Ticker

6/recent/ticker-posts

Ad Code

Responsive Advertisement

ಕೋಕೋ ಬೆಳೆಯಲು ಸುಕೋ ಬ್ಯಾಂಕಿನಿಂದ ಅಭಿಯಾನ

ಬಳ್ಳಾರಿ ಮೇ 12. ಕಳೆದ ಮೂರು  ವರ್ಷಗಳಿಂದ ಭತ್ತದ ಬೆಲೆ ಏರದೇ ಇರುವುದು, ಅದೇ ಸಮಯದಲ್ಲಿ ಬೆಳೆ ಸಂಬಂಧಿತ  ಖರ್ಚುಗಳು ಹೆಚ್ಚುತ್ತಿರುವುದರಿಂದ, ಭತ್ತದ ಕೃಷಿ, ರೈತರಿಗೆ ನಷ್ಟವನ್ನುಉಂಟು ಮಾಡುತ್ತಿದೆ. ರಾಸಾಯನಿಕ ಗೊಬ್ಬರಗಳ ಬಳಕೆ ಮತ್ತು ಬೆಲೆ ಎರಡೂಇನ್ನಷ್ಟುಏರಿಕೆಯಾಗಿವೆ, ಈ ಎಲ್ಲಾ ಹಿನ್ನೆಲೆಯಲ್ಲಿ ಉತ್ತರಕರ್ನಾಟಕದ ಪ್ರಮುಖ ಸಹಕಾರಿ ಬ್ಯಾಂಕ್‍ಆಗಿರುವ ಸುಕೋ ಬ್ಯಾಂಕ್  ಭತ್ತಕ್ಕೆ ಪರ್ಯಾಯವಾಗಿ ಒಂದಷ್ಟು ಕ್ಷೇತ್ರದಲ್ಲಿ ವಾಣಿಜ್ಯ ಮತ್ತು ಪ್ಲಾಂಟೇಷನ್ ಬೆಳೆಯಾದ ಕೋಕೋ ಬೆಳೆಯನ್ನು ಜನಪ್ರಿಯಗೊಳಿಸುವ ಅಭಿಯಾನತೆಗೆದುಕೊಂಡಿದೆ. 

ಇಪ್ಪತ್ತು ವರ್ಷಗಳ ಹಿಂದೆಯೇ ಈ ಭಾಗದ ಜೀವನಾಡಿಯಾದ ತುಂಗಭದ್ರಾ ಕಾಲುವೆ  ಹಲವು ಬಾರಿ ಒಡೆದಾಗ ತಕ್ಷಣಗದ್ದೆಯಲ್ಲಿರುವ ನೀರನ್ನು ಉಳಿಸಿಕೊಳ್ಳಲು ಬೇವಿನ ಎಣ್ಣೆಅಥವಾಯಾವುದೇಎಣ್ಣೆ ಸಿಂಪಡಿಸಿ ನೀರುಆವಿಯಾಗುವುದನ್ನುತಪ್ಪಿಸಲು ಸುಕೋ ಬ್ಯಾಂಕ್‍ಅಭಿಯಾನ ನಡೆಸಿತ್ತು. ಗದ್ದೆಗಳಲ್ಲಿ ಕೆರೆ ಮಾಡಿಸಲು, ರೈತರಜಮೀನಿನಲ್ಲಿಯೇಗೋದಾಮುಕಟ್ಟಲು  20 ವರ್ಷಗಳ ಹಿಂದೆಯೇ ಸಾಲದಯೋಜನೆ ರೂಪಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕಳೆದ ಹತ್ತಾರು ವರ್ಷಗಳಿಂದ ಇವು ಸರಕಾರದ ಕಾರ್ಯಕ್ರಮಗಳಾಗಿ ರೂಪುಗೊಂಡದ್ದು ಸುಕೋ ಬ್ಯಾಂಕಿನದೂರದೃಷ್ಟಿಗೆ ಸಾಕ್ಷಿಎನ್ನಬಹುದು.

