Ticker

6/recent/ticker-posts

Ad Code

Responsive Advertisement

ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಜಯಂತಿ ಭಕ್ತಿಯಿಂದ ಆಚರಣೆ

 ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸ ತಾಲೂಕಾದ ಚೇಳೂರಿನ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಜಯಂತಿಯ ಪ್ರಯುಕ್ತ ಮಹಿಳಾ ಮಣಿಗಳಾದ ಶ್ರೀ ಕನ್ಯಕಾ ಮಹಿಳಾ ಮಂಡಳಿ ವತಿಯಿಂದ ದಿನಾಂಕ:-11/05/2022  ರಂದು ಸುಪ್ರಭಾತ ಸೇವೆ, ಗಂಗೆ ಪೂಜೆ, ಮಹಾಸಂಕಲ್ಪ, ಶ್ರೀವಾಸವಿಅಮ್ಮನವರಿಗೆ ವಿಶೇಷ ಫಲವಂಚಾಮೃತ ಅಭಿಷೇಕ ಮಹಾ ಗಣಪತಿ ಪೂಜೆ, ಕಳಶ ಸ್ಥಾಪನೆ, ಮಹಾಗಣಪತಿ ಹೋಮ, ಶ್ರೀ ಆದಿತ್ಯ ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪರಿವಾರ ದೇವತೆಗಳ ಸಮೇತ ಶ್ರೀಕನ್ಯಕಾ ಪರಮೇಶ್ವರಿ ಹೋಮ ಪೂರ್ಣಾಹುತಿ ಏರ್ಪಡಿಸಲಾಗಿತ್ತು.








 ಊರಿನ 108 ಹೆಣ್ಣು ಮಕ್ಕಳಿಗೆ ಮಡಲಕ್ಕಿ ತುಂಬುವ ಕಾರ್ಯಕ್ರಮ 48 ಕನ್ಯಯರಿಗೆ ಕನ್ನಿಕಾ ಪೂಜೆ ಮತ್ತು ಗಂಡು ಮಕ್ಕಳಿಗೆ ವಟು ಪೂಜೆ ಬ್ರಾಹ್ಮಣ ದಂಪತಿಯರಿಗೆ ದಂಪತಿ ಪೂಜೆ ಬ್ರಾಹ್ಮಣ ಮುತ್ತೈದೆಯರಿಗೆ ಸುಹಾಸಿನಿ ಪೂಜೆ ಕಾರ್ಯಕ್ರಮಗಳೊಂದಿಗೆ ವಿಗ್ರಹ ಹರಾಜು ಕಾರ್ಯ ಮಹಾಬಲಿ ಕೂಷ್ಮಂಡ ಚೇದನ ವಾಸವಿದೇವಿ ಹಾಗೂ ಪರಿವಾರ ದೇವತೆಗಳಿಗೆ ಅಷ್ಟೋತ್ತರ ದೂಪ ದೀಪ ಮಹಾ ನೈವೇದ್ಯ ಅಷ್ಟಾವಧಾನ ಸೇವೆ ಮಹಾ ಮಂಗಳಹಾರತಿ ತೀರ್ಥ ಪ್ರಸಾದ ವಿನಿಯೋಗ ಮತ್ತೆ ಸಂಜೆ ಪಟ್ಟಣದ ರಾಜಬೀದಿಗಳಲ್ಲಿ ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ದೇವಿಯ ಹೂವಿನ ಪಲ್ಲಕ್ಕಿ ಮೆರವಣಿಗೆ ಯೊಂದಿಗೆ ದೇವಿಯ ಉತ್ಸವ ದಲ್ಲಿ ವೀರಗಾಸೆ ನೃತ್ಯಗಳೊಂದಿಗೆ ಎಲ್ಲಾ ಕುಲಪಾಂಧವರಾದ ಭಕ್ತಾದಿಗಳು ದೇವಿಯ ನಾಮಾಂಕಿತ ಪದಗಳು ಹಾಗೂ ಹಾಡುಗಳನ್ನು ಹೇಳುತ್ತಾ ದೇವಿಗೆ ಬೋಪರಾಕ್ ಹೇಳಿರುತ್ತಾರೆ. 

