Ticker

6/recent/ticker-posts

Ad Code

Responsive Advertisement

ಮೆದೇಹಾಳ್ ಗ್ರಾಮದಲ್ಲಿ ಸದ್ಗುರು ಶಿರಡಿ ಸಾಯಿಬಾಬಾ ಮೂರ್ತಿ ಪ್ರತಿಷ್ಟಪನಾ ಮಹೋತ್ಸವ ಕಾರ್ಯಕ್ರಮ

ಬಳ್ಳಾರಿ ಮೇ 30. ಸ್ವಸ್ತಶ್ರೀ ಶಾಲಿವಾಹನ ಶಕೆ 1944 ನೇ ಶ್ರೀ ಶುಭಕೃತ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮಋತಾ, ಜೇಷ್ಠಮಾಸ ಶುದ್ಧ ಬಿದಿಗಿ ಬುಧವಾರ ದಿನಾಂಕ : 01-06-2022 ರಿಂದ ಶುಕ್ರವಾರ 03-06-2022 ರವರೆಗೆ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಗಡಿ ಭಾಗವಾಗಿರುವ ಮೆದೆಹಾಳು ಗ್ರಾಮ, ಹಾಲಹರ್ವಿ ಮಂಡಲಾ, ಕರ್ನೂಲು ಜಿಲ್ಲಾ, ನೂತನವಾಗಿ ನಿರ್ಮಿಸಿರುವ ಶ್ರೀ ಶಿರಿಡಿ ಸಾಯಿಬಾಬರವರ ಮಂದಿರದ ಮತ್ತು ಶ್ರೀ ಬಾಬಾರವರ ವಿಗ್ರಹ ಪ್ರತಿಷ್ಟಪನೆ ಹಾಗೂ ಕುಂಭಾಬಿಷೇಕ ಮಹೋತ್ಸವವನ್ನು ನೆರವೇರಿಸಲು ಸದ್ಗುರುಗಳ ಪ್ರೇರಣೆಯಾಗಿರುವುದರಿಂದ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಾಬಾ ಕೃಪೆಗೆ ಪಾತ್ರರಾಗಬೇಕಾಗಿ ಮನವಿಯನ್ನು ಮಾಡಿದ್ದಾರೆ. ದಿನಾಂಕ: 01-06-2022 ಬುಧವಾರ ಬೆಳಿಗ್ಗೆ 9.00 ಗಂಟೆಗೆ : ಗಂಗಾ ಪೂಜೆಯೊಂದಿಗೆ ಆಲಯ ಪ್ರವೇಶ, ಗೋಪೂಜೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯ ವಾಚನ ಪೂಜೆ, ನಾಂದಿ ಪೂಜೆ, ಸಾಯಿಬಾಬಾರವರ ವಿಗ್ರಹವನ್ನು ಜಲಾಧಿವಾಸ ಮಾಡುವುದು, ಮಹಾ ಮಂಗಳಾರತಿ, ತೀರ್ಥ, ಪ್ರಸಾದ. ದಿನಾಂಕ: 02-06-2022 ಗುರುವಾರ ಬೆಳಿಗ್ಗೆ 8.00 ಗಂಟೆಗೆ: ಸಾಯಿಬಾಬಾರವರ ವಿಗ್ರಹಕ್ಕೆ ಧಾನ್ಯದಿವಾಸ, ಉಮಾಮಹೇಶ್ವರ ಪೂಜೆ, ನವಗ್ರಹ ಪೂಜೆ, ಏಕಾದಶ ರುದ್ರ ಕಲಶ ಪೂಜೆ, ಅಷ್ಟದಿಕ್ಷಾಲಕರ ಕಲಶ ಪೂಜೆ, ವಾಸ್ತು ಕಲಶ ಪೂಜೆ, ಅಂಕುರಾರ್ಪಣ, ಅಗ್ನಿ ಸ್ಥಟ ಕಾರ್ಯ ಹೋಮ. ಸಂಜೆ: 5.00 ಗಂಟೆಗೆ : ಗ್ರಾಮೋತ್ಸವ ಕಾರ್ಯಕ್ರಮ ಸಾಯಿಬಾಬಾರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡುವುದು. ಗಣಪತಿ ಹೋಮ, ಜಯಾದಿ ಹೋಮ, ನವಗ್ರಹ ಹೋಮ, ವಾಸ್ತು ಹೋಮ, ರುದ್ರಹೋಮ, ಶಿರಡಿನಾಥಸ್ವಾಮಿಯ ಹೋಮ, ದೇವರ ನ್ಯಾಸ ಕಾರ್ಯಕ್ರಮಗಳು. ದಿನಾಂಕ: 03-06-2022 ಶುಕ್ರವಾರ ಬೆಳಿಗ್ಗೆ : 4.00 ಗಂಟೆಗೆ: ಪ್ರಾಣ ಪ್ರತಿಷ್ಟಪನೆ, ರುದ್ರಭಿಷೇಕ 108 ಕುಂಭ ಕಲಶಗಳೊಂದಿಗೆ ಕುಂಭಾಭಿಷೇಕ ಪೂರ್ಣಾಹುತಿ ಕಾರ್ಯಕ್ರಮ ಮಹಾ ಮಂಗಳಾರತಿ ಇರುತ್ತದೆ. 

