ಬಳ್ಳಾರಿ ಮೇ 14. ಬಳ್ಳಾರಿ ಟ್ರಾಫಿಕ್ ಪೋಲಿಸ್(ASI) ಮದ್ಯ ಆಟೋ ಚಾಲಕ ಮದ್ಯ ರಸ್ತೆಯಲ್ಲಿ ಒಬ್ಬರು ಗೆ ಒಬ್ಬರು ಗೆ ಬಡಿದು (ಕುಸ್ತಿ) ಆಡಿ ಕೊಂಡಿದ್ದಾರೆ.ಈಘಟೆನೆ ತಡವಾಗಿ ಬಯಲುಗೆ ಬಂದಿದೆ. ಮೇ 12ರಂದು ಸಾಯಂಕಾಲ 5 ಸಮಯದಲ್ಲಿ ಟ್ರಾಫಿಕ್ ನಿಯಂತ್ರಿಸುವ ವಿಚಾರದಲ್ಲಿ ಟ್ರಾಫಿಕ್‍ಂSI ಒಬ್ಬರು ಅಗಿರವ ದಳವಾಯಿ ಗೋಪಾಲ್ ಕೃಷ್ಣ ತನ್ನ ಸಿಬ್ಬಂದಿಯ ಜೊತೆಗೆ ದುರ್ಗಮ್ಮಗುಡಿ ಸರ್ಕಲ್ ಹತ್ತಿರ ರಸ್ತೆ ಮದ್ಯದಲ್ಲಿ ಆಟೋ ನಿಲ್ಲಿಸಿ ಬಸ್ ಸಂಚಾರಕ್ಕೆ ತೊಂದರೆ ಮಾಡುತ್ತಿರುವ, ಆಟೋಗಾಡಿಯನ್ನು ಸ್ಟೇಷನ್ ಗೆ ತೆಗೆದುಕೊಂಡು ಹೊಗುವ ಸಮಯದಲ್ಲಿ ಆಟೋ ಚಾಲಕನಿಗೆ ಪೋಲಿಸಪ್ಪನ ಮದ್ಯ ದೊಡ್ಡ ಗಲಾಟೆ ನಡೆದಿದೆ. ಆಟೋ ಚಾಲಕ ಸಿಟ್ಟು ಗೆ ಎದ್ದು ಎ,ಎಸ್, ಐ ಅವರಿಗೆ ಆಚ್ಚಿ ಬಾರಿಸಿದ್ದಾನೆ.
ಪೋಲಿಸಪ್ಪ ನ, ಕೈ ಮುರಿದು ಹೋಗಿದೆ, ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು,ಗಾಂಧಿ ನಗರ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲೆ ಮಾಡಿದ್ದಾನೆ.
ಆಟೋ ಚಾಲಕನಿಗೆ ಆಟೋ ತೆಗೆಯಲು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು ಆಟೋ ಚಾಲಕನಿಗೆ ಸಿಟ್ಟು ತಂದಿದೆ ಚಾಲಕನನ್ನು ಪೋಲಿಸಪ್ಪ ಕೆಳಗೆ ತಳ್ಳಿದ್ದಾನೆ ಅದರಿಂದ ಆಟೋಚಾಲಕ ಅಪಾಯದಿಂದ ಪಾರಾಗಿದ್ದಾನೆ, ಮೊದಲೇ ಬಳ್ಳಾರಿಯಲ್ಲಿ ಕೆಲ ಪೋಲೀಸರು ಓವರ್ ಯಾಕ್ಷನ್ ಮಾಡುತ್ತಿರುವುದು ಸಾರ್ವಜನಿಕರು ಅಧಿಕಾರಿಗಳು ನೋಡುತ್ತಿದ್ದಾರೆ. ಆಟೋ ಚಾಲಕನನ್ನು ನಿಂದೇನೆ ಮಾಡದೆ ಒಳ್ಳೆ ಮಾತು ಹೇಳಿದ್ದರೆ, ಪೋಲೀಸಪ್ಪನ ಮಧ್ಯೆ ಆಟೋಚಾಲಕನ ಮಧ್ಯೆ ನಡುರಸ್ತೆಯಲ್ಲೇ ಒಬ್ಬರಿಗೊಬ್ಬರು ಅಂಗಿಗಳ ಹಿಡಿದುಕೊಂಡು ಸಾರ್ವಜನಿಕ ವಲಯದಲ್ಲಿ ಗಲಾಟೆ ಮಾಡಿಕೊಳ್ಳುವ ಅವಶ್ಯಕತೆ ಇರುತ್ತಿರಲಿಲ್ಲ. ಆಟೋಚಾಲಕ ಟ್ರಾಫಿಕ್ ರೂಲ್ಸ್ ವೈಲೇಶನ್ ಮಾಡಿದ್ದು ಆಗಿದ್ದರೆ, ಅವನನ್ನು ಸ್ಟೇಷನ್ ಗೆ ಕರೆದುಕೊಂಡು ಹೋಗಿ ದಂಡ ಹಾಕಿ ಕಳಸಬಹುದಾಗಿತ್ತು. ಆಟೋಚಾಲಕನ ಮಧ್ಯೆ ಪೆÇಲೀಸರು ಮಧ್ಯೆ ಒಂದಿಷ್ಟು ವ್ಯವಹಾರ ನಡೆದು ಇರಬಹುದು ಅನಿಸುತ್ತದೆ. ಆಟೋ ಚಾಲಕರು ಕೂಡ ನಗರದಲ್ಲಿ ಆಟೋಗಳನ್ನು ಅಡ್ಡಾದಿಡ್ಡಿ ಓಡಿಸುವುದನ್ನು ನಿಲ್ಲಸಬೇಕು. ಕರ್ತವ್ಯದ ಪೋಲೀಸ್ ಅಧಿಕಾರಿ ಮೇಲೆ ದಾಳಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಅನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ದಿನನಿತ್ಯ ಸರ್ಕಲ್ ಗಳಲ್ಲಿ ಪೋಲೀಸರ ಹಾವಳಿ ತುಂಬಾನೇ ಇರುತ್ತದೆ. ಗ್ರಾಮೀಣ ಜನರು ನಗರವಾಸಿಗಳು ಇವರು ಮಾಡುತ್ತಿರುವ ಕರ್ತವ್ಯಕ್ಕೆ ಬೇಸರ ಹೊಂದಿದ್ದಾರೆ.ದಿನನಿತ್ಯ ಪೋಲೀಸರು ಕೆಲವರು ಸರ್ಕಾರಕ್ಕೆ ವಂಚನೆ ಮಾಡಿ ಸಾರ್ವಜನಿಕರು ದುಡ್ಡನ್ನು ಪಡುತ್ತಿರುವುದು ಸಾಕಷ್ಟು ಬಯಲುಗೆ ಬಂದಿವೆ. ಈಗಲಾದರೂ ಯಾರೇ ಆಗಲಿ ಪೋಲೀಸರ ಮೇಲೆ ದಾಳಿ ಮಾಡಬಾರದು. ಸರ್ಕಾರದ ಮಾನದಂಡಗಳನ್ನು ಎಲ್ಲರೂ ಪಾಲಿಸಬೇಕು. ಪೋಲೀಸರು ಕೂಡ ಸಾರ್ವಜನಿಕ ವಿಚಾರದಲ್ಲಿ ಸಮಯಪ್ರಜ್ಞೆಯಿಂದ ವರ್ತನೆ ಮಾಡಬೇಕು.
ಕೆಲ ಪೋಲೀಸರು ಠಾಣೆಗಳಲ್ಲಿ ಕಾನೂನನ್ನು ಇವರೇ ರಚನೆ ಮಾಡುತ್ತಿರುತ್ತಾರೆ ಅನ್ನುವ ರೀತೀಯಲ್ಲಿ ದರ್ಪವನ್ನು ತೊರಿಸುತ್ತಾರೆ.ಇದರಿಂದ ಜನಾಕ್ರೋಶಕ್ಕೆ ಗುರಿಯಾಗ ಬೇಕು ಅಗುತ್ತದೆ,ಜನಸ್ನೇಹಿ ಪೆÇಲೀಸ್ ಯಾಗಿ ನಡೆದುಕೊಂಡರೆ ಮಾತ್ರ ಕಾನೂನಿಗೆ ಗೌರವವಿರುತ್ತದೆ. ಇಲ್ಲದಿದ್ದರೆ ಇಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು.

0 Comments