ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಚಾಕಲೇಲು ಗ್ರಾಮ ಪಂಚಾಯಿತಿಯ ಅಂಚೆ ಕಚೇರಿಯ ಕರ್ಮಕಾಂಡ. ಚಾಕವೇಲು ಅಂಚೆ ಕಚೇರಿಯ ಸಿಬ್ಬಂದಿ ವರ್ಗ ಹಿರಿಯ ನಾಗರೀಕರಿಕಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಹಿರಿಯ ನಾಗರಿಕರು ಅಂದರೆ ಪಿಂಚಣಿದಾರರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ರಾಮಕೃಷ್ಣ ಸುಮಾರು ಆರೋಪಗಳನ್ನು ಮಾಡಿರುತ್ತಾರೆ.
ಅಂದರೆ ಪಾಸ್ ಪುಸ್ತಕದಲ್ಲಿ ಲೆಕ್ಕಗಳು ಸರಿಯಾಗಿ ಬರೆದಿರುತ್ತಾರೆ ಆದರೆ ಅಲ್ಲಿ ಸಿಬ್ಬಂದಿ ನಮ್ಮಗಳಿಗೆ ಸರಿಯಾಗಿ ಹಣ ಸಂದಾಯ ಮಾಡುವುದಿಲ್ಲ ಮತ್ತು ಮಾಡಿದರು ಅದಕ್ಕೆ ಲಂಚ ಪಡೆಯುತ್ತಾನರೆ ಪಿಂಚಿಣಿ ದಾರರಿಗೆ ಇದೇ ಊರಲ್ಲಿ ಇದ್ದರೂ ಮನೆ ಬಾಗಿಲಿಗೆ ತಲುಪಿಸುವುದು ಕಷ್ಟ ಆಗಿರುತ್ತದೆ.
ನಾವುಗಳು ನಡೆಯಕ್ಕೆ ಆಗುವುದಿಲ್ಲವೆಂದರೂ ಕೋಲು ಹಿಡಿದು ಯಾರನ್ನಾದರೂ ಸಹಾಯ ಪಡೆದು ಅಂಚೆ ಕಚೇರಿಗೆ ಹೋಗಿ ಪಿಂಚಣಿ ಪಡೆಯಬೇಕಾಗುತ್ತದೆ ಸರ್ಕಾರಿ ಕಾನೂನುಗಳು ಗಾಳಿಗೆ ತೂರಲಾಗಿದೆ ಮತ್ತು ಹಳ್ಳಿಯ ಜನತೆ ಆಟೋಗಳಲ್ಲಿ ಬಂದು ಪಿಂಚಣಿ ಪಡೆಯಬೇಕಾಗಿದೆ ಯಾವುದೇ ಹಳ್ಳಿಗೊ ಅಂಜೇ ಕಚೇರಿಯ ಸಿಬ್ಬಂದಿಗಳು ಬರುವುದಿಲ್ಲ ಮತ್ತು ಮೂರು ತಿಂಗಳ ದುಡ್ಡನ್ನು ಬರೆದು ಒಂದು ತಿಂಗಳು ಮಾತ್ರ ಬಂದಿದೆ ಎಂದು ಒಂದು ತಿಂಗಳದು ಮಾತ್ರ ಪಾವತಿ ಮಾಡಿ ಇನ್ನು ಎರಡು ತಿಂಗಳದುಗುಳುಂ ಮಾಡುತ್ತಾರೆ ನಮಗೆ ಸಂಧ್ಯಾ ಕಾಲದಲ್ಲಿ ಸರ್ಕಾರಗಳು ಮಕ್ಕಳಿಗಿಂತ ಹೆಚ್ಚಾಗಿ ಒಂದಿಷ್ಟು ಹಣ ಪಿಂಚಣಿ ಮೂಲಕ ಕೊಡುತ್ತಿದೆ ಆದರೆ ಅದು ಸರಿಯಾಗಿ ತಲುಪುತ್ತಿಲ್ಲ ಯಾವ ಜನಪ್ರತಿನಿಧಿಗಳು ನಮ್ಮಗಳ ಕಷ್ಟಗಳ ಬಗ್ಗೆ ಗಮನಹರಿಸುತ್ತಿಲ್ಲವೆಂದು ಅಳಲನ್ನು ತೋಡಿಕೊಂಡಿರುತ್ತಾರೆ ನಾವು ಹಿರಿಯ ನಾಗರಿಕರು ಅಂಗವಿಕಲರು ಸಮಾಜ ಅರಿಯಬೇಕು ಹಿರಿಯ ಅಧಿಕಾರಿಗಳು ಇದನ್ನು ಗಮನಹರಿಸಬೇಕು ನಮ್ಮ ಪಾಸ್ ಪುಸ್ತಕಗಳು ಸಿಬ್ಬಂದಿ ಹತ್ತಿರವೇ ಇಟ್ಟುಕೊಂಡಿರುವುದು ಸರಿಯಲ್ಲ ನಮ್ಮ ಪಾಸ್ ಪುಸ್ತಕಗಳು ನಮಗೆ ಕೊಡಿಸಬೇಕೆಂದು ಅವರ ಕೋರಿಕೆಯಾಗಿದೆ.
ಈ ಕರ್ಮಕಾಂಡವನ್ನು ಮಾನ್ಯ ಕೋಲಾರ ಜಿಲ್ಲಾ ಸಂಸದರಾದ ಮುನಿಸ್ವಾಮಿ ರವರಿಗೆ ಕೇಳಿಕೊಳ್ಳುತ್ತೇವೆ.
ಕೇಂದ್ರ ಕಚೇರಿ ಕೋಲಾರದಲ್ಲಿದೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ತಾವು ಚಾಟಿ ಬೀಸಬೇಕೆಂದು ನಮ್ಮ ಕೋರಿಕೆಯಾಗಿದೆ ಇದರ ಬಗ್ಗೆ ವಾರ್ಡಿನ ಸದಸ್ಯರು ಆದ ಸರಸ್ವತಮ್ಮ ಮತ್ತು ಯುವ ಮುಖಂಡರಾದ ಪ್ರಕಾಶ್ ರೆಡ್ಡಿ ಮತ್ತು ಪಂಚಾಯಿತಿ ಅಧ್ಯಕ್ಷರಾದ ವೆಂಕಟರೆಡ್ಡಿರವರು ಗಮನಹರಿಸಬೇಕೆನ್ನುವುದೇ ನಮ್ಮಗಳ ಎಲ್ಲರ ಒಕ್ಕೂರಿನ ಅಭಿಪ್ರಾಯವಾಗಿರುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡಿರುತ್ತಾರೆ.
0 Comments