Ticker

6/recent/ticker-posts

Ad Code

Responsive Advertisement

ನವಲಗುಂದ ತಾಲೂಕಿನಲ್ಲಿ ಬಸವರಾಜ ಹೊರಟ್ಟಿ ಪರ ಪ್ರಚಾರ

ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಜೂನ್ 13ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆ ನಿಮಿತ್ತ ಬಸವರಾಜ ಹೊರಟ್ಟಿಯವರ ನವಲಗುಂದ ನಗರ ಹಾಗೂ ತಾಲೂಕಿನಲ್ಲಿ ವ್ಯಾಪಕ ಪ್ರಚಾರ ನಡೆಸಿ, ಅವರು ಶಿಕ್ಷಕರಿಗಾಗಿ ಕಳೆದ 42 ವರ್ಷಗಳಿಂದ ಮಾಡಿದ ಕೆಲಸಗಳ ಬಗ್ಗೆ ಮಾಹಿತಿ ನೀಡಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿಯವರು ನನ್ನ ಕಡೆಗೆ ಯಾರೇ ಕೆಲಸಕ್ಕೆ ಬಂದರೂ ಕೂಡಲೇ ಅವರ ಕೆಲಸಗಳನ್ನು ಮಾಡಿ ಕೊಡುವದರ ಮೂಲಕ ಶಿಕ್ಷಕರ ಮನಸ್ಸನ್ನು ಗೆದ್ದಿರುವದರಿಂದಲೇ 7 ಸಲ ನನ್ನನ್ನು ಶಿಕ್ಷಕರು ಆಯ್ಕೆ ಮಾಡಿದ್ದಾರೆ. ನಾನು ಶಿಕ್ಷಕರ ನಂಬಿಕೆಗೆ ಧಕ್ಕೆ ತರದ ರೀತಿಯಲ್ಲಿ ಕೆಲಸ ಮಾಡಿದ ತೃಪ್ತಿ ಇರುವದರಿಂದಲೇ 8ನೇ ಸಲ ಶಿಕ್ಷಕರ ಬೆಂಬಲ ಹಾಗೂ ಆರ್ಶೀವಾದ ಕೋರಿದ್ದು, ಕ್ಷೇತ್ರದಾದ್ಯಂತ ಶಿಕ್ಷಕರು ಅಪಾರ ಬೆಂಬ ವ್ಯಕ್ತಪಡಿಸುತ್ತಿದ್ದು, ನನ್ನ ಗೆಲವು ನಿಶ್ಚಿತ ಎಂಬ ಭಾವನೆಯನ್ನು ಶಿಕ್ಷಕರೇ ನನ್ನಲ್ಲಿ ತುಂಬಿದ್ದು, ಅವರ ನಂಬಿಕೆಯಂತೆ ಮುಂಬರುವ ದಿನಗಳಲ್ಲಿ ಕೆಲಸ ಮಾಡುವದರ ಮೂಲಕ ಅವರ ಋಣ ತೀರಿಸುವೆನು ಎಂದು ತಿಳಿಸಿದರು.

ಇಂದು ಬಸವರಾಜ ಹೊರಟ್ಟಿಯವರ ಪರವಾಗಿ ಆರೇಕುರಹಟ್ಟಿ, ನವಲಗುಂದದ ಶಂಕರ ಪ್ರಥಮ ದರ್ಜೆ ಕಾಲೇಜು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ರಾಣಿಚೆನ್ನಮ್ಮ ವಸತಿ ಶಾಲೆ, ಮಾಡೆಲ್ ಬಾಲಕರ ಹಾಗೂ ಬಾಲಕಿಯರ ಪ್ರೌಢಶಾಲೆ, ಸರಕಾರಿ ಉರ್ದು ಪ್ರೌಢಶಾಲೆ, ನಾಗಲಿಂಗೇಶ್ವರ ಪ್ರೌಢಶಾಲೆ, ಗುರುಕುಲ ಪ್ರೌಢಶಾಲೆ, ಸರಕಾರಿ ಪ್ರೌಢಶಾಲೆ, ಸರಕಾರಿ ಪದವಿಪೂರ್ವ ಕಾಲೇಜು, ಅಜತಾ ನಾಗಲಿಂಗೇಶ್ವರ ಪ್ರೌಢಶಾಲೆ, ಸರಕಾರಿ ಪ್ರೌಢಶಾಲೆ ಕಿರೇಸೂರ, ಹೆಬಸೂರ  ಸೆಕೆಂಡರಿ ಸ್ಕೂಲ್ ಹಾಗೂ ಗುಡ್ ಶೆಫರ್ಡ್ ಶಾಲೆಗಳಿಗೆ ಭೇಟಿ ನೀಡಿ ಮತ ಯಾಚಿಸಲಾಯಿತು.

ಈ ಪ್ರಚಾರ ಕಾರ್ಯದಲ್ಲಿ ಎಸ್.ಎಚ್. ಕಲಾದಗಿ, ಎ.ಆಯ್. ಕಟಗೇರಿ, ಎಸ್.ವಾಯ್. ಗುಡರಡ್ಡಿ, ಪೂಜಾ, ಗೀತಾ ಡೊಂಕಣ್ಣವರ, ಸುಜಾತಾ ಅಗಡಿ, ಸುಮಂಗಲಾ ಶೆಟ್, ರವಿ ಕೊಣ್ಣೂರ, ವ್ಹಿ.ಎಸ್. ಹುದ್ದಾರ,, ಆರ್.ಎಸ್. ಪಾಟೀಲ, ಶಿವನಗೌಡ ಪಾಟೀಲ ಹಾಗೂ ಇತರರ ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿದ್ದು, ಬಸವರಾಜ ಹೊರಟ್ಟಿಯವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.


Post a Comment

0 Comments

Ad Code

Responsive Advertisement