Ticker

6/recent/ticker-posts

Ad Code

Responsive Advertisement

ಬಳ್ಳಾರಿ ಮಹಾನಗರ ಪಾಲಿಕೆಯಿಂದ ವಿವಿಧ ಸ್ಪರ್ಧೆಗಳು -ಪ್ರೀತಿ ಗೆಹ್ಲೋಟ್

ಬಳ್ಳಾರಿ,ಮೇ 07: ಬಳ್ಳಾರಿ ಮಹಾನಗರ ಪಾಲಿಕೆ ವತಿಯಿಂದ ‘ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ’ ಅಭಿಯಾನದಡಿ ‘ಪ್ರತಿಭೆ ನಿಮ್ಮದು ವೇದಿಕೆ ನಮ್ಮದು’ ಎಂಬ ಧ್ಯೇಯ ವಾಕ್ಯದಡಿ ನಗರದ ನಿವಾಸಿಗಳಿಗಾಗಿ ವಾಲಿಬಾಲ್, ಬ್ಯಾಡ್‍ಮಿಟನ್, ಥ್ರೋಬಾಲ್ ಮತ್ತು ಶಾಲಾ ಹಾಗೂ ಕಾಲೇಜ್ ವಿಧ್ಯಾರ್ಥಿಗಳಿಗೆ ಚೆಸ್, ಕೇರಮ್, ಬ್ಯಾಡ್‍ಮಿಟನ್ ಮತ್ತು ರಸಪ್ರಶ್ನೆ, ಭಾಷಣ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ಸ್ಪರ್ಧೆಗೂ ಪ್ರತ್ಯೇಕವಾಗಿ ಪ್ರಥಮ ಹಾಗೂ ದ್ವಿತೀಯ, ತೃತೀಯ ಬಹುಮಾನಗಳನ್ನು ನಗದು ರೂಪದಲ್ಲಿ ನೀಡಲಾಗುವುದು.

ಬಳ್ಳಾರಿ ನಗರದ ಆಸಕ್ತ ನಿವಾಸಿಗಳು ಅಥವಾ ವಿಧ್ಯಾರ್ಥಿಗಳು ಬಳ್ಳಾರಿ ನಗರದವರೆಂದು ಖಾತ್ರಿಪಡಿಸುವ ಯಾವುದಾದರೂ ಒಂದು ಗುರುತಿನ ಚೀಟಿ (ಕೆ.ವೈ.ಸಿ)ವಿಧ್ಯಾರ್ಥಿಗಳಾಗಿದ್ದಲ್ಲಿ ಸಂಬಂಧಪಟ್ಟ ಶಾಲಾ/ಕಾಲೇಜು ಮುಖ್ಯಸ್ಥರಿಂದ ದೃಢೀಕರಣ ಪತ್ರದೊಂದಿಗೆ ಮೇ 16ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಷರತ್ತು, ನಿಬಂಧನೆಗಳಿಗಾಗಿ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು/ಪಾಲಿಕೆ ಸೂಚನಾ ಫಲಕ, ಯುವಜನ ಮತ್ತು ಕ್ರೀಡೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಮತ್ತು ಕನ್ನಡ ಮತ್ತು ಸಂಸ್ಕøತ ಇಲಾಖೆ ಕಾರ್ಯಾಲಯದ ಸೂಚನಾಫಲಕ ಅಥವಾ www.bellarycity.gov.in ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.



 


Post a Comment

0 Comments

Ad Code

Responsive Advertisement