ಅಹಮದಾಬಾದ್/ಬೆಂಗಳೂರು: ಇತ್ತೀಚಿಗೆ ಕಾಂಗ್ರೆಸ್ನಿ0ದ ಹೊರ ಬಂದ ಗುಜರಾತ್ನ ಯುವ ಹೋರಾಟಗಾರ, ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ ಮುಖಂಡ ಹಾಗು ಸಂಚಾಲಕ ಹಾರ್ದಿಕ್ ಪಟೇಲ್ ಅವರು ಬಿಜೆಪಿ ಸೇರುವುದು ಇಂದು (ಮಂಗಳವಾರ) ಬಹುತೇಕ ಖಚಿತವಾಗಿದೆ. ಮುಂಬರುವ ಗುಜರಾತ್ ಚುನಾವಣೆ ಬೆನ್ನಲ್ಲೇ ಬಿಜೆಪಿಗೆ ಹೆಚ್ಚಿದ ಬಲ ಎಂದು ಬಿಜೆಪಿ ವಲಯದಲ್ಲಿ ಗುಸುಸು.
ಗುಜರಾತ್ ರಾಜ್ಯದ ಬಿಜೆಪಿ ವಕ್ತಾರ ಯಗ್ನೇಶ್ ದಾವೆ ಅವರು ಈ ಕುರಿತು ಈಗಾಗಲೆ ಮಾಹಿತಿ ನೀಡಿದ್ದು, ಜೂನ್ 2 ರಂದು ಹಾರ್ದಿಕ್ ಪಟೇಲ್ ಅವರು, ಗುಜರಾತ್ ರಾಜ್ಯದ ಬಿಜೆಪಿ ಅಧ್ಯಕ್ಷರ ಹಾಗು ಮುಖಂಡರ ಸಮ್ಮುಖದಲ್ಲಿ ಬಿಜೆಪಿಗೆ ಸೇರಲಿದ್ದಾರೆಂದು ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಮತ್ತು ಗುಜರಾತ್ ಕಾಂಗ್ರೆಸ್ ನಾಯಕರೊಬ್ಬರು ರಾಮಮಂದಿರಕ್ಕಾಗಿ ಇಟ್ಟಿರುವ ಇಟ್ಟಿಗೆಗಳ ಮೇಲೆ ನಾಯಿಗಳು ಮೂತ್ರ ವಿಸರ್ಜಿಸುತ್ತವೆ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತದೆ, ಹಿಂದೂ ಧರ್ಮದ ನಂಬಿಕೆಗೆ ಧಕ್ಕೆ ತರಲು ಪ್ರಯತ್ನಿಸುತ್ತದೆ ಎಂದು ನಾನು ಈ ಮೊದಲೇ ಹೇಳಿದ್ದೆ ಎಂದು ಹೇಳಿದ್ದರು.
ಕಾಂಗ್ರೆಸ್ ಮತ್ತು ಪಕ್ಷದ ನಾಯಕರಿಗೆ ಭಗವಾನ್ ಶ್ರೀರಾಮನ ಮೇಲೆ ಯಾಕೆ ಇಷ್ಟೊಂದು ದ್ವೇಷ? ಶತಮಾನಗಳ ನಂತರ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದೆ. ಆದರೂ ಕಾಂಗ್ರೆಸ್ ನಾಯಕರು ಭಗವಾನ್ ಶ್ರೀರಾಮನ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ ಎಂದು ಟೀಕಿಸಿದ್ದರು.

0 Comments