ಬಳ್ಳಾರಿ ಮೇ 30. ಸಿರುಗುಪ್ಪ ತಾಲೂಕಿನ ನಡವಿ ಗ್ರಾಮದಲ್ಲಿ 2021-22ನೇ ಸಾಲಿನ ಲೋಕಪಯೋಗಿ ಇಲಾಖೆಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮೈಕ್ರೋ ಅನುದಾನದ ಅಡಿಯಲ್ಲಿ ಮಂಜೂರಾದ ಅಭಿವೃದ್ಧಿ ಕಾಮಗಾರಿಗೆ ಕಂಪ್ಲಿ-ಸಿರುಗುಪ್ಪ ಮುಖ್ಯರಸ್ತೆಯಿಂದ ಸಿದ್ದಪ್ಪ ಕ್ಯಾಂಪ್ ವರೆಗೆ ರಸ್ತೆ ಡಾಂಬರೀಕರಣ ಮಾಡುವ ಕಾಮಗಾರಿಗೆ ಅಂದಾಜು ಮೊತ್ತ 300 ಲಕ್ಷ ರೂಪಾಯಿಗಳು ವೆಚ್ಚದಲ್ಲಿ ಸಿರುಗುಪ್ಪ ತಾಲೂಕಿನ ಮಾನ್ಯ ಜನಪ್ರಿಯ ಶಾಸಕರಾದ ಎಂ.ಎಸ್ ಸೋಮಲಿಂಗಪ್ಪ ಅವರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ರಾಮಲಿಂಗ ಸ್ವಾಮಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ದೇವಮ್ಮ ಫಕೀರಪ್ಪ ಹಾಗೂ ಮುಖಂಡರಾದ ಕಾಂತಪ್ಪ,ರಾಮಣ್ಣ, ರಾಮಲಿಂಗಪ್ಪ ಗೌಡ, ನಾಗರಾಜ್ ಗೌಡ,ಮಲ್ಲಿಕಾರ್ಜುನ,ಮಟ್ಟಿ ರಾಮಣ್ಣ,ಕಂಪ್ಲಿ ಗಾದಿಲಿಂಗಪ್ಪ ವೆಂಕನಗೌಡ,ಹನುಮಯ್ಯ ಮತ್ತು ದೇವು ನಾಯಕ್ ನಡವಿ ಮುಂತಾದವರು ಭಾಗವಹಿಸಿದ್ದರು.
0 Comments