ಬಳ್ಳಾರಿ ಮೇ 08. ಸಿರಿವಾರ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಭೂಮಿ ಪೂಜೆಯನ್ನು ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಬಿ.ನಾಗೇಂದ್ರ ಅವರು ನೆರವೇರಿಸಿದರು. ಬಳ್ಳಾರಿ ಗ್ರಾಮಾಂತರ ವ್ಯಾಪ್ತಿಯಲ್ಲಿ ಬರುವ ಸಿರಿವಾರ ಗ್ರಾಮದ ಕಡೆಮನೆ ರಾಮಣ್ಣನವರ ಮಗ ಶಿವಣ್ಣನ ಸ್ವಂತ ಜಮೀನಿನಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣ ಭೂಮಿ ಪೂಜೆಯನ್ನು ಮಾನ್ಯ ಶಾಸಕರು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತರಾದ ಅಣ್ಣ ನಾಗರಾಜ್ ರವರು, ಗೋವರ್ಧನ್ ರೆಡ್ಡಿ ರವರು, ಬಿ.ದುರುಗಣ್ಣ ,ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಸಿಂಧುವಾಳ ಗಾದಿಲಿಂಗನಗೌಡ, ಮಾಜಿ ಉಪ ಮೇಯರ್ ಬೆಣಕಲ್ ಬಸವರಾಜ ಗೌಡ ರವರು, ಮಹಾನಗರ ಪಾಲಿಕೆಯ ಸದಸ್ಯರಾದ ಕೆ.ಹೊನ್ನಪ್ಪ ರವರು ಕಾಂಗ್ರೆಸ್ ಮುಖಂಡರಾದ ಯರ್ರಗುಡಿ ಮುದಿ ಮಲ್ಲಯ್ಯ, ಶ್ರೀನಾಥ್, ಗೋನಾಳ್ ನಾಗಭೂಷಣ ಗೌಡ, ಹಗರಿ ಗೋವಿಂದ, ಬೆಣಕಲ್ ಟಿ.ಸುರೇಶ್, ಪಿಚ್ಚಪ್ಪನವರ ಶೇಖಲಿಂಗ, ಅಸುಂಡಿ ಗಾದಿಲಿಂಗಪ್ಪ, ಕೆ.ಪಂಪಣ್ಣ, ದೇವರಮನೆ ಶಿವಣ್ಣ, ತಳವಾರ್ ಸಂಕಯ್ಯ, ಹೊನ್ನೂರ ಸ್ವಾಮಿ, ಮಾಜಿ ಅಧ್ಯಕ್ಷರು ಬಾರ್ಕ ಲಿಂಗಪ್ಪ, ಗಣೇಶ್, ಕೆ.ರಮೇಶ್, ಗಾದಿಲಿಂಗಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರು ಶೇಖಣ್ಣ, ಉಪಾಧ್ಯಕ್ಷರು ಮಲ್ಲಮ್ಮ, ಗ್ರಾಮ ಪಂಚಾಯತಿ ಸದಸ್ಯರು ಕೆ.ಪಾರ್ವತಮ್ಮ, ದೊಡ್ಡ ವಂಡ್ರಮ್ಮ, ಓಬಳಮ್ಮ, ದಾನೇಶ್ವರಿ, ಪಿ.ದೊಡ್ಡ ಬಸಮ್ಮ, ಸಂಕಮ್ಮ, ಎಲ್ಲಮ್ಮ, ಮಾರಮ್ಮ, ಶಿಲ್ಪ, ಟಿ.ಪಂಪಣ್ಣ, ಡಿ.ಗಾದಿಲಿಂಗ, ವಿ.ದುರ್ಗಣ್ಣ, ವಿ.ಸುಧಾಕರ್, ರಮೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

0 Comments