Ticker

6/recent/ticker-posts

Ad Code

Responsive Advertisement

ಶಾಸಕರಿಂದ ಅರ್ಹ ಪಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಪ್ರಮಾಣ ಪತ್ರ ವಿತರಣೆ

ಬಳ್ಳಾರಿ ಮೇ 21:ಬಳ್ಳಾರಿ ನಗರದ 17 ವಾರ್ಡಿನ ಬಿ.ಗೋನಾಳ್ ಗ್ರಾಮದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಅರ್ಹ ಪಲಾನುಭವಿಗಳಿಗೆ ವಿವಿಧ ಪಿಂಚಣಿಗಳ ಮಂಜೂರಾತಿ ಪ್ರಮಾಣ ಪತ್ರ ವಿತರಿಸಿದರು. ಇಲ್ಲಿನ 50 ಕ್ಕೂ ಹೆಚ್ಚು ಜನರಿಗೆ ವೃದ್ಯಾಪ್ಯ, ಮನಸ್ವಿನಿ, ವಿಧವಾ, ವಿಕಲಚೇತನ ಮೊದಲಾದ ಮಾಸಿಕ ಪಿಂಚಣಿ ಮಂಜೂರಾದವರಿಗೆ ಪ್ರಮಾಣ ಪತ್ರ ವಿತರಿಸಿದ ಅವರು ನಮ್ಮ ಸರ್ಕಾರ ಪಲಾನುಭವಿಗಳ ಮನೆ ಬಾಗಿಲಿಗೆ ಬಂದು ಪಿಂಚಣಿಗಳ ಪ್ರಮಾಣ  ಪತ್ರ ವಿತರಿಸುತ್ತದೆ. ಇದಕ್ಕಾಗಿ ಜನತೆ ಹೆಚ್ಚಿನದಾಗಿ ಕಚೇರಿಗಳಿಗೆ ಅಲೆದಾಡುವುದು ಬೇಕಿಲ್ಲ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ  ಕೆ.ಹೊನ್ನಪ್ಪ, ವೀರಶೇಖರ ರೆಡ್ಡಿ, ಪಾಲಿಕೆ ಸದಸ್ಯರಾದ ಮೋತ್ತಕರ್ ಶ್ರೀ ನಿವಾಸ, ತಹಸಿಲ್ದಾರ್ ವಿಶ್ವನಾಥ್   ಊರಿನ ಮುಖಂಡರು  ಮೊದಲಾದವರು ಇದ್ದರು.






 

Post a Comment

0 Comments

Ad Code

Responsive Advertisement