ಕೋಕೋ ಮಲೆನಾಡಿನಲ್ಲಿಅಂತರ ಬೆಳೆಯಾಗಿ ಬೆಳೆಯುತ್ತಿರುವುದು ಸರ್ವೇ ಸಾಮಾನ್ಯ, ಅಂತಹ ಬೆಳೆಯನ್ನು ಬಿಸಿಲನಾಡಿನಲ್ಲಿ ಪ್ರಮುಖ ಬೆಳೆಯಾಗಿ ಕೃಷಿ ಮಾಡಲು ಸೂಚಿಸುವ ಮತ್ತುರೈತರನ್ನು ಪ್ರೇರೇಪಿಸುವ ದೊಡ್ಡ ಸಾಹಸದ ಕೆಲಸಕ್ಕೆ ಸುಕೋ ಬ್ಯಾಂಕ್ ಕೈ ಹಾಕಿದೆಎಂದು ಬ್ಯಾಂಕಿನಅಧ್ಯಕ್ಷ ಮೋಹಿತ ಮಸ್ಕಿ ತಿಳಿಸಿದ್ದಾರೆ.

ಈ ಅಭಿಯಾನ ಕೈಗೊಳ್ಳುವ ಮೊದಲು ಸಾಕಷ್ಟುಅಧ್ಯಯನ ಮತ್ತು ಸಿದ್ಧತೆ ಮಾಡಿಕೊಳ್ಳಲಾಗಿದೆ, ಆಸಕ್ತ ರೈತರಿಗೆಎಲ್ಲಾರೀತಿಯ ಮಾಹಿತಿ, ಈಗಾಗಲೇ ಪ್ರಯೋಗ ಮಾಡಿ ಯಶಸ್ವಿಯಾಗಿರುವ  ಕ್ಷೆತ್ರಗಳ  ಭೇಟಿ, ಕೋಕೋ ಸಸಿಗಳ ಪೆÇರೈಕೆ ನಂತರಅಗತ್ಯತಾಂತ್ರಿಕ ನೆರವು, ಮಾರುಕಟ್ಟೆಯ ಮಾಹಿತಿಯವರೆಗೆ  ಸುಕೋ ಬ್ಯಾಂಕ್  ಯೋಜನೆಗಳನ್ನು ರೂಪಿಸಿದೆ ಎಂದು ಸಹ ಅವರು ತಿಳಿಸಿದರು.  

ಕೋಕೋ ಬೆಳೆ:-

ಪ್ರಸ್ತುತ ನಮ್ಮದೇಶದ ಬೇಡಿಕೆಯ ಶೇಕಡಾ 30 ರಷ್ಟು ಮಾತ್ರ ಕೋಕೋ ದೇಶೀಯವಾಗಿ ಬೆಳೆಯಲಾಗುತ್ತಿದೆ.ಇದೆ ಸಮಯದಲ್ಲಿ ಪ್ರತಿವರ್ಷ  ಶೇಕಡಾ 10 ರಷ್ಟು ಬೇಡಿಕೆ ಹೆಚ್ಚುತ್ತಿದೆ. ಕೋಕೋ ಪ್ಲಾಂಟೇಷನ್ ಬೆಳೆಯಾದ್ದರಿಂದ ರೈತರಿಗೆ ಧೀರ್ಘಅವಧಿಯಆದಾಯತರಲಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಬಯಲು ಸೀಮೆಯಲ್ಲಿಯೇ  ಕೋಕೋವನ್ನು ಪ್ರಮುಖ ಬೆಳೆಯಾಗಿ ಬೆಳೆದು ಯಶಸ್ವಿಯಾದ ರೈತರಿದ್ದಾರೆ. ನಮ್ಮಕಲ್ಯಾಣಕರ್ನಾಟಕದಲ್ಲಿಇರುವμÉ್ಟೀತಾಪಮಾನದ,  ಪಕ್ಕದರಾಜ್ಯಆಂಧ್ರ ಪ್ರದೇಶದಲ್ಲಿಕೋಕೋವನ್ನುಅತ್ಯಂತಉತ್ತಮವಾಗಿ 1000 ಕ್ಕೂ ಹೆಚ್ಚು ಎಕರೆಯಲ್ಲಿ ಈಗಾಗಲೇ ಹಲವು ರೈತರು ಬೆಳೆದು ಯಶಸ್ವಿಯಾಗಿದ್ದಾರೆ. ಕೋಕೋ ಆಫ್ರಿಕಾದ ದೇಶಗಳಲ್ಲಿ ಕಾಡುಉತ್ಪನ್ನವಾಗಿದೆ ಮತ್ತು ಹಲವು ರೀತಿಯ ತಾಪಮಾನಗಳಲ್ಲಿ ಬೆಳೆಯುತ್ತಿದೆ.ಅದರಕೃಷಿಯನ್ನು  ನಮ್ಮದೇಶದಲ್ಲಿ ಮಲೆನಾಡಿನಲ್ಲಿಆರಂಭ ಮಾಡಿದ್ದರಿಂದಇದು ಮಲೆನಾಡಿನ ಬೆಳೆ ಎನ್ನುವಅಭಿಪ್ರಾಯಉಂಟಾಗಿದೆಅμÉ್ಟೀ, ಆದರೆ ಕೋಕೋ ಎಲ್ಲರೀತಿಯತಾಪಮಾನದಲ್ಲಿ ಬೆಳೆಯಬಲ್ಲದುಎಂದು ಸುಕೋ ಬ್ಯಾಂಕಿನ ಪ್ರಕಟಣೆ ತಿಳಿಸಿದೆ.


