ಬಳ್ಳಾರಿ ಮೇ 14. 2022-23ನೇ ಶೈಕ್ಷಣಿಕ ವರ್ಷ ಆರಂಭದ ಹಿನ್ನಲೆಯಲ್ಲಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಜೀವರಾಯನಕೋಟೆಯ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿ ಶಾಲೆಯ ಆವರಣದಲ್ಲಿ ಸ್ವಚ್ಛತೆ, ಶೌಚಾಲಯ ಸ್ವಚ್ಛತೆ, ಅಡುಗೆ ಕೋಣೆಯ ಸ್ವಚ್ಛತೆ ,ತರಗತಿ ಕೊಠಡಿಗಳ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಮುಂತಾದವುಗಳನ್ನು ಸಿದ್ಧಮಾಡಿ ಕೊಳ್ಳಲಾಯಿತು.
ನಂತರ ಊರಿನ ಜನರನ್ನು ಭೇಟಿಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಿ, ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಹೇಳಿದರು. ಸರ್ಕಾರ ಈ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಣೆ ಮಾಡಿದೆ.ಕಳೆದ ಎರಡು ವರ್ಷಗಳ ಹಿನ್ನಡೆಯನ್ನು ಸರಿದೂಗಿಸಬೇಕಾಗಿದೆ ಎಂದು ಮುಖ್ಯಗುರುಗಳಾದ ಕೆ.ಕೃಷ್ಣವೇಣಿ ಹೇಳಿದರು. ಎಸ್. ಡಿ.ಎಂ.ಸಿ ಅಧ್ಯಕ್ಷ ದೊಡ್ಡ ಕುಮಾರ,ಊರಿನ ಸಕ್ರಪ್ಪ,ಶಿಕ್ಷಕರಾದ ರವಿಚೇಳ್ಳಗುರ್ಕಿ, ದಿಲ್ಷಾದ್ ಬೇಗಂ, ಮೋದಿನ್ ಸಾಬ್,ಸುಮತಿ, ಸುಧಾ,ಶಶಮ್ಮ ಮುಂತಾದವರು ಉಪಸ್ಥಿತರಿದ್ದರು.

0 Comments