ಮುಂಬರುವ ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಬಸವರಾಜ ಹೊರಟ್ಟಿಯವರ ಪರವಾಗಿ ವ್ಯಾಪಕ-ಪ್ರಚಾರ ಕೈಗೊಂಡು ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವದರ ಮೂಲಕ ವಿಶ್ವದಾಖಲೆ ಸ್ಥಾಪಿಸಲು ಶಿಕ್ಷಕರೆಲ್ಲ ಪ್ರಯತ್ನಿಸಬೇಕೆಂದು ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿಯವರು ಕಳೆದ 42 ವರ್ಷಗಳಲ್ಲಿ ಕೆ.ಜಿ.ಯಿಂದ-ಪಿ.ಜಿಯವರೆಗಿನ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದ್ದು, ಶಿಕ್ಷಣ ಸಚಿವನಾಗಿದ್ದಾಗ ಸುಮಾರು 50 ಸಾವಿರ ಶಿಕ್ಷಕರ ನೇಮಕಾತಿ, ಅನುಮೋದನೆ ಹಾಗೂ ವೇತನಾನುದಾನಕ್ಕೆ ಒಳಪಡಿಸಲು ಸಾಧ್ಯವಾಗಿದ್ದು, ಶಿಕ್ಷಕರು 7 ಸಲ ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟು ಬೆಂಬಲಸಿದ್ದೇ ಕಾರಣ. ಮುಂಬರುವ ದಿನಗಳಲ್ಲಿ ಬಾಕಿ ಉಳಿದಿರುವ ಶಿಕ್ಷಣ ರಂಗದ ಸಮಸ್ಯೆಗಳ ಪರಿಹಾರಕ್ಕೆ ಮತ್ತೊಮ್ಮೆ ತಮ್ಮನ್ನು ಬೆಂಬಲಿಸುವಂತೆ ಕೋರಿದರು.
ಇಂದು ಜೈನ್ ಪ್ರಥಮ ದರ್ಜೆ ಕಾಲೇಜು, ಕೆ.ಎಲ್.ಇ. ಶಿಕ್ಷಣ, ಕಾನೂನು ನರ್ಸಿಂಗ, ಎಂ.ಬಿ.ಎ ಪಾಲಿಟೆಕ್ನಿಕ್, ಗ್ಲೋಬಲ್ ಬಿಸಿನೆಸ್ ಕಾಲೇಜು, ಚೇತನ ಬಿಜಿನೆಸ್, ಸರಕಾರಿ ಪಾಲಿಟೆಕ್ನಿಕ್ ಹಾಗೂ ಕೆ.ಎಲ್.ಇ. ಪಾಲಿಟೆಕ್ನಿಕ್ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮತಯಾಚಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವನಾಥ ಕೊರವಿ, ಕಿರಣ ಹಿರೇಮಠ, ಪರಮೇಶ್ವರ ಮುಳ್ಳೂರ, ಎಂ.ಕೆ. ಪ್ರಾಣೇಶ, ರವಿ ಕೊಣ್ಣೂರ, ಪಿ.ಬಿ.ಸುಣಗಾರ, ಎಸ್.ವ್ಹಿ. ಪಟ್ಟಣಶೆಟ್ಟಿ, ಮಂಜುನಾಥ, ಸುರೇಶ ಕುಂದಗೋಳ, ರಾಘವೇಂದ್ರ ಹಾಗೂ ಚಿಕ್ಕಮಠ ಸೇರಿದಂತೆ ಹಲವಾರು ಶಿಕ್ಷಕರು ಈ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಬಸವರಾಜ ಹೊರಟ್ಟಿ
ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು ಬೆಂಗಳೂರು
ಕೊಠಡಿ ಸಂಖ್ಯೆ:117 1ನೇ ಮಹಡಿ, ವಿಧಾನಸೌಧ, ಬೆಂಗಳೂರು-01
ಅಡವೇಶ್ವರ ಸದನ, ವೇಮನ ಬೀದಿ ಹುಬ್ಬಳ್ಳಿ-580020
ಇಮೇಲ್-bshoratti@gmail.com
ಪೋ: 9448111188, 0836-2351383

.jpeg)
.jpeg)

.jpeg)
.jpeg)


0 Comments