ಈ ಪ್ರತಿಷ್ಟಪನ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಶ್ರೀ ಷ. ಬ್ರ. ಅಜಾತ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಪುರವರ್ಗಮಠ, ಜಂಗಮರ ಹೊಸಹಳ್ಳಿ, ಶ್ರೀ ಕಲ್ಯಾಣ ಸ್ವಾಮಿಗಳು ಕಲ್ಯಾಣಸ್ವಾಮಿ ಮಠ ಸಂಸ್ಥಾನ ಕಮ್ಮರಚೇಡು, ಬಳ್ಳಾರಿ,ಶ್ರೀ ಸದ್ಗುರು ಪಿಲಿಡಿ ಸಾಯಿನಾಥ ನೂತನ ಆಲಯ ಪ್ರಾರಂಭೋತ್ಸವ ವೇದಿಕೆ ಕಾರ್ಯಕ್ರಮ ಬೆಳಗ್ಗೆ 10.30 ಗಂಟೆಗೆ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಶ್ರೀ ಷ. ಬ್ರ. ಅಜಾತ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಪುರವರ್ಗಮಠ, ಜಂಗಮರ ಹೊಸಹಳ್ಳಿ,ಶ್ರೀ ಕಲ್ಯಾಣ ಸ್ವಾಮಿಗಳು ಕಲ್ಯಾಣಸ್ವಾಮಿ ಮಠ ಸಂಸ್ಥಾನ ಕಮ್ಮರಚೇಡು, ಬಳ್ಳಾರಿ,  ಗುಮ್ಮನೂರು ಜಯರಾಮ್ ಕಾರ್ಮಿಕ ಮಂತ್ರಿಗಳು, ಆಂದ್ರಪ್ರದೇಶ,ಪಾಲಣ್ಣ ಬುಡಾ ಅಧ್ಯಕ್ಷರು, ಬಳ್ಳಾರಿ, ಕೋಟ್ಲ ಜಯಸೂರ ಪ್ರಕಾಶ ರೆಡ್ಡಿ ಮಾಜಿ ಕೇಂದ್ರ ಮಂತ್ರಿಗಳು, ಸುನಿಲ್ ಕುಮಾರ್ ಮಾಲಿಕರು, ನೀರಜಾಕ್ಷಿ ಐರಾನ್ ಅಂಡ್ ಸ್ಪೀಲ್ ಫ್ಯಾಕ್ಟರಿ ಸಾನಿಧ್ಯದಲ್ಲಿ ಜರುಗಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 

Post a Comment

0 Comments

Ad Code

Responsive Advertisement