Ticker

6/recent/ticker-posts

Ad Code

Responsive Advertisement

ಇಂದು ವಿವಿಎಸ್‍ಎಸ್ ಟ್ರಸ್ಟ್ ವತಿಯಿಂದ 16ನೇ ವರ್ಷದ ಉಚಿತ ಆರೋಗ್ಯ ತಪಾಸಣಾ ಶಿಬಿರ- ವೆಂಕಟೇಶಲು ಶೆಟ್ಟಿ

ಬಳ್ಳಾರಿ ಮೇ 21: ಬಳ್ಳಾರಿ ನಗರದ ಜನರಿಗೆ ಸದಾ ಒಂದಲ್ಲ ಒಂದು ಸಾಮಾಜಿಕ ಕಾರ್ಯಗಳ ಮೂಲಕ ಸಹಾಯ ಹಸ್ತ ನೀಡುತ್ತಾ ಬಂದಿರುವ ಶ್ರೀ ವೆಂಕಟ ವರದಾಚಾರ್ಯ ಸೇವಾ ಸಮಿತಿ ಟ್ರಸ್ಟ್ ಕಳೆದ 15 ವರ್ಷಗಳಿಂದ ನಗರದ ಬಡ ಮತ್ತು ಕೂಲಿ ಕಾರ್ಮಿಕ ವರ್ಗದವರಿಗಾಗಿ ಉಚಿತ ಆರೋಗ್ಯ ತಪಾಸಣಾ ಮತ್ತು ಮೂಳೆ ಸಾಂದ್ರಾ, ದಂತ ಚಿಕಿತ್ಸೆ, ಕ್ಯಾನ್ಸರ್ ಇ.ಎಸ್.ಟಿ. ಕೂದಲು, ಚರ್ಮರೋಗ ಮತ್ತು ಜನರಲ್ ಚೆಕಪ್ ತಪಾಸಣೆ ಶಿಬಿರವನ್ನ ನಡೆಸಿಕೊಂಡು ಬಂದಿದ್ದು , ಇಂದು ಭಾನುವಾರ ದಿನಾಂಕ 22-05-2022 ಬೆಳಗ್ಗೆ 10.30 ರಿಂದ ಸಂಜೆ 5 ಗಂಟೆಯವರೆಗೆ ಉಚಿತ ಆರೋಗ್ಯ ಶಿಬಿರವನ್ನ, ಬೆಂಗಳೂರು ರಸ್ತೆಯಲ್ಲಿರುವ ಶ್ರೀ ವಾಸವಿ ಕಲ್ಯಾಣಮಂಟಪ ಮತ್ತು ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಆಯೋಜಿಸಲಾಗಿದೆ. ಪ್ರತಿಷ್ಠಿತ ಮತ್ತು ನುರಿತ ವೈದ್ಯರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಿ ಜೀವಿಸುವಂತೆ.ಟ್ರಸ್ಟನ ಮುಖ್ಯಸ್ಥರಾದ ವೆಂಕಟೇಶಲು ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.




 

Post a Comment

0 Comments

Ad Code

Responsive Advertisement