Ticker

6/recent/ticker-posts

Ad Code

Responsive Advertisement

100 ಟನ್ ಮಾರಾಟದ ನಿರೀಕ್ಷೆ*300 ವೈವಿಧ್ಯಮಯ ಮಾವು ತಳಿಗಳ ಪ್ರದರ್ಶನ ಬಳ್ಳಾರಿಯಲ್ಲಿ ಮಾವು ಮೇಳಕ್ಕೆ ಭರ್ಜರಿ ರಿಸ್ಪಾನ್ಸ್

ಬಳ್ಳಾರಿ,ಮೇ 30: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕಿಸಾನ್ ಭಾಗಿದಾರಿ ಪ್ರಾಥಮಿಕ್ತ ಹಮಾರಿ ಆಂದೋಲನದ ಆಶಯದಂತೆ ತೋಟಗಾರಿಕೆ ಇಲಾಖೆ ಹಾಗೂ ಹಾಪ್ ಕಾಮ್ಸ್ ಸಹಯೋಗದಲ್ಲಿ ಬಳ್ಳಾರಿ ತಹಶೀಲ್ದಾರರ ಕಛೇರಿ ಆವರಣದಲ್ಲಿ ಬಳ್ಳಾರಿಯಲ್ಲಿ ಇದೇ ಮೊದಲ ಬಾರಿಗೆ ಏರ್ಪಡಿಸಿರುವ ಬೃಹತ್ ಮಾವು ಮೇಳ/ಮಾವು ಜಾತ್ರೆಗೆ ಗಣಿನಾಡಿನ ಜನರಿಂದ ಭರ್ಜರಿ ರಿಸ್ಪಾನ್ಸ್ ಲಭಿಸಿದೆ.

ಸೋಮವಾರದಿಂದ ಆರಂಭವಾದ ಈ ಬೃಹತ್ ಮಾವು ಮೇಳದಲ್ಲಿ 300ಕ್ಕೂ ಹೆಚ್ಚು ಮಾವಿನ ಹಣ್ಣಿನ ತಳಿಗಳನ್ನು ಪ್ರದರ್ಶನ ಗಮನಸೆಳೆಯುತ್ತಿದೆ. “ಬೆನೆಶಾನ್” ಮಾವಿನ ಹಣ್ಣಿನ ತಳಿಯ ಸ್ವಾದ ಮಾತ್ರ ಸವಿದಿರುವ ಗಣಿನಾಡಿನ ಜನರಿಗೆ ವೈವಿಧ್ಯಮಯ ಮಾವಿನ ತಳಿಗಳ ಸ್ವಾದ ಸವಿಯಲು ಭಾಗ್ಯ ಲಭಿಸಿದ್ದು,ಖರೀದಿಗೆ ಮುಗಿಬಿದ್ದಿದು ಕಂಡುಬಂದಿತು.

ಅಲ್ಪೇನ್ಸೋ,ರತ್ನಗಿರಿ,ಕೇಸರ್,ಬೆನೆಶಾನ್,ತೋತಾಪೂರಿ,ರಸಪೂರಿ,ಸಿಂಧೂರ್ ಸೇರಿದಂತೆ ವೈವಿಧ್ಯಮಯ ಮಾವಿನ ಹಣ್ಣುಗಳನ್ನು ಮಾವುರಸಿಕರು ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಾ,ಅವುಗಳ ಬಗ್ಗೆ ವಿಚಾರಿಸುತ್ತಾ ಖರೀದಿಸುತ್ತಿದ್ದುದು ಕಂಡುಬಂದಿತು. ಮೇಳ ಆಯೋಜಿಸಿದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಗಣಿನಾಡಿನ ಜನರು ಹಂಚಿಕೊಂಡಿದ್ದು ವಿಶೇಷ.