ದಿನಾಂಕ:-11/05/2022 ರಂದು ರಾಜ್ಯದಲ್ಲೇ ಮೊಟ್ಟ ಮೊದಲನೆಯ ಬಾರಿಗೆ ನಮ್ಮ ಹಿಂದೂ ಸಂಪ್ರದಾಯ ಸನಾತನ ಧರ್ಮದಂತೆ ಪ್ರಧಾನ ಅರ್ಚಕರಾದ ವೇದ ಬ್ರಹ್ಮ ಶ್ರೀ ಮುರುಳಿ ರಾವ್ ಶರ್ಮ ರವರ ಮಾರ್ಗನಾದರ್ಶನದಲ್ಲಿ ತುಂಬಾ ವಿಜೃಂಭಣೆಯಿಂದ ಆಚರಿಸಲಾಯಿತು ಹಾಗೂ ಆರ್ಯವೈಶ್ಯ ಮಹಾಸಭೆಗೆ ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ಆಯ್ಕೆಯಾದ ಶ್ರೀಯುತ ಸುಬ್ಬ ರಾಯ ಶೆಟ್ಟಿರವರಿಗೆ T.K. ವೆಂಕಟೇಶ್ ರವರಿಂದ ಸನ್ಮಾನ ಮಾಡಿ ಎಲ್ಲಾ ಆರ್ಯ ವೈಶ್ಯ ಕುಲ ಜನಾಂಗೀಯ ಭಕ್ತಾದಿಗಳು ಸ್ವಯಂ ಪ್ರೇರಿತವಾಗಿ ತಮ್ಮ ವಹಿವಾಟನ್ನು ಸ್ಥಗಿತಗೊಳಿಸಿ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ದೇವಿಯ ಕೃಪೆಗೆ ಪಾತ್ರರಾಗಿರುತ್ತಾರೆ. 

 ದೇವಿಯ ಹಾರವನ್ನು ತೂಗು ಹಾಕಿರುತ್ತಾರೆ. ಹಾಗೂ ದಿನಾಂಕ:-12/05/2022 ರಂದು ಗ್ರಾಮ ದೇವತೆ ಚೌಡೇಶ್ವರಿ ಅಮ್ಮನವರನ್ನು ವಾಸವೀ ದೇವಾಲಯಕ್ಕೆ ಕರೆ ತಂದು ಅಮ್ಮನವರಿಗೆ ಪಂಚಾಮೃತ ಅಭಿಷೇಕದೊಂದಿಗೆ ಮಾಡಲಕ್ಕಿ ಸಮರ್ಪಿಸಿರುತ್ತಾರೆ ಹಾಗೂ ವಾಸವಿ ಅಮ್ಮನವರಿಗೆ ಉಯ್ಯಾಲೋತ್ಸವ ಲಲಿತಾ ಕುಂಕುಮ ಸಹಸ್ರ ನಾಮರ್ಚನೆ ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಮಾಡಿರುತ್ತಾರೆ. 

ಈ ಕಾರ್ಯಕ್ರಮಕ್ಕೆ ಎಲ್ಲಾ ಕುಲಬಾಂಧವರು ಸುಮಾರು ದೂರದಿಂದ ತಮ್ಮ ಸ್ವಂತ ಊರಾದ ಚೇಳೂರಿಗೆ ಬಂದು ಶರ್ದಾ ಭಕ್ತಿಯಿಂದ ಪೂಜಾ ಕೈಂಕರ್ಯಗಳನ್ನು ಮುಗಿಸಿ ದೇವಿಯ ಕೃಪೆಗೆ ಪಾತ್ರರಾಗಿರುತ್ತಾರೆ ಎಂದು ಚೇಳೂರಿನ ಶ್ರೀ ಕನ್ಯಕಾ ಮಹಿಳಾ ಮಂಡಳಿ ಪದಾಧಿಕಾರಿಗಳಾದ T.ಗೀತಾ ವೆಂಕಟೇಶ್ ಅಧ್ಯಕ್ಷರು T.A. ಆದಿಲಕ್ಷ್ಮಿ ಉಪಾಧ್ಯಕ್ಷರು ರೇಖಾ ಬಾಲಾಜಿ ಕಾರ್ಯದರ್ಶಿಗಳು T. ಲಾವಣ್ಯ ಕೃಷ್ಣಮೂರ್ತಿ ಖಜಾಂಜಿಗಳು. ಕೋಮಲ ಭಾನುಪ್ರಕಾಶ್  ಸಹ ಕಾರ್ಯದರ್ಶಿಗಳು ಎಲ್ಲರೂ ಸೇರಿ ಕಾರ್ಯಕ್ರಮದ ಬಗ್ಗೆ ಸವಿಸ್ತಾರವಾಗಿ ಪತ್ರಿಕಾ ಹೇಳಿಕೆ ನೀಡಿ ರುತ್ತಾರೆ.

Post a Comment

0 Comments

Ad Code

Responsive Advertisement