ಬಳ್ಳಾರಿ ಮೇ 10. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರುವಾರ ಗ್ರಾಮದಲ್ಲಿ ಸೋಮವಾರ ರಾತ್ರಿ ರೇಣುಕ ಜಮದಗ್ನಿಯರ ಕಲ್ಯಾಣ ಅರ್ಥಾತ್ ಕಾತ್ರ್ಯವೀರಾರ್ಜುನನ ವಧೆ ಪೌರಾಣಿಕ ನಾಟಕ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ಭಾಗವಹಿಸಿ ಕಲಾವಿದರಿಗೆ ಶುಭ ಹಾರೈಸಲಾಯಿತು. ಇದೇ ವೇಳೆ ಸಿದ್ದಪ್ಪನವರನ್ನು ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಮಾರಪ್ಪ , ಫಿಡ್ಡಯ್ಯ, ಮಲ್ಲಯ್ಯ ಮುಂತಾದವರು ಇದ್ದರು.

0 Comments