Ticker

6/recent/ticker-posts

Ad Code

Responsive Advertisement

" ವಾಸವಿ ಶತ ಕಂಠ ಗೀತ ಗಾಯನ", "108 ವಿಧ ನೈವೇದ್ಯ ಸಮರ್ಪಣೆ"

 ಮಧುಗಿರಿ:  ತಾಲೂಕು  ವಾಸವಿ ಯುವತಿಯರ ಸಂಘ , ಆರ್ಯ ವೈಶ್ಯ ಮಂಡಳಿ ಮತ್ತು ಎಲ್ಲಾ ಆರ್ಯ ವೈಶ್ಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇತ್ತೀಚೆಗೆ ವಾಸವಿ ಜಯಂತಿಯ ಅಂಗವಾಗಿ " ವಾಸವಿ ಶತ ಕಂಠ ಗೀತ ಗಾಯನ",  "108 ವಿಧ ನೈವೇದ್ಯ ಸಮರ್ಪಣೆ" ಮತ್ತು  " 108 ವಿಧದ ಹೂಗಳ ಅಲಂಕಾರ, ಹಾಗೂ 108 ಜನ ಮಹಿಳೆಯರಿಂದ ಸಾಂಪ್ರದಾಯಿಕ ಉಡುಗೆ ತೊಟ್ಟು, 108 ನಿಮಿಷಗಳ ಕಾಲ ಗೀತಗಾಯನ ನಡೆಸಿದ್ದರು.  ಈ ಕಾರ್ಯಕ್ರಮವು  ತೆಲುಗು ಬುಕ್ ಆಫ್ ರೆಕಾರ್ಡ್ಸ್" ನಲ್ಲಿ ಸ್ಥಾನ ಪಡೆದಿದೆ. 

 ಅಂದಿನ ಕಾರ್ಯಕ್ರಮದಲ್ಲಿ ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಗೀತಾಫಣೀಶ್,  ನಿವೇದಿತಾ ಮಧು, ಸ್ವಪ್ನಾ ಸತೀಶ್, ಲಲಿತಾ ರಾಘವೇಂದ್ರ, ಆರ್ಯವೈಶ್ಯ ಮಂಡಳಿಯ ಗೌರವಾಧ್ಯಕ್ಷ ಡಿ.ಜಿ.ಶಂಕರನಾರಾಯಣ ಶೆಟ್ಟಿ,  ಅಧ್ಯಕ್ಷ ಕೆ.ಎನ್.ಶ್ರೀನಿವಾಸ್ ಮೂರ್ತಿ, ಭಾಗವಹಿಸಿದ್ದರು. 


ತೆಲುಗು ಬುಕ್ ಆಫ್ ರೆಕಾರ್ಡ್ ಪ್ರಶಂಸಾ ಪತ್ರವನ್ನು ತಗ್ಗೀಹಳ್ಳಿ ರಾಮಕೃಷ್ಣ ಮಠದ ರಮಾನಂದ ಚೈತನ್ಯ ಸ್ವಾಮೀಜಿ ಸಂಘದ ಪದಾಧಿಕಾರಿಗಳಿಗೆ ನೀಡಿ ಗೌರವಿಸಿದ್ದಾರೆ.

-ವರದಿ:ನಾಗೇಶ್ ಜೀವಾ ಪುರವರ

Post a Comment

0 Comments

Ad Code

Responsive Advertisement