Ticker

6/recent/ticker-posts

Ad Code

Responsive Advertisement

ಪ್ರಪ್ರಥಮ ಬಾರಿಗೆ ಬಳ್ಳಾರಿ ಬಲಿಜ ಸಮಾಜದ ವತಿಯಿಂದ ಉಚಿತ ಸಾಮೂಹಿಕ ವಿವಾಹಗಳು

-ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ದೇವಿನಗರ ಶ್ರೀನಿವಾಸುಲು ನೇಮಕ

     ಬಳ್ಳಾರಿ ಮೇ 26.  ಬಳ್ಳಾರಿ ನಗರದ ಬಾಲಾಜಿ ರಾವ್ ರಸ್ತೆ, ವಡ್ಡರ ಬಂಡ ಹತ್ತಿರ ಇರುವ ಶ್ರೀಮತಿ ಲಕ್ಷ್ಮಿದೇವಿ ಎಸ್.ಲಿಂಗಣ್ಣ ಬಲಿಜ ಭವನದಲ್ಲಿ ದಿನಾಂಕ: 23.05.2022 ರಂದು ಸಂಜೆ 5.00  ಗಂಟೆಗೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಪ್ರಥಮ ಬಾರಿಗೆ ಬಳ್ಳಾರಿ ಬಲಿಜ ಸಮಾಜದ ವತಿಯಿಂದ ಉಚಿತ ಎಲ್ಲಾ ಸಮಾಜದವರಿಗೆ ಸಾಮೂಹಿಕ ವಿವಾಹಗಳನ್ನು ದಿನಾಂಕ: 07-08-2022 ರಂದು ಹಮ್ಮಿಕೊಳ್ಳಲಾಗಿದೆ.ಈ ಒಂದು ಉಚಿತ ಸಾಮೂಹಿಕ ಕಾರ್ಯಕ್ರಮಕ್ಕೆ ಬಲಿಜ ಸಮಾಜದ ಹಿರಿಯ ಮುಖಂಡರಗಳಾದ ಮಾಜಿ ಎಂ.ಎಲ್.ಸಿ ನಿರಂಜನ್‍ನಾಯ್ಡು, ಎಸ್.ಮುರಳಿಕ್ರಿಷ್ಣ, ಸಪ್ತಗಿರಿ ಸತ್ಯಣ್ಣ, ಮಾಜಿ. ಎ.ಪಿ.ಎಂ.ಸಿ ಸರಗು ನಾಗರಾಜ,  ರಮೇಶ್ ಬುಜ್ಜಿ, ಪಾಟೇಲ್ ನಗರ ರಾಜೇಶ್, ಎರ್ರಿಸ್ವಾಮಿ, ಅಶೋಕ್ ಇವರ   ಸಮ್ಮುಖದಲ್ಲಿ ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ದೇವಿನಗರ ಶ್ರೀನಿವಾಸುಲು ಜಿ. ಇವರನ್ನು ನೇಮಕ ಮಾಡಲಾಗಿರುತ್ತದೆ.


ಹಾಗೂ ದೇವಿನಗರ ಶ್ರೀನಿವಾಸಲು.ಜಿ ಇವರು ಮಾತನಾಡುತ್ತಾ ಆಸ್ತಕ ಬಲಿಜ ಸಮಾದವರು ಆಸಕ್ತ ಬಲಿಜ ಸಮಾಜದವರ ವಧು ವರರ ನೋಂದಣಿ ಪ್ರಾರಂಭವಾಗಿದೆ, ವಧುವಿಗೆ 18 ವರ್ಷ ತುಂಬಿರಬೇಕು, ವರನಿಗೆ 21 ವರ್ಷ ತುಂಬಿರಬೇಕು ಎಂದು ಹೇಳಿದರು,  ಈ ಒಂದು ಅವಕಾಶವನ್ನು ಬಲಿಜ ಬಂದುಗಳು ಉಪಯೋಗಿಸಿಕೊಳ್ಳಬೇಕಾಗಿ ತಿಳಿಸಿರುತ್ತಾರೆ. ಈ ಒಂದು ಕಾರ್ಯಕ್ರಮಕ್ಕೆ  ಎಲ್ಲಾ ಬಲಿಜ ಬಂದುಗಳು ಆಗಮಿಸಿದ್ದರು. ಹೆಚ್ಚಿನ ಮಾಹಿತಿಗಾಗಿ ದೇವಿನಗರ ಶ್ರೀನಿವಾಸುಲು .ಜಿ ಮೋ : 9901962666 ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದ್ದಾರೆ.


 


 



Post a Comment

0 Comments

Ad Code

Responsive Advertisement