ರೈತರಿಗೆ ಮಾಹಿತಿ ಮತ್ತುಕ್ಷೇತ್ರ ಭೇಟಿ:- ಆಸಕ್ತ ರೈತರಿಗೆ ಮೊದಲ ಹಂತದಲ್ಲಿಜಾಲತಾಣದ ಮೂಲಕ ಮಾಹಿತಿ ಸಭೆ. ನಂತರ ಈಗಾಗಲೇ ಕೋಕೋ ಬೆಳೆದು ಯಶಸ್ವಿಯಾಗಿರುವ ಪಕ್ಕದರಾಜ್ಯದರೈತರ ಕ್ಷೇತ್ರಗಳಿಗೆ ಭೇಟಿಏರ್ಪಡಿಸಲಾಗುತ್ತದೆ.ಮುಂದಿನ ಹಂತದಲ್ಲಿ ವಿಷಯ ವಿಜ್ಞಾನಿಗಳೊಂದಿಗೆ ಮುಖಾಮುಖಿ ಸಭೆಏರ್ಪಡಿಸಲಾಗುತ್ತದೆ.ಹಾಗೆಯೇಕೇಂದ್ರ ಸರಕಾರದ ಸಹಾಯಧನ ಪಡೆದುರಿಯಾಯಿತಿದರದಲ್ಲಿಉತ್ತಮ ಸಸಿಗಳ ಪೆÇರಕೆಗೆ ಸಂಯೋಜನೆ ಮಾಡಲಾಗುತ್ತದೆ.ಮುಂದಿನ ಹಂತದಲ್ಲಿರೈತರ ಕ್ಷೇತ್ರಗಳಿಗೆ ವಿಷಯತಜ್ಞರ ಭೇಟಿ ಮತ್ತುಅಗತ್ಯತಾಂತ್ರಿಕ ನೆರವು ನೀಡಲು ಕೋಕೋ ಬೆಳೆಯ ಸಂಶೋಧನಾ ಕೇಂದ್ರಗಳ ವಿಜ್ಞಾನಿಗಳೊಂದಿಗೆ ಒಡಂಬಡಿಕೆ ಮಾಡಲಾಗುತ್ತದೆ.

