Ticker

6/recent/ticker-posts

Ad Code

Responsive Advertisement

ಡಿಜಿಟಲ್ ಉದ್ಯಮಿಗಳಾಗಲು ಅವರ ಮನೆಯಿಂದಲೇ ಸಾಮಾಜಿಕ ಮಾಧ್ಯಮದ ಶಕ್ತಿ ಬಳಸಿ ಹಣ ಗಳಿಸಲು ಅವಕಾಶ -ಸಿಇಒ ಕುನಾಲ್ ಸಿನ್ಹಾ

ಬಳ್ಳಾರಿ ಮೇ 22. ಭಾರತದ ಮುಂಚೂಣಿಯ ಸಾಮಾಜಿಕ ವಾಣಿಜ್ಯ ಕಂಪನಿಗಳಲ್ಲಿ ಒಂದಾದ ಗ್ಲೋರೋಡ್ ಹೊಸ ಹಾಗೂ ಪ್ರಸ್ತುತ ಇರುವ ಮಾರಾಟಗಾರರಿಗೆ ಶೂನ್ಯ ಕಮಿಷನ್ ಪರಿಚಯಿಸಿದೆ. ಇದರೊಂದಿಗೆ ಮಾರಾಟಗಾರರು ಪಟ್ಟಿ ಮಾಡಲು ಮತ್ತು ಮಾರಾಟ ಮಾಡಲು ಶುಲ್ಕದ ಬಗ್ಗೆ ಆತಂಕ ಪಡದೆ ಅವರ ಆಯ್ಕೆಯನ್ನು ಆನ್‍ಲೈನ್‍ನಲ್ಲಿ ತರುವ ಅವಕಾಶ ಕಲ್ಪಿಸುತ್ತದೆ. ಅವರು ಅನ್ವಯಿಸುವ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಸೇವೆಗಳಿಗೆ ಮಾತ್ರ ಪಾವತಿಸಬೇಕು. ಎಲ್ಲ ವಿಭಾಗಗಳಲ್ಲೂ ಶೂನ್ಯ ಕಮಿಷನ್ ಪರಿಚಯದಿಂದ ದೇಶಾದ್ಯಂತ ಉದ್ಯಮಿಗಳು, ಕಿರು, ಸಣ್ಣ ಮತ್ತು ಮಧ್ಯಮ ಹಂತದ ಉದ್ಯಮಗಳಿಗೆ(ಎಂಎಸ್‍ಎಂಇಗಳು) ಅವರ ವಹಿವಾಟು ವೃದ್ಧಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.  

ಹೆಚ್ಚು ಮಾರಾಟಗಾರರು ಅವರ ಆಯ್ಕೆಯನ್ನು ಆನ್‍ಲೈನ್‍ಗೆ ತರುತ್ತಿದ್ದು ಗ್ಲೋರೋಡ್‍ನ ಇನ್‍ಫ್ಲುಯೆನ್ಸರ್‍ಗಳು ಎಲ್ಲ ವಿಭಾಗಗಳಲ್ಲೂ ವಿಸ್ತರಿಸಿದ ಆಯ್ಕೆ ಪಡೆಯುತ್ತಾರೆ. ಇದು ಆಫರ್‍ಗಳು ಮತ್ತು ಗ್ಲೋರೋಡ್ ಕ್ರೆಡಿಟ್‍ಗಳೊಂದಿಗೆ ಇನ್‍ಫ್ಲುಯೆನ್ಸರ್‍ಗಳಿಗೆ ಅವರ ಉದ್ಯಮದಿಂದ ಗಳಿಸಲು ಮತ್ತು ಬೆಳೆಯಲು ಅವಕಾಶ ನೀಡುತ್ತದೆ. ಗ್ಲೋರೋಡ್‍ನ ಸಂಸ್ಥಾಪಕ ಮತ್ತು ಸಿಇಒ ಕುನಾಲ್ ಸಿನ್ಹಾ, ಗ್ಲೋರೋಡ್‍ನ್ನು ಭಾರತದಾದ್ಯಂತ ಲಕ್ಷಾಂತರ ಉದ್ಯಮಿಗಳು ಹಾಗೂ ಎಂಎಸ್‍ಎಂಇಗಳಿಗೆ ಡಿಜಿಟಲ್ ಕಾಮರ್ಸ್ ಲಭ್ಯತೆ ವಿಸ್ತರಿಸುವ ಉದ್ದೇಶದಿಂದ ಪ್ರಾರಂಭಿಸಿದೆವು. ಲಿಸ್ಟಿಂಗ್‍ಗೆ ಶೂನ್ಯ ಕಮಿಷನ್ ಪರಿಚಯವು ಮತ್ತು ಗ್ಲೋರೋಡ್‍ನಲ್ಲಿ ಮಾರಾಟವು ಈ ನಿಟ್ಟಿನಲ್ಲಿ ಗಮನಾರ್ಹ ಹೆಜ್ಜೆಯಾಗಿದೆ. ಇದು ಪ್ರಸ್ತುತದ ಹಾಗೂ ಮೊದಲ ಸಲದ ಮಾರಾಟಗಾರರಿಗೆ ದೇಶಾದ್ಯಂತ ಭಾರತದಾದ್ಯಂತ ಅವರ ವಿಸ್ತರಣೆ ಹೆಚ್ಚಿಸಲು ಅದರಲ್ಲಿಯೂ ಟೈಯರ್ 2 ಮತ್ತು ಆಚೆಗಿನ ಮಾರುಕಟ್ಟೆಗಳಿಗೆ ವಿಸ್ತರಿಸಲು ಉತ್ತೇಜಿಸುತ್ತದೆ.ನಾವು ಭಾರತದಾದ್ಯಂತ ಮಾರಾಟಗಾರರು ಮತ್ತು ಇನ್‍ಫ್ಲುಯೆನ್ಸರ್‍ಗಳಿಗೆ ಗ್ಲೋರೋಡ್‍ನ ಸೇವೆಯನ್ನು ಬಳಸಲು ಹಾಗೂ ಆನ್‍ಲೈನ್ ಶಾಪಿಂಗ್ ಅನ್ನು ಹೆಚ್ಚು ಅನುಕೂಲಕರ ಮತ್ತು ಇಕಾಮಸ್ರ್ಗೆ ಹೊಸಬರು ಆಗಿರುವ ಗ್ರಾಹಕರಿಗೆ ವಿಶ್ವಾಸಾರ್ಹಗೊಳಿಸುತ್ತದೆ ಎಂದರು. ಗ್ಲೋರೋಡ್ ಗೃಹಿಣಿಯರು, ಯುವಜನರು, ಸಣ್ಣ ರೀಟೇಲರ್‍ಗಳು ಮತ್ತಿತರರನ್ನು ಒಳಗೊಂಡು ತನ್ನ ಲಕ್ಷಾಂತರ ಬಳಕೆದಾರರಿಗೆ ಡಿಜಿಟಲ್ ಉದ್ಯಮಿಗಳಾಗಲು ಮತ್ತು ಅವರ ಮನೆಯಿಂದಲೇ ಅಥವಾ ಎಲ್ಲಿಂದಲೇ ಆದರೂ ಸಾಮಾಜಿಕ ಮಾಧ್ಯಮದ ಶಕ್ತಿ ಬಳಸಿ ಗಳಿಸಲು ಅವಕಾಶ ನೀಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



 



Post a Comment

0 Comments

Ad Code

Responsive Advertisement