Ticker

6/recent/ticker-posts

Ad Code

Responsive Advertisement

ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಕರ್ನಾಟಕ ಬಿಟ್ಟು ತೊಲಗಲಿದ್ದಾರೆ-ನಳಿನ್ ಕುಮಾರ್ ಕಟೀಲ್

ಬಳ್ಳಾರಿ ಮೇ 30 :ತಾಲೂಕಿನ ತೋರಣಗಲ್ಲಿನ ಪ್ರಯದರ್ಶಿನಿ ಹೊಟೇಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜಿಲ್ಲೆಯ ಸಂಡೂರು ಎಸ್ಟಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು  ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿ ಮಾತನಾಡುತ್ತಾ  ಚಿತ್ರದುರ್ಗದ ಮದಕರಿ ನಾಯಕ ಹೈದರಾಲಿಯನ್ನು ಯುದ್ಧದಲ್ಲಿ ಮೂರು ಬಾರಿ ಸೋಲಿಸಿದ್ದ. ಆ ರೀತಿ ಕಾಂಗ್ರೆಸ್ ಎಂಬ ಹೈದರಾಲಿಯನ್ನು ಕಳೆದ ಬಾರಿ ಸೋಲಿಸಿದೆ, ಈಗ 2023 ರಲ್ಲಿ ಎರಡನೇ ಬಾರಿಗೆ ಮನೆಗೆ ಕಳಿಸುತ್ತೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು. ಎಸ್ಟಿ ಸಮುದಾಯದ ಜನತೆಗೆ ನ್ಯಾಯ ಕೊಡುವ ಕೆಲಸ ಸರ್ಕಾರ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ರಾಜ ಕಾರಣದಲ್ಲೂ ಎಸ್ಟಿಗಳಿಗೆ ಅವಕಾಶ ಕಲ್ಪಿಸುವ ಕಾರ್ಯ ಆಗಿದೆಂದರು. ಪರಿವರ್ತೆಗಾಗಿ ಆಪರೇಷನ್ ಕಮಲ ಹಿಂದಿನ ಭಾವನಗಳನ್ನು ನೋಡಿ, ಪರಿವರ್ತೆನೆಗಾಗಿ ಆಪರೇಷನ್ ಕಮಲವನ್ನು ಸಮರ್ಥಿಸಿಕೊಂಡು ಅಧಿಕಾರಕ್ಕಾಗಿ ಇತರೇ ಪಕ್ಷದ ಪ್ರಬಲರು ಬಂದರೆ ಕರೆ ದು ಕೊಳ್ಳುವುದರಲ್ಲೇನಿದೆ ಎಂದರು. 

ದೇಶದ ಆಧಿಕಾರ ನಡೆಸಲು ಸೋನಿಯಾ ಗಾಂಧಿಯಂತವರು ಇದ್ದರೆ ಸಾಕು. ಆದರೆ ವಿಶ್ವ ಭಾರತದಕಡೆ ನೋಡುವಂತೆ ಮಾಡುವ ಆಡಳಿತ ಬೇಕೆಂದರೆ ಮೋದಿ ಅಂತಹವರು ಬೇಕು ಎಂದರು. ಮೋದಿ ಅವರ ಆಡಳಿತದಿಂದ ಅಮೆರಿಕವೂ ಭಾರತದ ಕಡೆ ನೋಡುತ್ತದೆಂದರು. ಟಿಪ್ಪು ಜಯಂತಿ ಮಾಡಿ ಹಿಂದು ಮಸ್ಲಿಂರ ನಡುವೆ ಬಿರುಕು ತಂದಿರಿ ಬಿಟ್ಟರೆ ಮತ್ತೇನು ಮಾಡಿದಿರಿ ಹೇಳಿ ಸಿದ್ದರಾಮಯ್ಯ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿ ಹೇಳಿದರು. ಜನಪ್ರಿಯ ಶಾಸಕ ಸಂಸದರು ಎನ್ನುವುದಕ್ಕಿಂತ ಜನಪರವಾದವರಾಗಿರಬೇಕು ಎಂಬ ಕಿವಿ ಮಾತು ಹೇಳಿದರು. ರಾಜ್ಯ ಬಿಜೆಪಿ ಸರ್ಕಾರ ಈ ವರ್ಷ ಎಸ್ಟಿ ವಾಲ್ಮೀಕಿ ಸಮುದಾಯಕ್ಕೆ 8151 ಕೋಟಿ ರೂ ಅನುದಾನ ನೀಡುತ್ತಿದೆಂದರು. ಎಸ್ಟಿಯಲ್ಲಿ ಬಿಜೆಪಿಯಲ್ಲಿಯೇ ಅತಿ ಹೆಚ್ಚು ಎಸ್ಟಿ ಸಂಸದರು, ಶಾಸಕರು ಇದ್ದಾರೆ. ಇನ್ನೂ ಅನೇಕ ಬೇಡಿಕೆಗಳು ಇದೆ. ಅದಕ್ಕೆ ಕಾನೂನು ತೊಡಕಿವೆ. ಅವನ್ನು ಪರಿಹರಿಸಿಕೊಂಡು ಆ ಬೇಡಿಕೆ ಈಡೇ ರಿಸಲಿದೆ ಎಂದು ಎಸ್ಟಿ ಮೀಸಲಾತಿ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿದರು.ಸಿದ್ದರಾಮಯ್ಯ ಅವರನ್ನು ಟೀಕಿ ಸುತ್ತ. ನಿಮ್ಮ ಆಡಳಿತ ಅವಧಿಯಲ್ಲಿ ಡ್ರಗ್ಸ್, ಮರಳು ಮಾಫಿಯಾ ಬರೀ ಮಾಫಿಯಾಗಳೇ ಇತ್ತು ಎಂದರು.

ಸಭೆಯಲ್ಲಿ ಸಂಸದ ವೈ.ದೇವೆಂದ್ರಪ್ಪ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯ್ಕ, ಎಸ್ಟಿ ಮೊರ್ಚಾ ರಾಜ್ಯ ಅಧ್ಯಕ್ಷ ತಿಪ್ಪರಾಜ್ ಹವಾಲ್ದಾರ್,ಗಂಗಾಧರ ನಾಯ್ಕ, ಸಿದ್ದೇಶ್ ಯಾದವ್, ಚಂದು ಹಲಗೇರಿ, ಮಂಜುನಾಥ ಓಲೇಕಾರ್, ಮುರಹರಗೌಡ ಮೊದಲಾದವರು ಇದ್ದರು. ಸಭೆಗೂ ಮುನ್ನ ತೋರಣಗಲ್ಲಿನ ಮುಖ್ಯ ಬೀದಿಯಲ್ಲಿ ಪಕ್ಷದ ನಾಯಕರ ಅದ್ದೂರಿ ಮೆರವಣಿಗೆ ನಡೆಯಿತು. ಇತಿಹಾಸದಲ್ಲಿನ ಬುಡಕಟ್ಟು ನಾಯ ಯಕರ ಭಾವಚಿತ್ರ ಮತ್ತು ಅವರ ಮಹತ್ವದ ಕುರಿತ ಪ್ರದರ್ಶನವನ್ನು ಸಹ ಕಟೀಲ್ ಅವರು ಉದ್ಘಾಟಿಸಿದರು.


 


Post a Comment

0 Comments

Ad Code

Responsive Advertisement