Ticker

6/recent/ticker-posts

Ad Code

Responsive Advertisement

ಬಳ್ಳಾರಿಯಲ್ಲಿ ರೌಡಿಗಳ ಪರೇಡ್ ಬಾಲಬಿಚ್ಚಿದ್ರೇ ಗಡಿಪಾರು:ಎಎಸ್ಪಿ ಗುರುನಾಥ ಮತ್ತೂರು ಎಚ್ಚರಿಕೆ

ಬಳ್ಳಾರಿ,ಮೇ 30: ಬಳ್ಳಾರಿ ನಗರದ ಡಿಎಆರ್ ಕವಾಯಿತು ಮೈದಾನದಲ್ಲಿ ರೌಡಿಗಳ ಪರೇಡ್ ಸೋಮವಾರ ನಡೆಯಿತು.ಎಸ್ಪಿ ಸೈದುಲು ಅಡಾವತ್ ಅವರ ನಿರ್ದೇಶನದ ಅನುಸಾರ ರೌಡಿಗಳ ಪರೇಡ್ ನಡೆಸಲಾಯಿತು.


ಎಎಸ್ಪಿ ಗುರುನಾಥ ಮತ್ತೂರು ಅವರು ರೌಡಿಗಳ ಪರೇಡ್ ವೀಕ್ಷಿಸಿದರು.

ರೌಡಿಗಳು ಎಲ್ಲರಂತೆ ಸಾಮಾನ್ಯ ಜೀವನ ನಡೆಸಿದರೇ ಒಕೆ;ಅದನ್ನು ಬಿಟ್ಟು ಅನೈತಿಕ ಚಟುವಟಿಕೆಗಳಲ್ಲಿ ಮತ್ತು ಅಕ್ರಮ ಹಾಗೂ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದು ಕಂಡುಬಂದಲ್ಲಿ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಸಿದರು.

ನಿಮ್ಮ ವರ್ತನೆಗಳನ್ನು ಪೊಲೀಸ್ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು,ವರ್ತನೆಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಳ್ಳಾರಿ ನಗರ ಡಿವೈಎಸ್ಪಿ ರಮೇಶಕುಮಾರ್,ಬಳ್ಳಾರಿ ನಗರದ ಇನ್ಸ್‍ಪೆಕ್ಟರ್‍ಗಳು,ಸಬ್‍ಇನ್ಸ್‍ಪೆಕ್ಟರ್‍ಗಳು,ಪಿಎಸ್‍ಐ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.



 


Post a Comment

0 Comments

Ad Code

Responsive Advertisement