ಬಳ್ಳಾರಿ ಮೇ 22. ನಗರದ ಶ್ರೀ ವೆಂಕಟ ವರದಾಚಾರ್ಯ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಬೆಂಗಳೂರು ರಸ್ತೆಯಲ್ಲಿರುವ ಶ್ರೀ ವಾಸವಿ ಕಲ್ಯಾಣಮಂಟಪ ಮತ್ತು ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಮತ್ತು ಮೂಳೆ ಸಾಂದ್ರಾ, ದಂತ ಚಿಕಿತ್ಸೆ, ಕ್ಯಾನ್ಸರ್ ಇ.ಎಸ್.ಟಿ. ಕೂದಲು, ಚರ್ಮರೋಗ ಮತ್ತು ಜನರಲ್ ಚೆಕಪ್ ತಪಾಸಣೆ ಶಿಬಿರವನ್ನ, ಅಧ್ಯಕ್ಷ್ಯರಾದ ವೆಂಕಟೇಶಲು ಶೆಟ್ಟಿ ನೇತೃತ್ವದಲ್ಲಿ ವರದಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ನಗರದ ಬಡ ಮತ್ತು ಕೂಲಿ ಕಾರ್ಮಿಕ ವರ್ಗ ಹಾಗೂ ಮದ್ಯಮ ವರ್ಗದ ನೂರಾರು ಜನರು ತಪಾಸಣೆ ಮತ್ತು ಚಿಕಿತ್ಸೆ ಪಡೆಯುವ ಮೂಲಕ. ಟ್ರಸ್ಟ್‍ನ 16 ನೇ ವರ್ಷದ ಆರೋಗ್ಯ ಶಿಬಿರ ಯಶಸ್ವಿಯಾಗಲು ಕಾರಣವಾದರು. ಇನ್ನು, ಆರೋಗ್ಯ ಶಿಬಿರದಲ್ಲಿ ಪ್ರತಿಷ್ಠಿತ ವೈದ್ಯರು ಮತ್ತು ಸಹಾಯಕರು, ತಪಾಸಣೆಗೆ ಬಂದ ಸಾರ್ವಜನಿಕರಿಗೆ. ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಮತ್ತು ಔಷಧಿಗಳನ್ನ ವಿತರಿಸುವ ಮೂಲಕ ಉತ್ತಮ ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡಿದರು.ಟ್ರಸ್ಟನ ಮುಖ್ಯಸ್ಥರಾದ ವೆಂಕಟೇಶಲು ಶೆಟ್ಟಿ ಮತ್ತು ಟ್ರಸ್ಟನ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗಿಯಾಗಿದ್ದರು.
.jpg)
0 Comments