Ticker

6/recent/ticker-posts

Ad Code

Responsive Advertisement

ಎಸ್.ಸಿ,ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ- ಗ್ರಾಮೀಣ ಶಾಸಕ ಬಿ.ನಾಗೇಂದ್ರ ಭಾಗಿ

ಬಳ್ಳಾರಿ ಮೇ.21.  ಎಸ್.ಸಿ, ಎಸ್.ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಎಸ್ಸಿ, ಎಸ್ಟಿ ಮೀಸಲಾತಿ ಹೋರಾಟ ಸಮಿತಿ ನಡೆಸಿತು. ನಗರದ ನಾರಾಯಣರಾವ್ ಪಾರ್ಕ್ ನಿಂದ ಆರಂಭಗೊಂಡ ಪ್ರತಿಭಟನೆಯಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಪಾಲ್ಗೊಂಡಿದ್ದರು.

ಗಡಿಗಿ ಚೆನ್ನಪ್ಪ ವೃತ್ರದಲ್ಲಿ ಕೆಲಹೊತ್ತು ಧರಣಿ ಕುಳಿತ ಪ್ರತಿಭಟನಾಕಾರರು ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸಹಾಯಕ ಆಯುಕ್ತರಿಗೆ, ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ನಾಗೇಂದ್ರ ಅವರು ವಾಲ್ಮೀಕಿ ಸಮಾಜದ ಜಗದ್ಗುರು ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಆಹೋ ರಾತ್ರಿಯಾಗಿ ಕಳೆದ 100 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸಿದ್ದಾರೆ ಆದರೂ ಇದಕ್ಕೆ ಈ ಕಣ್ಣು, ಕಿವಿ ಇಲ್ಲದ ಸರ್ಕಾರದಿಂದ ಸ್ಪಂದನೆ ಇಲ್ಲವಾಗಿದೆ. ಕಳೆದ 25 ದಿನಗಳ ಹಿಂದೆ ಸಚಿವ ಗೋವಿಂದ್ ಕಾರಜೋಳ ಅವರ ನಿಯೋಗ ನೀಡಿದ ಭರವಸೆ ಈಡೇರಿಲ್ಲ.ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 24 ತಾಸಿನಲ್ಲಿ ಎಸ್ಟಿ ಮೀಸಲಾತಿ ಹೆಚ್ಚಿಸುತ್ತೇವೆ ಎಂದವರು ಈಗ ಅಸಾಹಾಯಕರಾಗಿದ್ದಾರೆ. ಒಟ್ಟಿನಲ್ಲಿ ಸಮುದಾಯಕ್ಕೆ ಅಂತಹವರಿಂದ ಏನೂ ಪ್ರಯೋಜನ ಇಲ್ಲದಂತಾಗಿದೆ. ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಸರ್ಕಾರದಲ್ಲಿ ವರದಿ ಅನುμÁ್ಟನದ ಪ್ರಯತ್ನ ನಡೆದಿತ್ತು. ದುರಾ ದೃಷ್ಟವಶಾತ್ ಸರ್ಕಾರ ಬಿತ್ತು. ಮತ್ತೆ ನಾವು ಅಧಿಕಾರಕ್ಕೆ ಬಂದರೆ ಈ ಬೇಡಿಕೆ ಈಡೇರುವುದು ಖಚಿತ. ಆದರೆ ಈ ಬಿಜೆಪಿ ಸರ್ಕಾರ ಎಲೆಕ್ಷನ್ ಗಿಮಿಕ್ ಮಾಡಲು ಕೊನೆಯ ದಿನದಲ್ಲಿ ಮೀಸಲಾತಿ ಹೆಚ್ಚಳದ ಬಗ್ಗೆ ಯಾವುದಾದರೂ ನಿರ್ಣಯ ತೆಗೆದುಕೊಂಡರೂ ಸಮುದಾಯದ ಜನತೆ ಅವರ ಗಿಮಿಕ್ ಅರ್ಥಮಾಡಿಕೊಳ್ಳುವ ಬುದ್ಧಿಶಕ್ತಿಯನ್ನು ಹೊಂದಿದ್ದಾರೆಂದರು. ಎಸ್ಸಿ, ಎಸ್ಟಿ ಹೋರಾಟ ಸಮಿತಿಯ ಮುಖಂಡರುಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದವರು ಉಪಸ್ಥಿತರಿದ್ದರು.


 


Post a Comment

0 Comments

Ad Code

Responsive Advertisement