Ticker

6/recent/ticker-posts

Ad Code

Responsive Advertisement

ಬಳ್ಳಾರಿ: ನಗರ ಜೆಸ್ಕಾಂನಲ್ಲಿ ವಿದ್ಯುತ್ ಪರಿವರ್ತಕಗಳ ನಿರ್ವಹಣಾ ಅಭಿಯಾನ ಮೇ 20ರವರೆಗೆ

ಬಳ್ಳಾರಿ,ಮೇ 07: ಮುಂಗಾರು ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸಂಬಂಧಿ ಅವಘಡ ತಪ್ಪಿಸುವುದಕ್ಕಾಗಿ ರಾಜ್ಯಾದಂತ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರ ನಿರ್ದೇಶನದ ಮೇರೆಗೆ ಪರಿವರ್ತಕಗಳ ನಿರ್ವಹಣೆ ಅಭಿಯಾನವನ್ನು ಮೇ 05ರಿಂದ ಮೇ 20ರವರೆಗೆ ಬಳ್ಳಾರಿಯ ಕಾರ್ಯ ಮತ್ತು ಪಾಲನಾ ನಗರ ವಿಭಾಗ ಜೆಸ್ಕಾಂನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಗರ ವಿಭಾಗ ಜೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಳೆಗಾಲದಲ್ಲಿ ಅತಿಯಾದ ಗಾಳಿ, ಮಿಂಚು, ಸಿಡಿಲು ಮುಂತಾದ ಕಾರಣಗಳಿಂದ ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗುವ ಸಂಭವ ಇದ್ದು, ಬೇಸಿಗೆಯ ಕಾರಣದಿಂದ ಪರಿವರ್ತಕಗಳ ಮೇಲೆ ಅಧಿಕ ಲೋಡ್ ಬರುವುದರಿಂದ ಪರಿವರ್ತಕಗಳು ಹಾನಿಯಾಗುತ್ತವೆ. ಈ ಹಿನ್ನೆಲೆಯಲ್ಲಿ ಪರಿವರ್ತಕಗಳ ಪರಿಶೀಲನೆ ನಡೆಸಲು ಅಭಿಯಾನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪರಿವರ್ತಕಗಳ ಗುಣಮಟ,್ಟ ಸಂರಕ್ಷಣೆ, ವಿದ್ಯುತ್ ಅಡಚಣೆ ಕಡಿಮೆಗೊಳಿಸಲು ಹಾಗು ಸುರಕ್ಷತಾ ದೃಷ್ಟಿಯಿಂದ ಅವಶ್ಯಕ ನಿರ್ವಹಣೆ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಹಾಗು ನಿರ್ವಹಣಾ ಸಿಬ್ಬಂದಿಯವರು ಭಾಗವಹಿಸಿ ನಿತ್ಯ ಪರಿವರ್ತಕಗಳನ್ನು ಪರಿಶೀಲನೆ ಮಾಡಿ, ಅವುಗಳಲ್ಲಿ ಕಂಡುಬಂದ ದೋಷವನ್ನು ಸರಿದೂಗಿಸಲಾಗುತ್ತಿದೆ. ಈ ಅಭಿಯಾನದಲ್ಲಿ ಹೆಚ್ಚುವರಿ ಪರಿವರ್ತಕದ ಅವಶ್ಯಕತೆ ಎನಿಸಿದಲ್ಲಿ ಅದಕ್ಕೂ ಕೂಡ ಕ್ರಮ ಕೈಗೊಳ್ಳಲಾಗುತ್ತಿದೆ. 

ಪರಿವರ್ತಗಳ ರಿಪೇರಿಗೆ ಜೆಸ್ಕಾಂ ಇಲಾಖೆ ಪ್ರತಿವರ್ಷ ಸಾಕಷ್ಟು ಹಣ ವೆಚ್ಚ ಮಾಡುತ್ತಿದ್ದು, ನಿರ್ವಹಣೆ ಕೆಲಸವನ್ನು ಕಾಲ ಕಾಲಕ್ಕೆ ನಡೆಸಿದರೆ ರಿಪೇರಿ ವೆಚ್ಚ ತಗ್ಗಿಸಬಹುದು ಮತ್ತು ಈಗಾಗಲೇ ಬಳ್ಳಾರಿ ನಗರ ವ್ಯಾಪ್ತಿಯ 156 ಪರಿವರ್ತಕಗಳ ನಿರ್ವಹಣಾ ಕಾರ್ಯವನ್ನು ಸಂಪೂರ್ಣಗೊಳಿಸಲಾಗಿದ್ದು, ಮೇ 20ರವರಗೆ ಬಳ್ಳಾರಿ ನಗರದ ಎಲ್ಲಾ ಪರಿವರ್ತಕಳ ನಿರ್ವಹಣೆ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಅಭಿಯಾನದ ಮುಖ್ಯ ಉದ್ದೇಶವು  ವಿದ್ಯುತ್ ಅವಘಡÀ ತಪ್ಪಿಸುವುದು ಹಾಗೂ ಪರಿವರ್ತಗಳ  ವಿಫಲತೆಯನ್ನು ತಗ್ಗಿಸುವುದು ಆಗಿರುತ್ತದೆ. 

ಪ್ರತಿ ಪರಿವರ್ತಕದ ನಿರ್ವಹಣೆಗೆ 2ರಿಂದ 3 ಗಂಟೆಗಳ ಅವಶ್ಯಕತೆಯಿದ್ದು, ಈ ಸಂದರ್ಭದಲ್ಲಿ ಗ್ರಾಹಕರಿಗೆ ವಿದ್ಯುತ್ ಅಡಚಣೆಯಾಗಲಿದೆ.

ಆದ್ದರಿಂದ ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಬೇಕು ಎಂದು ಜೆಸ್ಕಾಂನ ಬಳ್ಳಾರಿ ನಗರದ ಅಧಿಕಾರಿಗಳು ಮನವಿ ಮಾಡಿರುತ್ತಾರೆ.





 


Post a Comment

0 Comments

Ad Code

Responsive Advertisement