ಕೋಲಾರ,ಧಾರವಾಡ,ಹಾವೇರಿ,ಗಂಗಾವತಿ,ಕೊಪ್ಪಳ, ಶಿರಸಿ, ಅನಂತಪುರ, ಹರಪನಹಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ರೈತರು ರಾಸಾಯನಿಕ ಮುಕ್ತ ವೈಜ್ಞಾನಿಕವಾಗಿ, ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳನ್ನು ಪ್ರದರ್ಶನದಲ್ಲಿಟ್ಟು ಮಾರಾಟ ಮಾಡಿದರು.

100 ಟನ್ ಮಾವು ಮಾರಾಟದ ನಿರೀಕ್ಷೆ: ಬಳ್ಳಾರಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಮಾವು ಮೇಳದಲ್ಲಿ ಮೂರು ದಿನಗಳಲ್ಲಿ 100 ಟನ್ ಮಾವು ಮಾರಾಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶರಣಪ್ಪ ಭೋಗಿ ಅವರು ತಿಳಿಸಿದರು.

ಬೆನೆಶಾನ್ ಬಿಟ್ಟರೇ ಬೇರೆ ಹಣ್ಣಿನ ರುಚಿಯನ್ನು ನಮ್ಮ ಭಾಗದ ಜನರು ಸವಿದಿಲ್ಲ;ವೈವಿಧ್ಯಮಯ ತಳಿಗಳ ರುಚಿ ಸವಿಯಲಿ ಎನ್ನುವ ಸದುದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ. ವಿವಿಧೆಡೆಯಿಂದ ಆಗಮಿಸಿದ್ದ ರೈತರಿಗೆ 35 ಮಳಿಗೆಗಳನ್ನು ಒದಗಿಸಿ ಅನುಕೂಲ ಮಾಡಿಕೊಡಲಾಗಿದೆ. ಇಲ್ಲಿನ ಜನರ ರಿಸ್ಪಾನ್ಸ್ ನೋಡಿಕೊಂಡು ಅಗತ್ಯವಿದ್ದಲ್ಲಿ ಇನ್ನೊಂದು ದಿನ ಮೇಳ ವಿಸ್ತರಿಸಲಾಗುವುದು ಎಂದರು.

ಅವಳಿ ಜಿಲ್ಲೆಗಳಲ್ಲಿ ಕೇವಲ 300 ಹೆಕ್ಟೇರ್ ಮಾತ್ರ ಮಾವು ಬೆಳೆಯಲಾಗುತ್ತಿದೆ ಎಂದು ವಿವರಿಸಿದ ಅವರು ಸದ್ಯ ಮಾರುಕಟ್ಟೆಯಲ್ಲಿ ಕ್ಯಾಲ್ಸಿಯಂ ಕಾರ್ಬೋಹೈಡ್ರೆಡ್ ರಾಸಾಯನಿಕ ಸಿಂಪಡಿಸಿ ಮಾವುಗಳನ್ನು ಹಣ್ಣುಗಳನ್ನಾಗಿ ಮಾರಾಟ ಮಾಡಲಾಗುತ್ತಿದೆ;ಅವುಗಳನ್ನು ತಿಂದಲ್ಲಿ ಕ್ಯಾನ್ಸರ್ ಸೇರಿದಂತೆ ನಾನಾ ರೋಗಗಳಿಗೆ ಆಹ್ವಾನ ಮಾಡಿಕೊಟ್ಟಂತಾಗಲಿದೆ. ಆದ ಕಾರಣ ನೈಸರ್ಗಿಕವಾಗಿ ಮಾಗಿಸಿದ ಮಾವುಗಳನ್ನೇ ಖರೀದಿಸಿ. ಮೇಳದಲ್ಲಿ ಮಾರಾಟಕ್ಕಿಡಲಾಗಿರುವ ಎಲ್ಲವೂಗಳು ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳಾಗಿದ್ದು,ಈ ಕುರಿತು ಇಲಾಖೆಯಿಂದಲೇ ಪರಿಶೀಲನೆ ನಡೆಸಿದ ನಂತರವೇ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದರು.

