ಅಖಂಡ ಕನ್ನಡ ಜನತೆಯ ಪರವಾಗಿ ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಅಧ್ಯಕ್ಷರು,

ಕನ್ನಡ ಅಭಿವೃದ್ದಿ ಪ್ರಾಧಿಕಾರ

ವಿಧಾನಸೌಧ, ಬೆಂಗಳೂರು.


  Karnataka Sangha Qatar new batch of Kannada Kali classes gets overwhelming registrations.

Karnataka Sangha Qatar started fresh batch of weekend Kannada classes. Favoritely known as " Kannada Kali" Weekend Kannada school which started 12 years ago, a new batch physical classes will start on 20/05/2022 with more than 100 Students due to COVID last two years online classes was conducted.

An interactive session between Committee Members, parents, teachers and kids was highlight of today's event. Event was presided by President Mr. Mahesh Gowda, ICC vice president Mr. Subramanya Hebbagilu, Headmaster of Primary section of DPS Monrach International School Mr. Sujith and Mr. Santosh Pillai, Managing Director of Vibrant Safety training services along with the teachers and Management committee of Karnataka Sangha Qatar.

Parents interacted with Mr Mahesh Gowda and requested his support to have Kannada subject introduced in schools of Qatar which will benefit the community. Mr Gowda thanked Mr. Pillai for providing classroom space for conducting these classes.

President of Kannada Development Authority Mr.Nagabharana has appreciated this development by issuing a appreciation on behalf of Karnataka development Authority and has assured full support from his side on all upcoming Kannada related projects of Karnataka Sangha Qatar.




 

Post a Comment

0 Comments

Ad Code

Responsive Advertisement