Ticker

6/recent/ticker-posts

Ad Code

Responsive Advertisement

ಸಮರ್ಥನಂ : "ರಜತ ಮಹೋತ್ಸವ"ದ ನೆನಪಿಗಾಗಿ ಬೃಹತ್‍ಉದ್ಯೋಗ ಮೇಳ

ಬಳ್ಳಾರಿ ಮೇ 26. ಸಮರ್ಥನಂ ಅಂಗವಿಕಲರ ಸಂಸ್ಥೆಯು "ರಜತ ಮಹೋತ್ಸವ"ದ ನೆನಪಿಗಾಗಿ ಮತ್ತು "ಅಂತರಾಷ್ಟ್ರೀಯ ವಿಕಲಾಂಗ ವ್ಯಕ್ತಿಗಳ ದಿನ"ದ ಅಂಗವಾಗಿ ವಿಕಲಚೇತನರಿಗಾಗಿ ಬೃಹತ್‍ಉದ್ಯೋಗ ಮೇಳವನ್ನು ಆಯೋಜಿಸಲು ನಿರ್ದರಿಸಿದ್ದೇವೆ.  ಇದರಿಂದ ಸುಮಾರು 300ಕ್ಕೂ ಹೆಚ್ಚು ಉದ್ಯೋಗಾರ್ಥಿಗಳಿಗೆ ಉದ್ಯೋಗವನ್ನು ಒದಗಿಸುವಂತಹ ಅವಕಾಶ ಸಿಗುತ್ತದೆ. ಈ ಕೋವಿಡ್ ಸಾಂಕ್ರಾಮಿಕ  ಸಮಯದಲ್ಲಿ ಹಲವಾರು ವಿಕಲಚೇತನ ಉದ್ಯೋಗಾಕಾಂಕ್ಷಿಗಳಿಗೆ  ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಈ ಉದ್ಯೋಗ ಮೇಳದ ಉದ್ದೇಶವಾಗಿದೆ. ಈ ಮೇಳದಲ್ಲಿ ವಿವಿದ ಶಿಕ್ಷಣ ಪಡೆದಂತಹ (10 ರಿಂದ ಸ್ನಾತಕೋತ್ತರ ಪದವಿ) ಸುಮಾರು 300ಕ್ಕೂ ಹೆಚ್ಚು ಅರ್ಹ ಉದ್ಯೋಗಾರ್ಥಿಗಳು ಹಾಗು 20ಕ್ಕೊ ಹೆಚ್ಚು ಉದ್ಯೋಗದಾತರ ಭಾಗವಹಿಸುವಿಕೆಯನ್ನು  ನೀರಿಕ್ಷೀಸುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಪತ್ರದ ಮುಖಾಂತರ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಬಳ್ಳಾರಿ ನಗರದ ಗಾಂಧಿ ನಗರದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯು ವಿಕಲಚೇತನರಿಗಾಗಿ ಬೃಹತ್ ಉದ್ಯೋಗ ಮೇಳವನ್ನು  ನಗರದ ಶ್ರೀ ಮೇಧಾ ಪಿ.ಯು. ಮತ್ತು ಪದವಿ ಕಾಲೇಜು ನಂ:03 ಕೋಟೆಯ ಮುಖ್ಯ ರಸ್ತೆ. ಮೋತಿ ಸರ್ಕಲ್ ಹತ್ತಿರ ಬಳ್ಳಾರಿ. ದಿನಾಂಕ 31.05.2022 ರಂದು  ರಂದು ಹಮ್ಮಿಕೋಳ್ಳಲಿದ್ದಾರೆ.  ಈ ಉದ್ಯೋಗ ಮೇಳಕ್ಕೆ 20ಕ್ಕು ಹೆಚ್ಚು ಕಂಪನಿಗಳಿಂದ ಉದ್ಯೋಗದಾತರು ಆಗಮಿಸವುದರಿಂದ. ಈ ಉದ್ಯೋಗ ಮೇಳಕ್ಕೆ  ವಯೂಮಿತಿ 21ಕ್ಕು ಮೆಲ್ಪಟ್ಟಿರಬೇಕು ಮತ್ತು ಶ್ಯೆಕ್ಷಣಿಕ ವಿದ್ಯಾರ್ಹತೆಯು  ಎಸ್.ಎಸ್.ಎಲ್.ಸಿ, ಪದವಿ ಪೂರ್ವ ಮತ್ತು ಪದವಿ ಪಡೆದಿರುವಂತಹ ವಿಕಲಚೇತನ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಆದಕಾರಣ ಎಲ್ಲಾ    ಅರ್ಹ ವಿದ್ಯಾವಂತ ವಿಲಚೇತನ ಅಭ್ಯರ್ಥಿಗಳು ಈ ಉದ್ಯೋಗ ಮೇಳದ ಲಾಭವನ್ನು ಪಡೆದು ನಿಮ್ಮ ಉಜ್ವಲ  ಭವಿಷ್ಯವನ್ನು ರೂಪಿಸಿಕೋಳ್ಳಬೆಕೆಂದು ಕಳಕಳಿಯಾಗಿ ವಿನಂತಿಸಿಕೊಂಡಿದ್ದಾರೆ.




 


Post a Comment

0 Comments

Ad Code

Responsive Advertisement