ಕಾಂಗ್ರೆಸ್ ಭವನದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಕೆ.ಪಿ.ಸಿ.ಸಿ.ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ಉಚಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಎನ್.ಎಸ್.ಯು.ಐ.ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್,ಉಪಾಧ್ಯಕ್ಷರಾದ ಮಾರುತಿ, ಮಧು,ಅಜಯ್,ಕೇಶವ್, ಸುಷ್ಮಾ ರವರು ಉಚಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಕೀರ್ತಿ ಗಣೇಶ ರವರು ಮಾತನಾಡಿ ಯುವ ನಾಯಕ,ರೈತ ಪರ ಹೋರಾಟಗಾರ,ಕರ್ನಾಟಕ ಅಭಿವೃದ್ದಿಗೆ ಕೊಡುಗೆ ನೀಡಿದ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಬಿ.ಜೆ.ಪಿ.ಪಕ್ಷದ ಭ್ರಷ್ಟಚಾರದ ವಿರುದ್ದ ಎನ್.ಎಸ್.ಯು.ಐ. ರಾಜ್ಯದ್ಯಾಂತ ಸತತವಾಗಿ ಹೋರಾಟ ಮಾಡುತ್ತಾ ಬಂದಿದೆ .
ಪ್ರಜಾಪ್ರಭುತ್ವ,ಜನವಿರೋಧಿ ಆಡಳಿತದ ಬಿ.ಜೆ.ಪಿ.ಸರ್ಕಾರದ ಅಂತ್ಯ ಸಮೀಪವಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದಿಂದ ಕಾಂಗ್ರೆಸ್ ಪಕ್ಷದ ಸರ್ಕಾರ ಆಡಳಿತ ಮಾಡಲಿದೆ ಎಂದು ಹೇಳಿದರು.

0 Comments