ಸುಕೋ ಬ್ಯಾಂಕ್‍ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಸರಕಾರದ ಕೋಕೋ ನಿರ್ದೇಶನಾಲಯ, ದೇಶದ ಪ್ಲಾಂಟೇಷನ್ ಬೆಳೆಗಳ ಅಧ್ಯಯನ ಸಂಸ್ಥೆಯಾದಕೇಂದ್ರೀಯ ಪ್ಲಾಂಟೇಶನ ಬೆಳೆಗಳ ಸಂಶೋಧನಾಕೇಂದ್ರಕಾಸರಗೋಡು , ರಾಜ್ಯದತೋಟಗಾರಿಕಾಇಲಾಖೆಯ ಪ್ಲಾಂಟೇಷನ್ ವಿಭಾಗ ಹಾಗೂ ಓಟಿಟಿ ಮೂಲಕ ಪ್ರಸಾರವಾಗುತ್ತಿರುವ ಫಾರಂ ಟಿವಿ ಗಳ ಜೊತೆ ಹಲವು ಸುತ್ತಿನಚರ್ಚೆ ಮತ್ತು ಸಭೆಗಳನ್ನು ಮಾಡಿಉತ್ತರಕರ್ನಾಟಕಅದರಲ್ಲೂಕಲ್ಯಾಣಕರ್ನಾಟಕ ಭಾಗದಲ್ಲಿ ಭತ್ತಕ್ಕೆ ಪರ್ಯಾಯವಾಗಿ ಕೋಕೋ ಪೆÇ್ರೀತ್ಸಾಹಿಸುವ ಕಾರ್ಯಕ್ರಮವನ್ನುರೂಪಿಸಲಾಗಿದೆ. ಸುಕೋ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರು ಮತ್ತು ವಿಧಾನ ಪರಿಷತ್ತಿನ ಹಿಂದಿನ ಸದಸ್ಯರುಆದ ಮನೋಹರ ಮಸ್ಕಿಯವರು ಹಲವು ತಿಂಗಳುಗಳಿಂದ ಈ ಬಗ್ಗೆ ಕೆಲಸ ಮಾಡುತ್ತಿದ್ದಾರೆ.

19 ರಂದು ಮೊದಲ ಸಭೆ ಹಾಗೂ  23ಕ್ಕೆಕ್ಷೇತ್ರ ಭೇಟಿ:-

ಇದೇ ತಿಂಗಳ 19 ರಂದು ಆಸಕ್ತ ರೈತರ ಮೊದಲ ಆನ್ ಲೈನ್ ಸಭೆಯನ್ನು ಮೇಲೆ ತಿಳಿಸಿದ ಎಲ್ಲಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿಜ್ಞಾನಿಗಳೊಂದಿಗೆ ಏರ್ಪಡಿಸಲಾಗಿದೆ, ದಿನಾಂಕ 23.5.2022 ರಂದುಆಂಧ್ರ ಪ್ರದೇಶದಲ್ಲಿ ಕೋಕೋ ಬೆಳೆದ ರೈತರ ಕ್ಷೇತ್ರಗಳಿಗೆ ಭೇಟಿಏರ್ಪಡಿಸಲಾಗಿದೆ, ಈ ಭೇಟಿಗೆಕೇಂದ್ರ ಸರಕಾರದ ಕೋಕೋ ನಿರ್ದೇಶನಾಲಯಒಂದಷ್ಟುಆರ್ಥಿಕ ನೆರವು ನೀಡಲು ಸಹ ಒಪ್ಪಿಕೊಂಡಿದೆ. ಫಾರ್ಮ್ ಟಿವಿ ರೈತರ ಈ ಭೇಟಿಯನ್ನುದಾಖಲಿಸಲು ಮತ್ತುಅವರ ಈ ಹಿಂದಿನ ಕ್ಷೇತ್ರ ಭೇಟಿಯ ಮಾಹಿತಿ ಹಂಚಿಕೊಳ್ಳುತ್ತದೆ. 

ಆಸಕ್ತ ರೈತರುತಮ್ಮ ಹತ್ತಿರದ ಸುಕೋ ಬ್ಯಾಂಕಿನಲ್ಲಿ ದಿನಾಂಕ 18 ರೊಳಗೆ ತಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಹೆಸರು ನೋಂದಾಯಿಸಿದಲ್ಲಿ ಈ ಸಭೆಯಲ್ಲಿತಮ್ಮ ಮೊಬೈಲ್ ಮೂಲಕ ಪಾಲ್ಗೊಳ್ಳಬಹುದಾಗಿದೆ. ಅಥವಾ ಸುಕೋ ಬ್ಯಾಂಕಿನಕಾಲ್ ಸೆಂಟರಿನ 1800 121 5560 ಸಂಖ್ಯೆಗೆ ಬೆಳಿಗ್ಗೆ 10 ರಿಂದ ಸಂಜೆ6  ಸಮಯದಲ್ಲಿ (ರಜಾ ದಿನಗಳನ್ನು ಹೊರತುಪಡಿಸಿ) ರೈತರುತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದುಎಂದು ಸುಕೋ ಬ್ಯಾಂಕಿನ ಪ್ರಕಟಣೆಯಲ್ಲಿ ತಿಳಿಸಿದೆ. 




 


Post a Comment

0 Comments

Ad Code

Responsive Advertisement