*ಬಳ್ಳಾರಿಯಲ್ಲಿ ಇನ್ಮುಂದೆ ಪ್ರತಿ ವರ್ಷ ಮಾವು ಮೇಳ:ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು

ಬಳ್ಳಾರಿಯಲ್ಲಿ ಇನ್ಮುಂದೆ ಪ್ರತಿವರ್ಷ ಮಾವು ಮೇಳ ಆಯೋಜಿಸಲಾಗುವುದು. ಪ್ರತಿ ವರ್ಷ ನಡೆಸಲು ಅಧಿಕಾರಿಗಳಿಗೆ ಸೂಚಿಸುವುದರೊಂದಿಗೆ, ಸಚಿವರ ಬಳಿಯೂ ಮಾತನಾಡುವುದಾಗಿ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದರು.

ನಗರದ ತಹಸೀಲ್ದಾರ್ ಕಚೇರಿ ಆವಣರದಲ್ಲಿ ಏರ್ಪಡಿಸಿದ್ದ ಮಾವು ಮೇಳಕ್ಕೆ ಚಾಲನೆ ನಿಡಿ ಮಾತನಾಡಿದ ಅವರು ಬಳ್ಳಾರಿಯಲ್ಲಿ ಮೊದಲ ಬಾರಿ ಮಾವು ಮೇಳ ನಡೆಯುತ್ತಿರುವುದಕ್ಕೆ ಸಂತಸವಾಗುತ್ತಿದೆ.ಕೇವಲ ಬೆನೆಶಾನ್ ಮಾವಿನ ತಳಿ ಸಿಗುತ್ತಿದ್ದ ಇಲ್ಲಿ , ರಾಜ್ಯ ಹಾಗೂ ದೇಶದ 300 ಕ್ಕೂ ಹೆಚ್ಚು ತಳಿಗಳು ಮೂರು ದಿನಗಳ ಕಾಲ ಸಿಗಲಿವೆ ಎಂದರು.

ಮೇಳದ ಇನ್ನೊಂದು ವಿಶೇಷ - ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣುಗಳು ತಲುಪುವುದು.ಇದರಿಂದ ರೈತರಿಗೆ ಉತ್ತಮ ಬೆಲೆ ಸಿಕ್ಕರೆ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮಾವು ಸಿಗುತ್ತದೆ ಎಂದರು.

ವೈಜ್ಞಾನಿಕವಾಗಿ, ನೈಸರ್ಗಿಕವಾಗಿ ಮಾಗಿದ ಹಲವು ತಳಿಗಳ ಮಾವಿನ ಹಣ್ಣುಗಳನ್ನು ಮೇಳದಲ್ಲಿ ಲಭ್ಯವಿದೆ ಎಂದು ವಿವರಿಸಿದ ಅವರು ಮಾವು ಮೇಳದಂತೆ ಅಂತರರಾಜ್ಯ ಮಟ್ಟದ ಬೇರೆ ಬೇರೆ ಹಣ್ಣುಗಳ ಮೇಳವು ನಡೆಸಬೇಕಿದೆ. ಇದರಿಂದ ಬೇರೆ ಬೇರೆ ರಾಜ್ಯದ ವಿವಿಧ ತಳಿಗಳ ಹಣ್ಣುಗಳು ಬಳ್ಳಾರಿ ಜನರಿಗೆ ಲಭ್ಯವಾಗಲಿದೆ ಎಂದರು.

ಮಾವಿನಲ್ಲಿ ಔಷಧಿಯ ಗುಣಗಳಿದ್ದು, ನಿಮ್ಮ ಮನೆ ಬಾಗಿಲಿಗೆ ಬಂದಿರೋ ಈ ಹಣ್ಣುಗಳ ಮೇಳದ ಲಾಭವನ್ನ ಜನರು ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ,ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ,ಬುಡಾ ಅಧ್ಯಕ್ಷ ಪಾಲನ್ನ,ಎಪಿಎಂಸಿ ಅಧ್ಯಕ್ಷ ಉಮೇಶ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಜಿಪಂ ಸಿಇಒ ಜೆ.ಲಿಂಗಮೂರ್ತಿ,ಎಎಸ್ಪಿ ಗುರುನಾಥ,ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಸ್.ಪಿ.ಭೋಗಿ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು,ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

*ಮಾವು ಮೇಳದಲ್ಲಿ ಪುನೀತ್, ಹುಮಾಯುದ್ಧಿನ್ ಪ್ರತ್ಯಕ್ಷ..!

