ಬೆಂಗಳೂರು,ಮೇ.24-ಸ್ಥಳೀಯ ರಾಜ್ಯಮಟ್ಟದ ನೋಂದಾಯಿತ ಸಾಮಾಜಿಕ ಸಂಘಟನೆ ನವ ಕನ್ನಡ ಸೇವಾ ಸಮಿತಿಯ ಕಚೇರಿಗೆ ಇತ್ತೀಚೆಗೆ ಚಲನಚಿತ್ರ ನಟ ಸುಚೇಂದ್ರ ಪ್ರಸಾದ್ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಮತ್ತು ರಾಜ್ಯಮಟ್ಟದ ಈ ಸಂಘಟನೆಯು ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವೆ ಸಲ್ಲಿಸಲಿ. ಹಾಗೂ ಸಂಘಟನೆಗೆ ಇನ್ನೂ ಲಕ್ಷಾಂತರ ಸದಸ್ಯರು ಸೇರಿಕೊಂಡು ಕನ್ನಡ ಸೇವೆ ಮಾಡುವಂತಾಗಲಿ ಎಂದರು.
ರಾಜ್ಯ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಭಾಸ್ಕರ ಪಿ.ಕುಂದಾಪುರ ಮಾತನಾಡಿ, ನನ್ನ ಗುರುಗಳ ಸಮಾನರಾದ ಸುಚೇಂದ್ರ ಪ್ರಸಾದ್ ನಮ್ಮ ಸಂಘಟನೆಗೆ ಬೆಂಬಲ ಸೂಚಿಸಿರುವುದು ಸ್ವಾಗತಾರ್ಹ ಎಂದರು. ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಇನ್ನೂ ಹೆಚ್ಚಿನ ಸದಸ್ಯರನ್ನು ಸಂಘಟನೆಗೆ ಸೇರಿಸಿಕೊಳ್ಳುವ ಯೋಜನೆ ರೂಪಿಸಲಾಗಿದೆ ಎಂದರು.
ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಕ್ಷಮಾ ಪಾಟೀಲ, ಗೌರವ ರಾಜ್ಯಾಧ್ಯಕ್ಷ ಕೋ.ನ.ನಾಗರಾಜ್, ಉಪಾಧ್ಯಕ್ಷರುಗಳಾದ ಶೋಭಾ ಕೊಡ್ಲಿ, ಉತ್ತರ ಕರ್ನಾಟಕ ಉಪಾಧ್ಯಕ್ಷ ಅರ್ಜುನ್ ನಾಯಕ್, ಪ್ರಧಾನ ಕಾರ್ಯದರ್ಶಿ ರೂಪಾದೇವಿ,ಜಂಟಿ ಕಾರ್ಯದರ್ಶಿ, ಕವಿತಾ ಪ್ರಸಾದ್, ಸಂಘಟನಾ ಕಾರ್ಯದರ್ಶಿ ಕವಿತ, ಸಂಚಾಲಕರಾದ ರಾಜು ಕೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments