"ವ್ಯಾಸ ಪೂರ್ಣಿಮಾ" ರಾಯರ ಬೃಂದಾವನದ ಮುಂಭಾಗದಲ್ಲಿ "ಸಂಸ್ಥಾನ ಪೂಜೆ" ಶ್ರೀಗಳಿಂದ 5 ನೇ ಬಡಾವಣೆಯ ಜಯನಗರದ ರಾಯರ ಸನ್ನಿಧಿಯಲ್ಲಿ ವ್ಯಾಸಪೂರ್ಣಿಮಾ ಪ್ರಯುಕ್ತ ರಾಯರ ಬೃಂದಾವನದ ಮುಂಭಾಗದಲ್ಲಿ ಪ್ರಾತಃಕಾಲದಲ್ಲಿ ಮಂತ್ರಾಲಯ ಶ್ರೀಗಳಿಂದ ವೇದ ಮಂತ್ರಗಳೊಂದಿಗೆ ಸಂಸ್ಥಾನ ಪೂಜೆ ನೆರವೇರಿತು. ಈ ದಿನ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ 10ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಧನ್ವಂತರಿ ಹೋಮ ಹಾಗೂ ಸಾವಿರಾರು ಭಕ್ತರಿಗೆ ವಿಶೇಷ ಮಂಡಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಮಂಡಿಗೆಯನ್ನು ಹುಬ್ಬಳ್ಳಿಯ ಕೇಶವ ಆಚಾರ್ ಭಾವಿ ಕಟ್ಟಿ ವೃಂದದವರು ಸುಮಾರು 5 ಗಂಟೆಗಳ ಕಾಲ ಮಂಡಿಗೆಯನ್ನು ಮಾಡಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಸಂಜೆ 6:00 ಗಂಟೆಗೆ ಶ್ರೀಗಳವರಿಗೆ "ಮುತ್ತು ನವರತ್ನಗಳ" ಅಭಿಷೇಕ ಪುಷ್ಪವೃಷ್ಟಿ ಹಾಗೂ ಇತರ ಸಂಸ್ಥೆಗಳಿಂದ ಗೌರವ ಸಮರ್ಪಣೆಯೊಂದಿಗೆ ಮಾಲಾರ್ಪಣೆ ಕಾರ್ಯಕ್ರಮ ನೆರವೇರಲಿದೆ ಎಂದು ಶ್ರೀಮಠದ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರ ಆಚಾರ್ಯರು ತಿಳಿಸಿದರು.

.jpeg)
.jpeg)

0 Comments