ಬಳ್ಳಾರಿಯಲ್ಲಿ ನಡೆಯುತ್ತಿರುವ ಮಾವು ಮೇಳದಲ್ಲಿ ಪುನೀತ್,ಹುಮಾಯುದ್ದೀನ್ ಪ್ರತ್ಯಕ್ಷರಾಗಿದ್ದರು!.ಅವರನ್ನು ನೋಡಲು ಬೆಡಗಿಯರಾದ ಅವಂತಿಕ, ವೈಷ್ಣವಿ,ಅಶ್ವಿನಿ,ಪ್ರಜ್ಞಾ,ಚೈತ್ರಾಲಿ ಸೇರಿದಂತೆ ಅನೇಕರು ಸುತ್ತುವರಿದಿದ್ದರು. ಅದರ ಜೊತೆಗೆ ಕೆಲ ಹುಡುಗರು ಇದ್ದರು. ಹೌದು ಅಚ್ಚರಿಯಾದರೂ ಸತ್ಯ.

ಇದೇನಪ್ಪ ಅನ್ಬೇಡಿ ಪುನೀತ್,ಹುಮಾಯುದ್ದೀನ್ ಹೆಸರಿನ ಮಾವಿನ ಹಣ್ಣಿನ ತಳಿಗಳನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಪ್ರದರ್ಶನಕ್ಕಿಟ್ಟಿದ್ದು ವಿಶೇಷವಾಗಿತ್ತು. ಇದರ ಜೊತೆಗೆ ಈಸ್ಟ್ ಇಂಡಿಯಾ,ಎಡ್ವರ್ಡ್,ಗೋವಾಪಸಂದ್, ಕೋಲಾರ ಕೋಲ್ಡ್, ಮೇಡಂ ಬ್ಲಾಂಕ್ ಕೂಡ ಗಮನಸೆಳೆದವು.

