Ticker

6/recent/ticker-posts

Ad Code

Responsive Advertisement

ರಾಮನಗರದಲ್ಲಿ ದೇವಾಲಯ ಅರ್ಚಕ ವೃತ್ತಿ ಹೆಸರಿನಲ್ಲಿ ಅಧಿಕಾರಿಗಳ ಕಳ್ಳಾಟ....! ಉಸ್ತುವಾರಿ ಸಚಿವರೇ ಇತ್ತ ಗಮನಿಸಿ…!

 ರಾಮನಗರದಲ್ಲಿ ದೇವಾಲಯ ಹೆಸರಿನಲ್ಲಿ ಅಧಿಕಾರಿಗಳ ಕಳ್ಳಾಟ 

ಉಸ್ತುವಾರಿ ಸಚಿವರೇ ಇತ್ತ ಗಮನಿಸಿ…!


ರಾಮನಗರ: ಜಿಲ್ಲೆಯ ಸಾತನೂರು ಹೋಬಳಿಯ ಕಬ್ಬಾಳು ಗ್ರಾವiದ ಇತಿಹಾಸ ಪ್ರಸಿದ್ಧ ಶ್ರೀ ಕಬ್ಬಾಳಮ್ಮ ದೇವಾಲಯದ ಅರ್ಚಕ ವೃತ್ತಿಯನ್ನು ಅನಾದಿಕಾಲದಿಂದಲು ಸರದಿಯಂತೆ ಅರ್ಚಕ ಕುಟುಂಬಕ್ಕೆ ನೀಡುತ್ತ ಬಂದಿರುವುದ ಸರಿಯಷ್ಟೆ.

ಅಂತೆಯೇ, ಪೂಜಾ ಕೈಂಕರ್ಯಗಳನ್ನು ಸರದಿಯಂತೆ ಹಿರಿಯರಿಗೆ ನೀಡುವುದು ವಾಡಿಕೆಯೇ ಸರಿ. ಆದರೆ ಇಲ್ಲಿ ನಡೆದಿರುವುದೇ ಬೇರೆ. ದೇವಾಲಯದ ಹೆಸರಿನಲ್ಲಿ ಅರ್ಚಕ ವೃತ್ತಿಗೆ ರಾಜಕೀಯ ಪ್ರಭಾವ ಬಂದು ನಿಂತಿರುವುದು ಎಷ್ಟು ಸಮಂಜಸ.

ಇತ್ತೀಚೆಗೆ ಸ್ಥಳೀಯ, ಕನಕಪುರ, ರಾಮನಗರದಲ್ಲಿರುವ ಅಧಿಕಾರಿಗಳು ಪೂಜೆಯನ್ನು ಸರದಿಯಂತೆ ನೀಡುವುದನ್ನು ಬಿಟ್ಟು ತಮಗೆ ಇಷ್ಟಬಂದವರಿಗೆ / ಬೇಕಾದವರಿಗೆ ನೀಡುತ್ತಿರುವುದು ಎಷ್ಟು ಸರಿ. ಅರ್ಚಕ ಕುಟಂಬದಲ್ಲಿ ಹುಟ್ಟಿವರಿಗೆ ಸರದಿಯಂತೆ ನೀಡುವುದು ವಾಡಿಕೆ, ಆದರೆ ರಾಮನಗರ ಜಿಲ್ಲೆಯ ಸಹಾಯಕ ಕಮೀಷನರ್ ಮಂಜುನಾಥ್‌ರವರು ತಮಗೆ ಬೇಕಾದವದರಿಗೆ ಅಂದರೆ ಅರ್ಚಕರಲ್ಲದ, ಅಂದರೆ ಸಂಬ0ಧಪಡದ ಮೂರನೆ ವ್ಯಕ್ತಿಗೆ ರಾಜಕೀಯ ದುರುದ್ದೇಶದಿಂದ ಪೂಜಾಕೈಂಕರ್ಯ ನೀಡಿರುವುದು ಗಮನಕ್ಕೆ ಬಂದಿದೆ.

ಇದರ ಹಿಂದಿನ ಷಡ್ಯಂತ್ರ ಯಾವುದು…ಎಂಬುದು ಯೋಚಿಸುವ ಪರಿಸ್ಥಿತಿ ಬಂದಿದೆ. ಯಾರ ಕುಮ್ಮಕ್ಕಿನಿಂದ ಈ ಅಧಿಕಾರಿಗಳು ಈ ರೀತಿ ವರ್ತಿಸಿತ್ತಿದ್ದಾರೆ ಎಂಬುದು ಬಯಲಾಗಬೇಕಿದೆ. ಇಂತಹ ಅಧಿಕಾರಿಗಳ ಹಿಂದೆ ಯಾವ ಪ್ರಭಾವಿ ರಾಜಕಾರಣಿ ಇದ್ದಾರೆ ಎಂಬುದು ತಿಳಿಯಬೇಕಿದೆ. ರಾಮನಗರ ಜಿಲ್ಲೆ ಉಸ್ತುವಾರಿ ಸಚಿವ ಅಶ್ವಥ್‌ನಾರಾಯಣ್ ಅವರ ಗಮನಕ್ಕೆ ಬಾರದೆ ಈ ರೀತಿ ಅನ್ಯಾಯ ನಡಯಲು ಸಾಧ್ಯವೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. 

ಕುಲಗೆಟ್ಟ ರಾಜಕೀಯ ವ್ಯವಸ್ಥೆ ಹಾಗು ಅಧಿಕಾರಿಗಳ ಅಟ್ಟಹಾಸಕ್ಕೆ ಕೊನೆ ಯಾವಾಗ ಎಂಬುದು ಜನರ ಅಭಿಪ್ರಾಯ. 

ಕಬ್ಬಾಳಮ್ಮ ದೇವಿಗೆ ಈ ರೀತಿ ಮಾಡಿದ್ದೆ ಆದರೆ ಇನ್ನು ಸಾಮಾನ್ಯ ಜನರ ಕತೆ ಏನು? ರಾಮನಗರ ಜಿಲ್ಲೆಯಲ್ಲಿ ಘಟಾನುಘಟಿ ನಾಯಕರುಗಳಾದ ಹೆಚ್ ಡಿ ಕುಮಾರಸ್ವಾಮಿ, ಯೋಗೀಶ್ವರ್, ಉಸ್ತುವಾರಿ ಸಚಿವರಿದ್ದೂ ದಬ್ಬಾಳಿಕೆಯನ್ನು ಮಟ್ಟ ಹಾಕಲು ಸಾಧ್ಯವಾಗುತ್ತಿಲ್ಲ ಎಂಬುದು ಜಿಲ್ಲೆಯ ನೊಂದಜನರ ಅಭಿಪ್ರಾಯ.

Post a Comment

0 Comments

Ad Code

Responsive Advertisement