ಮಾವಿನ ವೈವಿಧ್ಯಮಯ ತಳಿಗಳಾದ ಲಕ್ಷ್ಮಣ ಭೋಗ್, ಕಿಲಿ ಚುಂದನ್, ಟಾಂಗ್ ಡ್ಯಾಮ್, ಐವರಿ, ರಾಂಪುರ ಗೋಲಾ, ಭಂಢಾರಿಯಾ, ಲಿಚ್ಚಿ, ಅರ್ಕಾ ಪುನೀತ್, ಮರಿಗೌಡ, ಚಿತ್ತೂರು, ಕುಡುಷ, ಬಲೂನ್ ಮ್ಯಾಂಗೋ, ಶಕ್ಕರ್ ಗುಲ್ಸಂದ್, ಜಂಬ್ಯೂ ಮ್ಯಾಂಗೋ, ರುಮಾನಿಯಾ ಎ1, ಹಾಥಿಜೂಲಾ, ಸುಪ್ರಭಾತ, ಕಾಂಚನ, ಅನ್ಮೋಲ್, ಮಾಲ್ಡೋವಿ, ಮತಿಮಿಟ್ಟು, ಬೀಜೊ, ಸುಂದರ್ ಜಾ, ಬತೂವ್. ಸುಫುಲ್, ಅಶ್ವಿನಿ, ಪ್ರಜ್ಞಾ, ಪ್ರಣವ್, ಚೈತ್ರಾಲಿ, ಅನುóಷ, ಜಮಾದಾರ್, ಸುಗರ್ ಬೇಬಿ, ಸುಂದರಿ, ಪುನೀತ್, ಪಂಚದಾರ ಕಳಸ, ಪೀಟರ್, ಘರ್ ನಂದಿನ್, ಕಾವೇರಿ, ಸಫೇದ, ಗೋದಾವರಿ, ಹುಸ್ಸ-ಇ-ಅರ, ಪ್ರಿಯೂರ್, ಸಾಗರಪ್ಪೆಮಿಡಿ, ಕರ್ನೂಲ್, ರಂಜಿತ್, ಅವಂತಿಕ, ವೈಷ್ಣವಿ, ಕೊಂಕಣ್ ರಾಜ, ಪಿಲಿಹಾರ್ ಮ್ಯಾಂಗೋ, ಮಲಿಹಾಬಾದ್, ಸಂದೇರ್ಶ, ವಿಶಾಖಪಟ್ಟಣಂ, ಕೆ.ಎಂ.ಹೆಚ್-1, ಕಿಲಿ ಚಂದನ್, ಕೊಂಕಣ್ ರುಚಿ, ಕೊಂಕಣ್ ರಾಜ್, ಅರುಣಿಮಾ, ಪ್ರತಿಭಾ, ಶ್ರೇಷ್ಠಾ, ಪಿತಾಂಬರ್, ಅರುಣಿತಾ, ಚಂದ್ರಾ, ಮೇನಾಕ, ಸುಂದರ್ ಲಾಂಗ್ರಾ, ಸರ್ದಾರ್ ಪಸಂದ್, ಮುಸುರಾದ್, ರತಾಲ್, ವಡುಮಂಗ, ಆಂಗಿ, ಬೈಲಿ ಮಾರ್ವೇಲ್, ಬ್ಯಾಬಿಸ್ಟ, ಬೇವರ್ಲಿ, ಬೆಸ್ಟ, ಕಿರ್ಸಾಪತಿ, ಬಿಗ್ ಜಿಮ್, ಚಾರ್ಲಾ, ಪುಟ್ಟಿ ಅತ್ತೂರ್, ಕಾರಿ, ರಕ್ಷಿತ್, ಚೋಕಾನೋನ್, ಕೊಗ್ ಶಾಲ್, ಬಪ್ಪಕಾಯಿ, ಬಳ್ಳಾರಿ ಲೋಕಲ್, ಗೋವಾ ಪಸಂದ್, ಕಾಸರಗೋಡು, ಕುರುಕ್ಕನ್, ಕುಷ್ಮನ್, ಸುಲೇಮಾನ್, ರಸಪೂನಿಯಾ, ನಿತ್ಸಾಫಜಿಯಾಪುರ್, ಶರಬತೀ, ರಸಗೋಲಾ, ಗಿಲಾಸ್, ಡಾಟ್, ಡಂಕನ್, ಸಂಜಾನ, ಸೃಷ್ಟಿ, ಡುಪುರ್ ಸೈಗಾನ್, ಡ್ವಾರ್ಫ ಹವಾಯೆನ್, ಸೋನ್ಪರಿ, ಮಿಯಾ, ಈಸ್ಟ ಇಂಡಿಯಾ, ಎಡ್ವರ್ಡ, ಲಾಲ್ ಮಲ್ಗೋವಾ, ಫ್ಲೋರಿಡಾ, ವನಲಕ್ಷ್ಮಿ, ಸೆನ್ಸೇಷನ್, ಲೋಹಿತ್, ನಿಷಿತ್, ಭುವಿತಾ, ತ್ರಿಶೂಲ್, ಅನನ್ಯ, ಧೃತಿ, ಹರಿತೇಜ್, ಸುಶಾಂತ್, ಶಂಶೀರ್, ನಿಶಾ, ಅಂಬರ್, ಕಾವಿಶ್, ಪಿಲ್ಲೋಟ, ಹೇಡನ್, ವೆಂಗುರ್ಲಾ, ಹನಿಕಿಸ್ಸಾ, ಜಾಕ್ಲಿನ್, ಜಕಾರ್ಥ, ಜೂಲಿ, ಕೇರ್ಥಿ, ಕ್ರೋಟಾನ್, ಲಿಟಲ್ ಜೆಮ್, ಮೇಡಮ್ ಬ್ಲಾಂಕ್, ಕ್ಯಾಂಬೋಡಿಯಾನಾ, ರೋಸಿ ಗೋಲ್ಡ, ರೋಸಾ, ಸನ್ ರೈಸ್, ಟಪೆರ್ಂಟೈನ್, ಆಗ್ಲಿಬಟ್ಟಿ, ವೀನಸ್, ಜಿಲ್, ಬೋಜಪುರಿ, ಅಮನ್, ಭರತ್, ನಿವೇದಿತಾ, ವೈಭವ್, ತೇಜಸ್, ಗಗನ್, ದಕ್ಷಿತ್, ರಜತ್, ಪ್ರಸಿದ್, ಮಾಂಜ್ರ, ನಾರಾಯಣಪುರ, ಗೋಲಾ, ಸಬ್ಬಸಿಗೆ, ಗಿಣಿ ಮಾವು, ಶಿರಸಿ ನೀಲಂ, ಬೆಟ್ಟದ ಮಾವು, ರುಮಾನಿಯಾ ಎ-1, ಮಂಕೂರ, ಚಕ್ರಗೂಟ,ಸಿಂಧೂರ, ಕೊಚ್ಚಕಾಯಿ, ಸಿರಿ, ಬೆನುμï, ಕೋಲಾರ್ ಗೋಲ್ಡ್, ಜೋಳದ ರಾಶಿ, ಬಡಾ ಗೋಲಾ, ಬಡಾ ಮೋತಿ, ಚಂದ್ರಕರಣ್, ಲಂಬಸ್ಕರ್ ಗುಡ್ಲಿ, ಪಂಚವ, ಚಂದನಂ, ಲಾಲಕರಿ, ಕಬಿನಿ, ಫಿರ್ದೋಸ್, ಲಾಲಿಬೀ ಪಸಂದ್, ಕುಡೂಸ್, ಕೆನ್ಸಿಂಗ್ಟನ, ಸಾಯಿಸುಗಂದ, ಚೆರಿಯಕರ್ಪೂರಂ, ನೂರ್ಜಹಾನ್, ಜೈಲರ್, ಕೀನ್ಯಾ ಲಾಂಗ್, ಕೀನ್ಯಾ ರೌಂಡ್, ಕಾಲೂ ಪಸಂದ್, ರೂಬಿ, ಶೆರಿನ್, ಕಲಟ್ಟಿ, ಜಹಾಂಗೀರ್, ಕಾಲೂನೀಲಂ, ಫಜ್ರಿ, ಅಂಬಿಕಾ, ಮಂಜೀರಾ, ಪಿ.ಕೆ.ಎಮ್.-1, ಪಿ.ಕೆ.ಎಮ್.-2., ಗ್ರಹಂ, ಇರ್ವಿನ್, ಪಾಮರ್, ವೆಲೆಂಶಿಯಾ ಪ್ರೈಡ್, ದಾದರ್, ಮಲ್ಲಿಕಾ, ಕೇಸರ್, ಬಾದಾಮಿ, ಬೆಳ್ಳಿ ಗುಂಡು, ಸಿಂಧೂರ, ಲಾಂಗ್ರ, ಪೆದ್ದರಸಂ, ದಶಹರಿ, ಲಡ್ಡು, ಕುಂಕುಮ್ಕೇಸರ್, ಬೆನೆಶಾನ್, ಮಲಗೋವ, ಕಲಪಡಿ, ತೋತಾಪುರಿ, ಆಮ್ಲೆಟ್, ರಾಜ್ ಪುರಿ, ಕೊಬ್ಬರಿಮಾವು, ನಾಜೂಕಪಸಂದ, ರತ್ನ, ಹಿಮಸಾಗರ್, ಬಂಗಾನ್ ಪಲ್ಲಿ, ಖಾದರ್, ಆಮ್ರಪಾಲಿ, ಪರಬಾನಿ ಆಪೂಸ್, ಎಯು ರುಮಾನಿ, ನಿರಂಜನ್, ಕಲೆಕ್ಟರ್, ಬೆನೆಟ್, ಸಕ್ಕರೆ ಗುತ್ತಿ, ಆಲ್ಫಾನ್ಸೋ, ಗದೆಮಾರ, ಮುಶಾರದ, ಕಿಂಗ್ ಫಾನ್, ಆಸ್ಟೀನ್, ಚೋಟು ಜಹಾಂಗೀರ್, ಚೆರು ಕಾರಸಮ, ಪದೆರಿ, ಕೊರಲ್, ಫನಾರ್ಂಡಿಸ್, ಬಾರಾಮಾಫಿ, ಕರುಟಾ ಕೋಲಂಬಸ್, ಬಾಪ್ಪಾಕಾಯಿ, ಬ್ಲಾಕ್ ಕೋಲಕನ್, ವಿಲ್ಲೊ, ಪೇಡಾ ರಸಲ, ಕರೇಲಿ, ವನರಾಜ, ಕ್ರೀಪಿಂಗ್, ಪಂಚರದಾಸ್, ಗೋವಾ ಮಂಕುರ, ಕಾಡಾ, ಗಡರಸ, ಸಕ್ಕರೆ ಗುತ್ತಿ, ರೋಮನಿಯಾ, ಪೈರಿ, ಮಾತಿಚೂರ, ಚಿತ್ರಾಪೈರಿ, ಗೋವಾ, ಮಾಂಕುರ್, ಪುನ್ನಾಸ್, ಕೊಂಕಣ ರುಚಿ, ಯಾಕೃತಿ, ಜೀರಿಗೆ, ಉಡಗೇ, ದೂಧ್ ಪೇಡಾ, ಒಲೂರ, ಹಿಮಾಮ್ ಪಸಂದ್, ಹಿಮಾಯುತ್, ರಸಾಲ್, ಕಿಶಾನ್ ಬೋಗ್, ಮುಂಡಪ, ನೀಲಂ, ಸುಂದರಶಾ, ಬಾಳೆ ಮಾವು, ನೀಲಂ, ಹುಮಾಯುದ್ಧಿನ್, ಗೂಂಗ್, ಆರ್ಕ ನೀಲಕಿರಣ, ಕಲ್ಮಿ, ಆಲಂಪೂರ ಬನೇಶಾನ್, ಕರಿ ಇಶಾಡ್, ದಿಲ್ ಪಸಂದ್, ಅಪ್ಪೆಮಾವು, ದೋಫಸಲ, ಸುಬೋರ್ನ್, ಸಣ್ಣೆಲೆ, ಸುವರ್ಣ ರೇಖಾ, ಮಾಯಾ, ಅಡಿಕೆಮಾವು, ಚಂದ್ರಮಾವು, ಇಸ್ರೇಲ್ ತಳಿ, ಪಾಮೋರ, ನಿಲೇಶಾನ್, ಫಸ್ಲಿ, ಹಡೆನ್, ಕಿಲ್ಲಿ ಚುರಡನ್, ಬಾಂಬೆಗ್ರೀನ್, ಮರಿಗೌಡ, ಧಾರವಾಡ ಆಪೆÇೀಸ್, ಪುನಾಸ್, ಪಂಡೂರಾ, ಕೊತ್ತಪಲ್ಲಿ ಕೊಬ್ಬರಿ, ಬೊಂಬೈ, ಜರದಾಳು, ಸುಂದರಲಾಂಗ್ರ, ಸಾಬ್ರಿ, ಜವಹರ್, ಹುಮಾಯುದ್ಧಿನ್, ಗುಲಾಬ್ ಖಾಸ್ತ, ಜಮಾದಾರ್, ಸಕಾಲಿ, ಸಫೇದಾ ಲಖ್ನೋ, ಲಾಲ್ ಪಸಂದ್, ಪಿಳ್ಳಿಕುತ್, ತುರಾಪುಡಿ, ವರ್ಗೀಸ್, ಮೋರೀμï ಬಾದಾಮ್, ಖಲೀಜಿ ತಳಿಗಳ ಮಾವಿನ ಹಣ್ಣುಗಳನ್ನು ಪ್ರದರ್ಶನಕ್ಕಿಡಲಾಗಿದೆ. 




 


Post a Comment

0 Comments

Ad Code

Responsive Advertisement